ಬೆಂಗಳೂರು : ನೀವು ಕೂಡಾ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ಪಾವತಿಸುತ್ತಿದ್ದರೆ, ಈ ಸುದ್ದಿ ನೆಮ್ಮದಿ ನೀಡಲಿದೆ.  ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಇತ್ತೀಚಿನ ನಿರ್ಧಾರದ ಪ್ರಕಾರ, ರುಪೇ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ 2,000 ರೂ.ವರೆಗಿನ ವಹಿವಾಟುಗಳಿಗೆ ಯುಪಿಐನಲ್ಲಿ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆರ್‌ಬಿಐ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕುರಿತು ಸೂಚನೆಗಳನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಈ ಸುತ್ತೋಲೆಯ ಆದೇಶವು ಅಕ್ಟೋಬರ್ 4 ರಿಂದ ಜಾರಿಗೆ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ರುಪೇ ಕ್ರೆಡಿಟ್ ಕಾರ್ಡ್ ಚಲಾವಣೆಯಲ್ಲಿದೆ. ದೇಶದ ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಇದರೊಂದಿಗೆ ಸಂಪರ್ಕ ಹೊಂದಿವೆ. ಆರ್‌ಬಿಐ ಮಂಗಳವಾರ ಅಂದರೆ ಅಕ್ಟೋಬರ್ 4 ರಂದು  ಹೊರಡಿಸಿರುವ ಸುತ್ತೋಲೆಯಲ್ಲಿ, 'ಆ್ಯಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವ ಮತ್ತು ಯುಪಿಐ ಪಿನ್ ರಚಿಸುವ ಪ್ರಕ್ರಿಯೆ ಮತ್ತು ಎಲ್ಲಾ ರೀತಿಯ ವಹಿವಾಟುಗಳಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಸಕ್ಷಮಗೊಳಿಸಲು ಗ್ರಾಹಕರ ಒಪ್ಪಿಗೆಯ ಅಗತ್ಯವಿದೆ ಎಂದು ಹೇಳಿದೆ.


ಇದನ್ನೂ ಓದಿ : Best Mileage Cars: 35 ಕಿ.ಮೀ ವರೆಗೆ ಮೈಲೇಜ್ ನೀಡುವ ಈ ಕಾರು ಖರೀದಿಸಿದರೆ ಪೆಟ್ರೋಲ್ ದರ ಏರಿಕೆಯ ಚಿಂತೆಯೂ ಇರುವುದಿಲ್ಲ


ಅಂತರರಾಷ್ಟ್ರೀಯ ವಹಿವಾಟುಗಳಿಗಾಗಿ ಅಪ್ಲಿಕೇಶನ್‌ನ ಅಸ್ತಿತ್ವದಲ್ಲಿರುವ ಪ್ರಕ್ರಿಯೆಯು ಕ್ರೆಡಿಟ್ ಕಾರ್ಡ್‌ಗಳಿಗೂ ಅನ್ವಯಿಸುತ್ತದೆ ಎಂದು NPCI ಹೇಳಿದೆ. 2,000 ಅಥವಾ ಅದಕ್ಕಿಂತ ಕಡಿಮೆ ಮೊತ್ತದ ವಹಿವಾಟಿಗೆ  ಶೂನ್ಯ ವ್ಯಾಪಾರಿ ರಿಯಾಯಿತಿ ದರ ಅನ್ವಯವಾಗುತ್ತದೆ ಎಂದು ಅದು ಹೇಳಿದೆ.


ಆರ್‌ಬಿಐ ನೀಡಿದ ಮಾಹಿತಿ ಪ್ರಕಾರ, ಸುತ್ತೋಲೆ ಬಿಡುಗಡೆಯಾದ ದಿನಾಂಕದಿಂದಲೇ ಈ ನೀತಿ ಜಾರಿಗೆ ಬಂದಿದೆ.  ಅಂದರೆ ಅಕ್ಟೋಬರ್ 4 ರಿಂದ ಈ ನಿಯಮ ಜಾರಿಯಲ್ಲಿದೆ.


ಇದನ್ನೂ ಓದಿ : SBI ಅಥವಾ Post Office ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ಯಾವುದರಲ್ಲಿ ಬೇಗ ಹಣ ಡಬಲ್ ಆಗುತ್ತದೆ?


ಯುಪಿಐನೊಂದಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಲಿಂಕ್ ಮಾಡುವ ಉದ್ದೇಶವು ಗ್ರಾಹಕರಿಗೆ ಪಾವತಿ ಆಯ್ಕೆಗಳ ವ್ಯಾಪಕ ಆಯ್ಕೆಯನ್ನು ಒದಗಿಸುವುದು ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ ರವಿಶಂಕರ್ ಅವರು ಈ ಹಿಂದೆ ಹೇಳಿದ್ದರು. ಪ್ರಸ್ತುತ UPI ಅನ್ನು ಡೆಬಿಟ್ ಕಾರ್ಡ್‌ಗಳ ಮೂಲಕ ಉಳಿತಾಯ ಖಾತೆಗಳು ಅಥವಾ ಚಾಲ್ತಿ ಖಾತೆಗಳಿಗೆ ಲಿಂಕ್ ಮಾಡಲಾಗಿದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.