DA ARREAR UPDATE : ಮೋದಿ ಸರ್ಕಾರ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ  ಭರ್ಜರಿ ಸಿಹಿ ಸುದ್ದಿ ನೀಡಿದೆ. ನೌಕರರು ಮತ್ತು ಪಿಂಚಣಿದಾರ ಖಾತೆ ಸೇರದೇ ಬಾಕಿ ಉಳಿದಿದ್ದ 18ತಿಂಗಳ ಡಿಎ ಬಾಕಿ ಹಣ ಶೀಘ್ರದಲ್ಲೇ ಖಾತೆಗೆ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಸರ್ಕಾರಿ ನೌಕರರ ಮನ ಗೆಲ್ಲುವ ಕೆಲಸಕ್ಕೆ ಮೋದಿ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಫಿಟ್‌ಮೆಂಟ್‌ ಫ್ಯಾಕ್ಟರ್ ನಲ್ಲಿಯೂ ಏರಿಕೆ : 
ಇದಲ್ಲದೆ, ಸರ್ಕಾರವು ಫಿಟ್‌ಮೆಂಟ್‌ ಫ್ಯಾಕ್ಟರ್ ನಲ್ಲಿಯೂ ಹೆಚ್ಚಳವನ್ನು ಘೋಷಿಸಬಹುದು. ಇದರಿಂದಾಗಿ ಮೂಲ ವೇತನದಲ್ಲಿ ಬಂಪರ್ ಹೆಚ್ಚಳ ಸಾಧ್ಯವಾಗುತ್ತದೆ. ಸರ್ಕಾರ ಈ ಎರಡೂ ದೊಡ್ಡ ಘೋಷಣೆಗಳನ್ನು ಮಾಡಿದರೆ, ಈ ವರ್ಷ ಸರ್ಕಾರಿ ನೌಕರರು ಲಾಟರಿ ಗೆದ್ದಂತೆಯೇ. 


ಇದನ್ನೂ ಓದಿ :  ನೌಕರಿಯಿಂದ ಬೇಸತ್ತು ಹೋಗಿರುವಿರಾ? ಬಿಸ್ನೆಸ್ ಆರಂಭಿಸಬೇಕೆ? ಕೈತುಂಬಾ ಸಂಪಾದನೆ ಕೊಡುವ 4 ಬಿಸ್ನೆಸ್ ಪರಿಕಲ್ಪನೆ ಕೇವಲ ನಿಮಗಾಗಿ!


ಇತ್ತೀಚೆಗೆ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (ಡಿಎ) 4 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಈ ಮೂಲಕ  ವೇತನದಲ್ಲಿ ಏರಿಕೆ ಕಂಡುಬಂದಿದೆ. ಡಿಎ ಬಾಕಿ ಮತ್ತು ಫಿಟ್‌ಮೆಂಟ್ ಅಂಶದ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಈ ಬಗ್ಗೆ ಎಲ್ಲಾ ರೀತಿಯ ಸಿದ್ದತೆಗಳು ನದೆಯುತ್ತಿವೆ ಎಂದು ಮೂಲಗಳು ಹೇಳುತ್ತಿವೆ. 


ಖಾತೆ ಸೇರಲಿದೆ ಡಿಎ ಬಾಕಿ ಹಣ :
ಕೇಂದ್ರ ಸರ್ಕಾರವು 18 ತಿಂಗಳ ಡಿಎ ಬಾಕಿ ಹಣವನ್ನು ಶೀಘ್ರದಲ್ಲೇ ನೌಕರರ ಖಾತೆಗೆ ಕಳುಹಿಸಲಿದೆ. ಹೀಗಾದರೆ, ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಖಾತೆಗಳಿಗೆ ಭಾರೀ ಮೊತ್ತದ ಹಣ ಬರುತ್ತದೆ. 


ಇದನ್ನೂ ಓದಿ :  ನಿಮ್ಮ 1000 ರೂ.ಗಳನ್ನು ಈ ಫಾರ್ಮ್ಯೂಲಾ ಬಳಸಿ ರಾಕೆಟ್ ವೇಗದಲ್ಲಿ 5.32 ಲಕ್ಷ ರೂ.ಗಳಾಗಿಸಿ!


ಉನ್ನತ ಶ್ರೇಣಿಯ ಉದ್ಯೋಗಿಗಳಿಗೆ ಸುಮಾರು 2 ಲಕ್ಷ 18 ಸಾವಿರ ರೂ.ಗಳ ಲಾಭವಾಗುವುದು. ಕರೋನಾ ವೈರಸ್ ಸೋಂಕಿನ ಅವಧಿಯಲ್ಲಿ, ಜನವರಿ 1, 2020 ರಿಂದ ಜೂನ್ 30, 2021 ರವರೆಗಿನ ಡಿಎ ಹಣವನ್ನು ನೌಕರರಿಗೆ ನೀಡಿರಲಿಲ್ಲ. ಈ ಹಣಕ್ಕಾಗಿ ಸರ್ಕಾರಿ ನೌಕರರು ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಆದರೆ, ಈ ಬಾರಿ ನೌಕರರ ಬೇಡಿಕೆ ಈಡೇರಲಿದೆ ಎಂದೇ ಹೇಳಲಾಗುತ್ತಿದೆ. 


ಫಿಟ್ಮೆಂಟ್ ಅಂಶದಲ್ಲಿ ಹೆಚ್ಚಳ : 
ನೌಕರರು ಶೀಘ್ರದಲ್ಲೇ ಫಿಟ್‌ಮೆಂಟ್ ಅಂಶದ ಹೆಚ್ಚಳದ ಪ್ರಯೋಜನವನ್ನು ಪಡೆಯುತ್ತಾರೆ. ಈ ಹೆಚ್ಚಳದ ನಂತರ ನಂತರ ಕನಿಷ್ಠ ಮೂಲ ವೇತನದಲ್ಲಿಯೂ ಹೆಚ್ಚಳವಾಗುವುದು. ಸರ್ಕಾರ ಫಿಟ್‌ಮೆಂಟ್ ಅಂಶವನ್ನು 2.60 ರಿಂದ 3.0 ಪಟ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಕೇಂದ್ರೀಯ ಉದ್ಯೋಗಿಗಳ ಸಂಘಟನೆಗಳು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಬಹಳ ಸಮಯದಿಂದ ಒತ್ತಾಯಿಸುತ್ತಿವೆ. 


ಇದನ್ನೂ ಓದಿ :  ಹಿಂದಿನ ಎಲ್ಲಾ ದಾಖಲೆ ಮುರಿದ ಬಂಗಾರದ ಬೆಲೆ ! ಇನ್ನು ಚಿನ್ನ ಖರೀದಿ ಬಲು ಕಷ್ಟ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ