ನವದೆಹಲಿ: ದೇಶದಲ್ಲಿ ಟೊಮೇಟೊ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ರಿಯಾಯಿತಿ ದರದಲ್ಲಿ ಟೊಮೇಟೊ ಮಾರಾಟ ಮಾಡುತ್ತಿರುವ ಎನ್ ಸಿಸಿಎಫ್ ಟೊಮೇಟೊ ಬೆಲೆ ಇಳಿಕೆ ಮಾಡಿದೆ. ಇಂದಿನಿಂದ ದೆಹಲಿ-ಎನ್‌ಸಿಆರ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಟೊಮೆಟೊ ಕೆಜಿಗೆ ರೂ.80 ಕ್ಕೆ ಲಭ್ಯವಾಗಲಿದೆ. ಟೋಮ್ಯಾಟೊ ವಿತರಣೆಯನ್ನು ಹೆಚ್ಚಿಸಿದ ನಂತರ (Business News In Kannada), ಕೇಂದ್ರ ಸಂಸ್ಥೆ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಮೂಲಗಳಿಂದ ದೊರೆತಿರುವ ಮಾಹಿತಿ ಪ್ರಕಾರ ಟೊಮ್ಯಾಟೊವನ್ನು ಕೆಜಿಗೆ 90 ರೂ.ಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಸರ್ಕಾರ ಮಧ್ಯಪ್ರವೇಶಿಸಿದ್ದರಿಂದ ಟೊಮ್ಯಾಟೊ ಸಗಟು ಬೆಲೆಯಲ್ಲಿ ಇಳಿಕೆಯಾಗಿದೆ. ಅಗ್ಗದ ಟೊಮೆಟೊಗಳನ್ನು (Tomato Price) ಖರೀದಿಸಲು ಯಾವುದೇ ಪ್ರಮಾಣಪತ್ರದ ಅಗತ್ಯವಿಲ್ಲ. ಇದಕ್ಕಾಗಿ ನೀವು NAFED ಮತ್ತು NCCF ನ ಮೊಬೈಲ್ ವ್ಯಾನ್ ಅಥವಾ ಅದರ ಅಂಗಡಿಗೆ ಹೋಗಬೇಕು.

COMMERCIAL BREAK
SCROLL TO CONTINUE READING

ದೇಶಾದ್ಯಂತ 500ಕ್ಕೂ ಹೆಚ್ಚು ಪಾಯಿಂಟ್ ಗಳಲ್ಲಿ ಪರಿಸ್ಥಿತಿಯನ್ನು ಮರು ಮೌಲ್ಯಮಾಪನ ಮಾಡಿದ ನಂತರ ಇಂದಿನಿಂದ ಕೆಜಿಗೆ 80 ರೂ.ಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇಂದಿನಿಂದ ದೆಹಲಿಯ ಹಲವು ಕಡೆಗಳಲ್ಲಿ ಮಾರಾಟ ಆರಂಭವಾಗಿದೆ ನೋಯ್ಡಾ, ಲಕ್ನೋ, ಕಾನ್ಪುರ, ವಾರಣಾಸಿ, ಪಾಟ್ನಾ, ಮುಜಾಫರ್‌ಪುರ ಮತ್ತು ಅರಾಹ್‌ನಲ್ಲಿ NAFED ಮತ್ತು NCCF ಮೂಲಕ ಅಗ್ಗದ ದರದಲ್ಲಿ ಟೊಮ್ಯಾಟೋ ಮಾರಾಟ ಮಾಡಲಾಗುತ್ತಿದೆ. ಅಂತಹ ಸ್ಥಳಗಳಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆಗಳ ಆಧಾರದ ಮೇಲೆ ನಾಳೆಯಿಂದ ಹೆಚ್ಚಿನ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.


ಭಾರೀ ಮುಂಗಾರು ಮಳೆ ಪೂರೈಕೆಯ ಮೇಲೆ ಪರಿಣಾಮ ಬೀರುವುದರಿಂದ, ಶನಿವಾರದಂದು ಪ್ರಮುಖ ನಗರಗಳ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 250 ರೂ.ಗೆ ತಲುಪಿದೆ ಸರ್ಕಾರದ ಅಂಕಿಅಂಶಗಳ ಪ್ರಕಾರ, ಅಖಿಲ ಭಾರತ ಸರಾಸರಿ ಟೊಮೆಟೊ ಬೆಲೆ ಕೆಜಿಗೆ 117 ರೂ.ಆಗಿದೆ. 


ಇದನ್ನೂ ಓದಿ-ಗುಡ್ ನ್ಯೂಸ್: ಈರುಳ್ಳಿ ಬೇಸಾಯ ಮಾಡಿದರೆ ಸಿಗಲಿದೆ ಬಂಪರ್ ಸಬ್ಸಿಡಿ, ಇಲ್ಲಿ ಅರ್ಜಿ ಸಲ್ಲಿಸಿ!


ಚಿಲ್ಲರೆ ಗ್ರಾಹಕರಿಗೆ ಪರಿಹಾರ ನೀಡಲು, ಕೇಂದ್ರ ಸರ್ಕಾರವು ದೆಹಲಿ-ಎನ್‌ಸಿಆರ್, ಪಾಟ್ನಾ ಮತ್ತು ಲಕ್ನೋದಂತಹ ಆಯ್ದ ನಗರಗಳಲ್ಲಿ ಟೊಮೆಟೊವನ್ನು ಕೆಜಿಗೆ 80-90 ರೂಪಾಯಿಗಳ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದೆ. ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟ (ಎನ್‌ಸಿಸಿಎಫ್) ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ಕೇಂದ್ರದ ಪರವಾಗಿ ಮೊಬೈಲ್ ವ್ಯಾನ್‌ಗಳ ಮೂಲಕ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲಾಗುತಿದೆ. NCCF ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 100 ಕೇಂದ್ರೀಯ ಭಂಡಾರ್ ಮಳಿಗೆಗಳ ಮೂಲಕ ಟೊಮೆಟೊಗಳನ್ನು ಮಾರಾಟ ಮಾಡಲು ಯೋಜಿಸಿದೆ. ದೆಹಲಿ-ಎನ್‌ಸಿಆರ್‌ನಲ್ಲಿ 400 'SAFAL' ಚಿಲ್ಲರೆ ಮಳಿಗೆಗಳ ಮೂಲಕ ಟೊಮೆಟೊಗಳನ್ನು ಮಾರಾಟ ಮಾಡಲು ಅವರು ಮದರ್ ಡೈರಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.


ಇದನ್ನೂ ಓದಿ-July 31 ಕ್ಕೂ ಮುನ್ನವೇ ತೆರಿಗೆ ಪಾವತಿಸುವ ಮಧ್ಯಮವರ್ಗದ ಜನರಿಗೆ ವಿತ್ತ ಸಚಿವರಿಂದ ಮಹತ್ವದ ಘೋಷಣೆ!


ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ಶನಿವಾರದಂದು ಅಖಿಲ ಭಾರತ ಚಿಲ್ಲರೆ ದರದಲ್ಲಿ ಟೊಮೇಟೊ ಪ್ರತಿ ಕೆಜಿಗೆ 116.86 ರೂ.ಗಳಷ್ಟಿದ್ದರೆ, ಗರಿಷ್ಠ ದರ ಕೆಜಿಗೆ 250 ರೂ. ಮತ್ತು ಕನಿಷ್ಠ ದರವು ಕೆಜಿಗೆ 25 ರೂ. ಮೆಟ್ರೋಪಾಲಿಟನ್ ನಗರಗಳ ಪೈಕಿ ದೆಹಲಿಯಲ್ಲಿ ಟೊಮೇಟೊ ಕೆಜಿಗೆ 178 ರೂ. ಮುಂಬೈನಲ್ಲಿ ಟೊಮೇಟೊ ಕೆಜಿಗೆ 150 ರೂ.ಗೆ ಮಾರಾಟವಾಗುತ್ತಿದ್ದು, ಚೆನ್ನೈನಲ್ಲಿ ಕೆಜಿಗೆ 132 ರೂ. ಹಾಪುರದಲ್ಲಿ ಅತಿ ಹೆಚ್ಚು ಅಂದರೆ ಕೆಜಿಗೆ 250 ರೂ.ಗಲಾಗಿದೆ.  ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ಕಡಿಮೆ ಉತ್ಪಾದನೆಯಿಂದಾಗಿ ಟೊಮೆಟೊ ಬೆಲೆ ಸಾಮಾನ್ಯವಾಗಿ ಅಧಿಕಾಗಿರುತ್ತದೆ. ಆದರೆ, ಈ ಬಾರಿ ಹಲವು ರಾಜ್ಯಗಳಲ್ಲಿ ಭಾರಿ ಮುಂಗಾರು ಮಳೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅದರ ಬೆಲೆಯಲ್ಲಿ ಏರಿಕೆಯಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.