ಬೆಂಗಳೂರು: ಓಲಾ ಎಲೆಕ್ಟ್ರಿಕ್, ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವೆಹಿಕಲ್ (ಇವಿಗಳು) ಕಂಪನಿಯು EndICEAge ಮಿಷನ್ ಅನ್ನು ಮತ್ತಷ್ಟು ವೇಗಗೊಳಿಸಲು 'ಡಿಸೆಂಬರ್ ಟು ರಿಮೆಂಬರ್' ಅಭಿಯಾನವನ್ನು ಘೋಷಿಸಿದೆ. ಡಿಸೆಂಬರ್ 3 ರಿಂದ ಈ ಅಭಿಯಾನ ಆರಂಭವಾಗಲಿದೆ. ಇದರ ಅಡಿಯಲ್ಲಿ, ಹೊಸ ಎಸ್1 ಎಕ್ಸ್ ಪ್ಲಸ್ ರೂ.20,000 ಗಳ ರಿಯಾಯಿತಿಯೊಂದಿಗೆ ಕೇವಲ ರೂ.89, 999ಕ್ಕೆ ಸಿಗಲಿದೆ , ಹೊಸ ಬೆಲೆಯೊಂದಿಗೆ ಇದು ಅತ್ಯಂತ ಕೈಗೆಟುಕುವ ದ್ವಿಚಕ್ರ ಎಲೆಕ್ಟ್ರಿಕ್ ಸ್ಕೂಟರ್ ಆಗಿರಲಿದೆ. . (Business News In Kannada)


COMMERCIAL BREAK
SCROLL TO CONTINUE READING

ವೈಶಿಷ್ಟ್ಯಗಳು
ಎಸ್1 ಎಕ್ಸ್ ಹೈ ಕ್ವಾಲಿಟಿ ಪರ್ಫಾರ್ಮೆನ್ಸ್, ಅಡ್ವಾನ್ಸ್ ಟೆಕ್ ವೈಶಿಷ್ಟ್ಯಗಳು ಹಾಗೂ ಅತ್ಯುತ್ತಮ ರೈಡ್ ಕ್ವಾಲಿಟಿಯನ್ನು ನೀಡುತ್ತದೆ. ಇದು 3ಕೆಡಬಲ್ಯುಹೆಚ್ ಬ್ಯಾಟರಿ ಒಳಗೊಂಡಿದ್ದು, 151 ಕಿ.ಮೀ ಪ್ರಮಾಣಿಕೃತ್ ರೆಂಜ್ ನೀಡುತ್ತದೆ. ಎಸ್1 ಎಕ್ಸ್ ಪ್ಲಸ್ ನಲ್ಲಿ 6ಕೆಡಬಲ್ಯುಹೆಚ್ ಬ್ಯಾಟರಿ ಮೋಟರ್ ನೀಡಲಾಗಿದ್ದು, ಇದು 3.3 ಸೆಕೆಂಡ್ ನಲ್ಲಿ 0-40 ಕಿಮಿ/ಗಂ ವೇಗವನ್ನು ಪಡೆದುಕೊಳ್ಳಬಲ್ಲದು. ಇದರ ಗರಿಷ್ಠ ವೇಗ 90 ಕಿ.ಮೀ/ಗಂ ಯಾಗಿದೆ.


ಇದನ್ನೂ ಓದಿ-ನೀವೂ ಸಿನಿಪ್ರಿಯರೆ? ಈ ಐದು ಕಾರ್ಡ್ ಬಳಸಿ ಉಚಿತ ಟಿಕೆಟ್, ಕ್ಯಾಶ್ಬ್ಯಾಕ್ ಹಾಗೂ ಭಾರಿ ಡಿಸ್ಕೌಂಟ್ ಪಡೆಯಿರಿ!


ಹಣಕಾಸು ಕೊಡುಗೆಗಳು
S1 ಅನ್ನು ಖರೀದಿಸಲು ಗ್ರಾಹಕರು ಆಯ್ದ ಕ್ರೆಡಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ EMI ಗಳ ಮೇಲೆ ₹5,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಹಣಕಾಸು ಕೊಡುಗೆಗಳು  ಶೂನ್ಯ ಡೌನ್‌ಪೇಮೆಂಟ್, ಶೂನ್ಯ ಸಂಸ್ಕರಣಾ ಶುಲ್ಕಗಳು ಮತ್ತು 6.99% ರಷ್ಟು ಕಡಿಮೆ ಬಡ್ಡಿದರವನ್ನು ಒಳಗೊಂಡಿವೆ. ಹೀಗಾಗಿ ಎಸ್1 ಎಕ್ಸ್ ಪ್ಲಸ್ ನ ಒಟ್ಟು ವೆಚ್ಚ ಹಾಗೂ ಯಾವುದು ಕಡಿಮೆ ಅದು ಇದರ ಸಂಭಾವ್ಯ ಖರೀದಿದಾರರಿಗೆ ಮತ್ತಷ್ಟು ಆಕರ್ಷಕವಾಗಲಿದೆ. 


ಇದನ್ನೂ ಓದಿ-ಜೀವನದಲ್ಲಿ ಕೋಟ್ಯಾಧಿಪತಿಯಾಗಲು ಇಲ್ಲಿದೆ ಒಂದು ವ್ಯಾಪಾರ ಪರಿಕಲ್ಪನೆ


ಓಲಾ ಇತ್ತೀಚೆಗೆ ತನ್ನ S1 ಪೋರ್ಟ್‌ಫೋಲಿಯೊವನ್ನು ಐದು ಸ್ಕೂಟರ್‌ಗಳಿಗೆ ವಿಸ್ತರಿಸಿದೆ. S1 Pro ಬೆಲೆ ₹1,47,499 ಆಗಿದ್ದರೆ, S1 ಏರ್ ₹1,19,999ಕ್ಕೆ ಲಭ್ಯವಿದೆ. S1 ಗಾಗಿ ಕಾಯ್ದಿರಿಸುವಿಕೆ ವಿಂಡೋ S1 ಎಕ್ಸ್ (3ಕೆಡಬಲ್ಯುಹೆಚ್) ಹಾಗೂ ಎಸ್ 1 ಎಕ್ಸ್ (2ಕೆಡಬಲ್ಯುಹೆಚ್)ಗಾಗಿ ಕೇವಲ ರೂ.999 ರಲ್ಲಿ ತೆರೆದುಕೊಂಡಿವೆ. S1 ಎಕ್ಸ್ (3ಕೆಡಬಲ್ಯುಹೆಚ್) ಹಾಗೂ  ಎಸ್ 1 ಎಕ್ಸ್ (2ಕೆಡಬಲ್ಯುಹೆಚ್) ಬೆಲೆಗಳು ಕ್ರಮವಾಗಿ 99,999ರೂ. ಹಾಗೂ 89,000 ರೂ.ಗಳಾಗಿರಲಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ