ಜನಸಾಮಾನ್ಯರಿಗೆ ಸಂತಸದ ಸುದ್ದಿ.! ಅಗ್ಗವಾಗಲಿದೆ ಗ್ಯಾಸ್ ಸಿಲಿಂಡರ್ ಬೆಲೆ .!
Gas Price Today: ಸದ್ಯದಲ್ಲೇ ಗ್ಯಾಸ್ ಬೆಲೆ ಅಗ್ಗವಾಗಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸುತ್ತಿದೆ. ಇದರಿಂದ ಅಡುಗೆ ಅನಿಲ ಸೇರಿದಂತೆ ಸಿಎನ್‌ಜಿ ಬೆಲೆ ಕೂಡಾ ಇಳಿಕೆಯಾಗಲಿದೆ.
Gas Price Today : ಈ ದುಬಾರಿ ದುನಿಯಾದಲ್ಲಿ ದಿನಬಳಕೆಯ ಗೃಹ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದರಲ್ಲೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಜನ ಸಾಮಾನ್ಯರು ನಿಟ್ಟುಸಿರು ಬಿಡುವಂಥಹ ಸುದ್ದಿಯೊಂದು ಕೇಳಿ ಬಂದಿದೆ. ಹೌದು, ಸದ್ಯದಲ್ಲೇ ಗ್ಯಾಸ್ ಬೆಲೆ ಅಗ್ಗವಾಗಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸುತ್ತಿದೆ. ಇದರಿಂದ ಅಡುಗೆ ಅನಿಲ ಸೇರಿದಂತೆ ಸಿಎನ್‌ಜಿ ಬೆಲೆ ಕೂಡಾ ಇಳಿಕೆಯಾಗಲಿದೆ.
ನಿರ್ಧಾರವಾಗಬಹುದು ಗ್ಯಾಸ್ ಬೆಲೆ ಮಿತಿ :
ಅನಿಲ ಬೆಲೆಗಳನ್ನು ಪರಿಶೀಲಿಸುವ ಸಲುವಾಗಿ ಕಮಿಟಿ ವತಿಯಿಂದ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಸಾರ್ವಜನಿಕ ವಲಯದ ಕಂಪನಿಗಳ ಓಲ್ಡ್ ಫೀಲ್ಡ್ ನಿಂದ ಹೊರಬರುವ ನೈಸರ್ಗಿಕ ಅನಿಲದ ಬೆಲೆ ಮಿತಿಯನ್ನು ನಿಗದಿಪಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಸರ್ಕಾರದ ಈ ನಿರ್ಧಾರದಿಂದ ಸಿಎನ್‌ಜಿ ಮತ್ತು ಪಿಎನ್‌ಜಿ ಎರಡರ ಬೆಲೆಯೂ ಇಳಿಕೆಯಾಗಲಿದೆ.
ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಕುಸಿತ ಕಂಡ ಅಡಿಕೆ ದರ
ಶೀಘ್ರದಲ್ಲೇ ಸರ್ಕಾರದ ಮುಂದೆ ವರದಿ ಮಂಡನೆ :
ಸುದ್ದಿ ಮೂಲಗಳ ಪ್ರಕಾರ, ಮಾಜಿ ಯೋಜನಾ ಆಯೋಗದ ಸದಸ್ಯ ಕಿರೀಟ್ ಎಸ್. ಪರೇಖ್ ನೇತೃತ್ವದ ಸಮಿತಿಯು ಈ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಅಂತಿಮ ರೂಪ ನೀಡುವ ಹಂತದಲ್ಲಿದೆ. ಸಮಿತಿಯು ಶೀಘ್ರದಲ್ಲೇ ತನ್ನ ವರದಿಯನ್ನು ಸರ್ಕಾರದ ಮುಂದೆ ಮಂಡಿಸಲಿದೆ ಎನ್ನಲಾಗಿದೆ.
ಅಧಿಕಾರಿಗಳ ಮೂಲದಿಂದ ಬಂದ ಮಾಹಿತಿ :
ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಸಮಿತಿಯು 2 ರೀತಿಯ ಬೆಲೆಯ ಬಗ್ಗೆ ಶಿಫಾರಸು ಮಾಡಬಹುದು. ಇದರೊಂದಿಗೆ ಓಎನ್‌ಜಿಸಿ ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್‌ನ ಹಳೆಯ ಫೀಲ್ಡ್‌ಗಳಿಂದ ಹೊರಬರುವ ಗ್ಯಾಸ್ ಬೆಲೆ ಮಿತಿಯನ್ನು ನಿಗದಿಪಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : Gold Price Today : ವಾರದ ಮೊದಲ ದಿನ ಎಷ್ಟಿದೆ ಚಿನ್ನ ಬೆಳ್ಳಿ ಬೆಲೆ ?
ಸ್ಥಳಕ್ಕನುಗುಣವಾಗಿ ಸಿದ್ದವಾಗಲಿದೆ ಸೂತ್ರ :
ಪ್ರದೇಶಕ್ಕೆ ಅನುಗುಣವಾಗಿ, ಸರ್ಕಾರವು ವಿಭಿನ್ನ ಸೂತ್ರಗಳನ್ನು ಮಾಡುವ ತಯಾರಿಯಲ್ಲಿದೆ. ಅಲ್ಲದೆ, ಅಸ್ತಿತ್ವದಲ್ಲಿರುವ ಸೂತ್ರವನ್ನು ನಿರ್ವಹಿಸುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ಅಸ್ತಿತ್ವದಲ್ಲಿರುವ ಸೂತ್ರದ ಪ್ರಕಾರ ಹೆಚ್ಚಿನ ದರ ಪಾವತಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.