Good News: ಅಗ್ಗದ ದರದಲ್ಲಿ ನಾಳೆಯಿಂದ ಚಿನ್ನ ಖರೀದಿಸಲು ಸರ್ಕಾರ ನೀಡುತ್ತದೆ ಈ ಸುವರ್ಣಾವಕಾಶ, ಬೆಲೆ ಇಲ್ಲಿ ತಿಳಿದುಕೊಳ್ಳಿ
Sovereign Gold Bond scheme: ನೀವೂ ಕೂಡ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ವಾಸ್ತವದಲ್ಲಿ, ಸರ್ಕಾರಿ ಗೋಲ್ಡ್ ಬಾಂಡ್ ಯೋಜನೆ 2021-22 (Government Gold Bond Scheme) ರ ವಿತರಣೆಯ ಬೆಲೆಯನ್ನು RBI ಪ್ರತಿ ಗ್ರಾಂಗೆ 5,109 ರೂ.ಗೆ ನಿಗದಿಪಡಿಸಿದೆ.
Sovereign Gold Bond scheme: ನೀವೂ ಕೂಡ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ವಾಸ್ತವದಲ್ಲಿ, ಸರ್ಕಾರಿ ಗೋಲ್ಡ್ ಬಾಂಡ್ ಯೋಜನೆ 2021-22 (Government Gold Bond Scheme) ರ ವಿತರಣೆಯ ಬೆಲೆಯನ್ನು RBI ಪ್ರತಿ ಗ್ರಾಂಗೆ 5,109 ರೂ.ಗೆ ನಿಗದಿಪಡಿಸಿದೆ. ಇದರಲ್ಲಿ ಹೂಡಿಕೆಗೆ ಸೋಮವಾರದಿಂದ ಅರ್ಜಿ ಸಲ್ಲಿಸಬಹುದು. 2021-22 ರ ಗೋಲ್ಡ್ ಬಾಂಡ್ (Latest Gold Price News) ಯೋಜನೆಯ 10 ನೇ ಕಂತು ಫೆಬ್ರವರಿ 28 ರಿಂದ ಮಾರ್ಚ್ 4 ರವರೆಗೆ ಚಂದಾದಾರಿಕೆಗೆ ತೆರೆದುಕೊಳ್ಳಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ಪ್ರಕಟಿಸಿದೆ.
RBI ಹೇಳಿದ್ದೇನು?
"ಚಿನ್ನದ (Latest Gold Price Update) ಬಾಂಡ್‌ನ ಮೂಲ ಬೆಲೆ ಪ್ರತಿ ಗ್ರಾಂಗೆ 5,109 ರೂ ಆಗಿರುತ್ತದೆ" ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆರ್‌ಬಿಐ ಜೊತೆ ಸಮಾಲೋಚನೆ ನಡೆಸಿದ ಸರ್ಕಾರ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಗ್ರಾಹಕರು ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸಬೇಕಾಗುತ್ತದೆ. "ಆನ್‌ಲೈನ್ ಪಾವತಿ ಮಾಡುವ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಂಗೆ 5,059 ರೂ ಆಗಿರುತ್ತದೆ" ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ-Cryptocurrency:ಕ್ರಿಪ್ಟೋಕರೆನ್ಸಿ ನಿಷೇಧ ಭಾರತಕ್ಕೆ ಅತ್ಯಂತ ಸೂಕ್ತ ಆಯ್ಕೆ- ಆರ್‌ಬಿಐ ಡೆಪ್ಯುಟಿ ಗವರ್ನರ್
ಗೋಲ್ಡ್ ಬಾಂಡ್ ಅನ್ನು ಎಲ್ಲಿ ಖರೀದಿಸಬೇಕು?
ಗೋಲ್ಡ್ ಬಾಂಡ್ ಸ್ಕೀಮ್ 2021-22 ರ ಒಂಬತ್ತನೇ ಕಂತು ಜನವರಿ 10 ರಿಂದ 14 ರವರೆಗೆ ಕೊನೆಯ ಬಾರಿಗೆ ಖರೀದಿಗೆ ತೆರೆದುಕೊಂಡಿತ್ತು. ಆಗ ಪ್ರತಿ ಗ್ರಾಂ ಚಿನ್ನಕ್ಕೆ 4,786 ರೂ ನಿಗದಿಪಡಿಸಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಭಾರತ ಸರ್ಕಾರದ ಪರವಾಗಿ ಬಾಂಡ್ ನೀಡುತ್ತದೆ. ಕೇಂದ್ರೀಯ ಬ್ಯಾಂಕ್ ಪ್ರಕಾರ, ಈ ಬಾಂಡ್‌ಗಳನ್ನು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು NSE ಮತ್ತು BSE ನಂತಹ ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ-ಇ-ರೂಪಿ ವೋಚರ್‌ಗಳ ಮಿತಿಯನ್ನು 10,000 ರೂ.ನಿಂದ 1 ಲಕ್ಷಕ್ಕೆ ಹೆಚ್ಚಿಸಲು ಆರ್‌ಬಿಐ ಪ್ರಸ್ತಾಪ
ಯಾರು ಅರ್ಜಿ ಸಲ್ಲಿಸಬಹುದು?
ಯೋಜನೆಯಡಿಯಲ್ಲಿ, ಸಾಮಾನ್ಯ ಹೂಡಿಕೆದಾರರು ಕನಿಷ್ಠ ಒಂದು ಗ್ರಾಂ ಚಿನ್ನ ಮತ್ತು ಗರಿಷ್ಠ ನಾಲ್ಕು ಕಿಲೋಗ್ರಾಂಗಳಷ್ಟು ಚಿನ್ನವನ್ನು ಹೂಡಿಕೆ ಮಾಡಬಹುದು. ಹಿಂದೂ ಅವಿಭಜಿತ ಕುಟುಂಬಗಳು 4 ಕೆಜಿವರೆಗೆ ಚಿನ್ನಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳು ಪ್ರತಿ ಹಣಕಾಸು ವರ್ಷದಲ್ಲಿ 20 ಕೆಜಿವರೆಗಿನ ಚಿನ್ನ ಖರೀದಿಸಲು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ-Bank Holiday February 2022: ಈ ತಿಂಗಳಲ್ಲಿ 9 ದಿನಗಳವರೆಗೆ ಬಂದ್ ಇರಲಿದೆ ಬ್ಯಾಂಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.