ಬೆಂಗಳೂರು: ದಸರಾ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್ ನೀಡಿರುವ ರೈಲ್ವೆ ಇಲ್ಕಾಹೆ ದಸರಾ ಹಬ್ಬದ ಪ್ರಯುಕ್ತ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆಗೆ ತಯಾರಿ ನಡೆಸಿದೆ. 


COMMERCIAL BREAK
SCROLL TO CONTINUE READING

ನವರಾತ್ರಿ, ದಸರಾ ಸಂದರ್ಭದಲ್ಲಿ ದೂರದೂರುಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳ ಜೋಡಣೆಗೆ ಮುಂದಾಗಿರುವುದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. 


ಯಾವ್ಯಾವ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಜೋಡಣೆ ಇಲ್ಲಿದೆ ವಿವರ:-
9 ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲು ನಿರ್ಧರಿಸಿರುವ ರೈಲ್ವೆ ಇಲಾಖೆ, 2 ರೈಲಿಗೆ ತಲಾ ಎರಡು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ಹಾಗೂ 18 ರೈಲುಗಳಿಗೆ ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿಗಳ ಅಳವಡಿಕೆಸಲು ಸಜ್ಜಾಗಿದೆ. 


ಇದನ್ನೂ ಓದಿ- Travel Insurance: 1 ರೂಪಾಯಿ ಖರ್ಚಿಲ್ಲದೆ ಪಡೆಯಿರಿ ₹ 10,00,000 ವರೆಗಿನ ವಿಮೆ


9 ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಣೆ:- 
1. ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್ಪ್ರೆಸ್ ರೈಲಿಗೆ ಅಕ್ಟೋಬರ್ 4 ರಿಂದ 15 ರವರೆಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಣೆ
2. ಅಕ್ಟೋಬರ್ 1 ರಿಂದ 12 ರವರೆಗೆ ಬೆಳಗಾವಿ-ಮೈಸೂರು ಎಕ್ಸ್ಪ್ರೆಸ್ (17302) ಗೆ ಹೆಚ್ಚುವರಿ ಬೋಗಿ ಜೋಡಣೆ.
3. ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್ಪ್ರೆಸ್ (06233/06234), 
4. ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಬಾಗಲಕೋಟ ಬಸವ ಎಕ್ಸ್ಪ್ರೆಸ್ (17307) 
5. ಅಕ್ಟೋಬರ್ 3 ರಿಂದ 14 ರವರೆಗೆ ಬಾಗಲಕೋಟ-ಮೈಸೂರು ಬಸವ ಎಕ್ಸ್ಪ್ರೆಸ್ (17308)
6. ಅಕ್ಟೋಬರ್ 1 ರಿಂದ 12 ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್ಪ್ರೆಸ್ (16591).
7. ಅಕ್ಟೋಬರ್ 4 ರಿಂದ 15 ರವರೆಗೆ ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ಹಂಪಿ ಎಕ್ಸ್ಪ್ರೆಸ್ (16592).8.  ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್ಪ್ರೆಸ್ (16535) 
9. ಅಕ್ಟೋಬರ್ 3 ರಿಂದ 14 ರವರೆಗೆ ಪಂಢರಪುರ ಗೋಲಗುಂಬಜ್ ಎಕ್ಸ್ಪ್ರೆಸ್ (16536) 


"ಎರಡು" ರೈಲಿಗೆ ತಲಾ ಎರಡು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳ ಜೋಡಣೆ:-
1. ಅಕ್ಟೋಬರ್ 3 ರಿಂದ 12 ರವರೆಗೆ ರೈಲು ಸಂಖ್ಯೆ 16227 ಮೈಸೂರು-ತಾಳಗುಪ್ಪ ಎಕ್ಸ್ಪ್ರೆಸ್ 
2. ಅಕ್ಟೋಬರ್ 4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್ (16228)


ಇದನ್ನೂ ಓದಿ- ಯೂರೋಪ್ ದೇಶಗಳಿಗೆ ರಫ್ತಾಗುತ್ತಿರುವ ದೇಶದ ಮೊದಲ ಇವಿ ಮೋಟರ್ ಸೈಕಲ್


'18' ರೈಲುಗಳಿಗೆ ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿಗಳ ಅಳವಡಿಕೆ, ರೈಲುಗಳ ವಿವರ ಕೆಳಕಂಡಂತಿದೆ:- 
1. ಅ. 4 ರಿಂದ 13 ರವರೆಗೆ ರೈಲು ಸಂಖ್ಯೆ 06543/06544 ಮೈಸೂರು-ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಸ್ಪೆಷಲ್
2. ಅ.4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್ಪ್ರೆಸ್ (16221)
3. ಅ. 3 ರಿಂದ 12 ರವರೆಗೆ ಮೈಸೂರು-ತಾಳಗುಪ್ಪ ಕುವೆಂಪು ಎಕ್ಸ್ಪ್ರೆಸ್
4. ಅ. 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06273/06274), 
5. ಅ. 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06581/06582).
6. ಅ. 3 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06213)
7.ಅ. 5 ರಿಂದ 14 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06214),
8.  ಅ. 3 ರಿಂದ 12 ರವರೆಗೆ ಮೈಸೂರು-ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ (16225)
9. ಅ.5 ರಿಂದ 14 ರವರೆಗೆ ಶಿವಮೊಗ್ಗ ಟೌನ್-ಮೈಸೂರು ಎಕ್ಸ್ಪ್ರೆಸ್ (16226)
10.ಅ.3 ರಿಂದ 12 ರವರೆಗೆ ಶಿವಮೊಗ್ಗ ಟೌನ್-ಚಿಕ್ಕಮಗಳೂರು ಪ್ಯಾಸೆಂಜರ್ (07365),  
11.ಅ.5 ರಿಂದ 14 ರವರೆಗೆ ಚಿಕ್ಕಮಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್ (07366), 
12.ಅ.4 ರಿಂದ 13 ರವರೆಗೆ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್ಪ್ರೆಸ್ (16239/16240), 
13. ಅ. 1 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06267), 
14. ಅ. 4 ರಿಂದ 15 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06268),
15. ಅ. 1 ರಿಂದ 12 ರವರೆಗೆ ಮೈಸೂರು-ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ (06269),
16. ಅ.3 ರಿಂದ 14 ರವರೆಗೆ ಎಸ್ಎಂವಿಟಿ ಬೆಂಗಳೂರು-ಮೈಸೂರು (06270),
17. ಅ. 2 ರಿಂದ 13 ರವರೆಗೆ ಎಸ್ಎಂವಿಟಿ ಬೆಂಗಳೂರು-ಕರೈಕಲ್ ಎಕ್ಸ್ಪ್ರೆಸ್ (16529) 
18. ಅ. 3 ರಿಂದ 14 ರವರೆಗೆ ಕರೈಕಲ್-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲುಗಳಿಗೆ ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುವುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.