SBI Mobile Banking : ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಮೊಬೈಲ್‌ನಿಂದ ಹಣ ವರ್ಗಾವಣೆಗೆ ವಿಧಿಸುವ ಶುಲ್ಕವನ್ನು ತೆಗೆದುಹಾಕುವುದಾಗಿ ಎಸ್‌ಬಿಐ ಘೋಷಿಸಿದೆ. ಯುಎಸ್‌ಎಸ್‌ಡಿ ಸೇವೆಯನ್ನು ಬಳಸಿಕೊಂಡು ಖಾತೆದಾರರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸುಲಭವಾಗಿ ವಹಿವಾಟು ನಡೆಸಬಹುದು ಎಂದು ಬ್ಯಾಂಕ್ ಹೇಳಿದೆ.


COMMERCIAL BREAK
SCROLL TO CONTINUE READING

45 ಕೋಟಿ ಗ್ರಾಹಕರಿಗೆ ಆಗಲಿಗೆ ಅನುಕೂಲ :
ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾವನ್ನು ಸಾಮಾನ್ಯವಾಗಿ ಟಾಕ್ ಟೈಮ್ ಬ್ಯಾಲೆನ್ಸ್ ಅಥವಾ ಖಾತೆ ವಿವರಗಳನ್ನು ಪರಿಶೀಲಿಸಲು ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣವನ್ನು ವರ್ಗಾಯಿಸಲು ಬಳಸಲಾಗುತ್ತದೆ. ಬ್ಯಾಂಕ್ ತೆಗೆದುಕೊಂಡಿರುವ ಈ ನಿರ್ಧಾರದಿಂದ ಮೊಬೈಲ್ ಬ್ಯಾಂಕಿಂಗ್ ಬಳಸುವ ಕೋಟ್ಯಂತರ ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ. ಎಸ್‌ಬಿಐ ದೇಶಾದ್ಯಂತ ಸುಮಾರು 45 ಕೋಟಿ ಗ್ರಾಹಕರನ್ನು ಹೊಂದಿದೆ. 


ಇದನ್ನೂ ಓದಿ : ಆಧಾರ್ ಕಾರ್ಡಿನಿಂದ ಹ್ಯಾಕ್ ಆಗುತ್ತಾ ಬ್ಯಾಂಕ್ ಅಕೌಂಟ್: ಯುಐಡಿಎಐ ಹೇಳಿದ್ದೇನು?


ವಾಟ್ಸಾಪ್‌ನಲ್ಲಿ ಲಭ್ಯ ಖಾತೆಗೆ ಸಂಬಂಧಿಸಿದ ಮಾಹಿತಿ : 
'ಮೊಬೈಲ್ ಫಂಡ್ ವರ್ಗಾವಣೆಯ ಮೇಲಿನ SMS ಶುಲ್ಕಗಳನ್ನು ಈಗ ಮನ್ನಾ ಮಾಡಲಾಗಿದೆ ಎಂದು ಎಸ್‌ಬಿಐ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಬಳಕೆದಾರರು ಸುಲಭವಾಗಿ ವಹಿವಾಟು ನಡೆಸಬಹುದು. ಇದಲ್ಲದೇ ಬ್ಯಾಂಕ್ ತನ್ನ ಗ್ರಾಹಕರಿಗೆ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನೂ ಆರಂಭಿಸಿದೆ. ಇದರ ಸಹಾಯದಿಂದ, ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಆಗುವ ಅಗತ್ಯವಿಲ್ಲ. ಖಾತೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯು ವಾಟ್ಸಾಪ್‌ನಲ್ಲಿಯೇ  ಲಭ್ಯವಿರುತ್ತದೆ.


ಉಳಿತಾಯ ಖಾತೆದಾರರು ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರು ಎಸ್‌ಬಿಐನ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯ ಲಾಭವನ್ನು ಪಡೆಯಬಹುದು. ಇದಕ್ಕಾಗಿ ನೀವು ನೋಂದಣಿಯನ್ನು ಈ ರೀತಿ ಪೂರ್ಣಗೊಳಿಸಬಹುದು...


1. ಮೊದಲನೆಯದಾಗಿ, ಖಾತೆಯಲ್ಲಿ ನೋಂದಾಯಿಸಲಾದ ಮೊಬೈಲ್ ನಲ್ಲಿ  ಫೋನ್‌ ಮೆಸ್ಸೇಜ್ ಆಯ್ಕೆಯನ್ನು ತೆರೆಯಿರಿ.
2. ಸಂದೇಶದಲ್ಲಿ  ಕ್ಯಾಪಿಟಲ್ ಲೆಟರ್ ನಲ್ಲಿ 'WAREG' ಬರೆಯಿರಿ. ನಂತರ ಸ್ಪೇಸ್ ಬಿಟ್ಟು ಖಾತೆ ಸಂಖ್ಯೆಯನ್ನು ಬರೆಯಿರಿ.
3.ಈ ಸಂದೇಶವನ್ನು 7208933148 ಸಂಖ್ಯೆಗೆ SMS ಮಾಡಿ.
4. ಈಗ 9022690226 ಸಂಖ್ಯೆಯಿಂದ Whatsapp ಮೆಸ್ಸೇಜ್ ಸಿಗುತ್ತದೆ. 
5. ಮೆಸ್ಸೇಜ್ ಬಂದ ನಂತರ ನೋಂದಣಿಯನ್ನು ಕನ್ಫರ್ಮ್ ಮಾಡಲಾಗುತ್ತದೆ.  ಸೇವೆಯನ್ನು ಬಳಸಲು, HI ಎಂದು ಟೈಪ್ ಮಾಡಿ.
6. ಇದಾದ ಮೇಲೆ Whatsapp ಸರ್ವಿಸ್ ಮೆನು ತೆರೆಯುತ್ತದೆ.
7. ನಿಮಗೆ ಬೇಕಾದ ಮಾಹಿತಿಯನ್ನು ಮೆನುವಿನಲ್ಲಿ ಆಯ್ಕೆ ಮಾಡಿ.
8. ಸಂದೇಶದ ಮೂಲಕ ನಿಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಿ. 


ಇದನ್ನೂ ಓದಿ : RBI Repo Rate! ದುಬಾರಿಯಾಗಲಿದೆಯಾ ಸಾಲ? ಮೋರ್ಗಾನ್ ಸ್ಟಾನ್ಲಿ ಭವಿಷ್ಯವಾಣಿ


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.