Nitin Gadkari on Electric Vehicle : ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿಯು ತುಂಬಾ ಉಪಯುಕ್ತವಾಗಿದೆ. ಹೌದು,  ಮುಂದಿನ 1 ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ವಾಹನಗಳಿಗೆ ಸರಿಸಮವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮುಂದಿನ 1 ವರ್ಷದಲ್ಲಿ ಎಲೆಕ್ಟ್ರಿಕ್ ವಾಹನದ ಬೆಲೆ ಪೆಟ್ರೋಲ್ ವಾಹನಗಳಿಗೆ ಸಮನಾಗಿರುತ್ತದೆ ಎಂದು ಹೇಳಿದ್ದಾರೆ. ಈ ಸುದ್ದಿ ಕಾರು, ಬೈಕ್ ಸವಾರರಿಗೆ ನೆಮ್ಮದಿ ತಂದಿದೆ. ವಾಸ್ತವವಾಗಿ, ತಂತ್ರಜ್ಞಾನ ಮತ್ತು ಹಸಿರು ಇಂಧನದಲ್ಲಿ ತ್ವರಿತ ಪ್ರಗತಿಯು ಎಲೆಕ್ಟ್ರಿಕ್ ಆಟೋಮೊಬೈಲ್ ಗಳ ಬೆಲೆಯನ್ನು ಕಡಿಮೆ ಮಾಡುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 


ಇದನ್ನೂ ಓದಿ : EPFO- ಡೈರೆಕ್ಟ್ UAN ರಚಿಸುವ ಸುಲಭ ಪ್ರಕ್ರಿಯೆ


ಮಾಲಿನ್ಯದ ಮಟ್ಟ ಕಡಿಮೆಯಾಗಲಿದೆ :  
2022-23ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಅನುದಾನದ ಬೇಡಿಕೆಗಳ ಕುರಿತು ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಉತ್ತರಿಸಿದ್ದಾರೆ.  ಪರಿಣಾಮಕಾರಿ ಸ್ವದೇಶಿ ಇಂಧನದತ್ತ ಸಾಗುವ ಅಗತ್ಯವಿದೆ ಎಂದು ಕಿ ಸಂದರ್ಭದಲ್ಲಿ ಅವರು ಹೇಳಿದ್ದಾರೆ. ವಿದ್ಯುತ್ ಇಂಧನದಿಂದ  ಮಾಲಿನ್ಯದ ಮಟ್ಟವನ್ನು ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. 


ಕೇಂದ್ರ ಸಚಿವರ ಮನವಿ : 
ಇದರೊಂದಿಗೆ ಕೇಂದ್ರ ಸಚಿವ ಗಡ್ಕರಿ ಅವರು, ಹೈಡ್ರೋಜನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಸಂಸದರನ್ನು ಒತ್ತಾಯಿಸಿದ್ದಾರೆ.  ಆಯಾ ಪ್ರದೇಶಗಳಲ್ಲಿ ಕೊಳಚೆ ನೀರನ್ನು ಹಸಿರು ಜಲಜನಕವನ್ನಾಗಿ ಪರಿವರ್ತಿಸಲು ಸಂಸದರು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.  ಹೈಡ್ರೋಜನ್ ಶೀಘ್ರದಲ್ಲೇ ಅಗ್ಗದ ಇಂಧನ ಆಯ್ಕೆಯಾಗಲಿದೆ ಎಂದು  ಹೇಳಿದ್ದಾರೆ. 'ಲಿಥಿಯಂ-ಐಯಾನ್ ಬ್ಯಾಟರಿಗಳ ಬೆಲೆ ವೇಗವಾಗಿ ಇಳಿಯುತ್ತಿದೆ. ನಾವು ಜಿಂಕ್-ಐಯಾನ್, ಅಲ್ಯೂಮಿನಿಯಂ-ಐಯಾನ್, ಸೋಡಿಯಂ-ಐಯಾನ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಗರಿಷ್ಠ ಎರಡು ವರ್ಷಗಳಲ್ಲಿ, ಎಲೆಕ್ಟ್ರಿಕ್ ಸ್ಕೂಟರ್, ಕಾರು, ಆಟೋ ರಿಕ್ಷಾಗಳ ವೆಚ್ಚವು ಪೆಟ್ರೋಲ್ ಚಾಲಿತ ಸ್ಕೂಟರ್, ಕಾರು, ಆಟೋರಿಕ್ಷಾಗಳಿಗೆ  ಎಂದು ಹೇಳಿದ್ದಾರೆ. 


ಇದನ್ನೂ ಓದಿ : ತನ್ನ ಗ್ರಾಹಕರಿಗಾಗಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಆರಂಭಿಸಿದ ಎಸ್‌ಬಿಐ


ವೆಚ್ಚದಲ್ಲಿನ  ವ್ಯತ್ಯಾಸವೇನು  ?
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, '100 ರೂಪಾಯಿ ಪೆಟ್ರೋಲ್‌ಗೆ ಖರ್ಚು ಮಾಡುತ್ತಿದ್ದರೆ, ಎಲೆಕ್ಟ್ರಿಕ್ ವಾಹನ ಚಲಾಯಿಸಲು ಈ ವೆಚ್ಚವು 10 ರೂಪಾಯಿಗೆ ಇಳಿಯುತ್ತದೆ. ಕೆಲವು ದಿನಗಳ ಹಿಂದೆ ನಿತಿನ್ ಗಡ್ಕರಿ ಅವರು ಗ್ರೀನ್ ಹೈಡ್ರೋಜನ್ ಇಂಧನ ಕಾರನ್ನು ಬಿಡುಗಡೆ ಮಾಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. 

 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.