ನವದೆಹಲಿ: ಅಕಾಲಿಕ ಮಳೆಯಿಂದ ಬೆಳೆನಾಶವಾಗಿ ಭರ್ಜರಿ ಏರಿಕೆಯಾಗಿರುವ ಟೊಮೇಟೊ ಬೆಲೆ(Tomato Price)ಗಳು ಡಿಸೆಂಬರ್‌ನಿಂದ ಕಡಿಮೆಯಾಗುವ ಸಾಧ್ಯತೆಯಿದೆ. ಸದ್ಯ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಟೊಮೇಟೊ ಬೆಲೆ 120-140 ರೂ.ವರೆಗೂ ಇದೆ. ದಿನಬಳಕೆ ತರಕಾರಿಯ ಬೆಲೆ ಗಗನಕ್ಕೇರಿರುವುದರಿಂದ ಜನಸಾಮಾನ್ಯರು ಕಂಗಲಾಗಿದ್ದಾರೆ. ಈ ಮಧ್ಯೆ ವಿವಿಧ ಉತ್ತರ ರಾಜ್ಯಗಳಿಂದ ತಾಜಾ ಬೆಳೆ ಬರಲು ಪ್ರಾರಂಭಿಸುತ್ತದೆ. ಡಿಸೆಂಬರ್ ತಿಂಗಳಿನಿಂದ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಕಳೆದ ವರ್ಷಕ್ಕೆ ಹೋಲಿಸಿದರೆ ಟೊಮೇಟೊ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಅಗತ್ಯ ತರಕಾರಿಯ ಬೆಲೆ(Vegetable Price) ಗಗನಮುಖಿಯಾಗಿರುವುದರಿಂದ ದೇಶದ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಈರುಳ್ಳಿ(Onion Price)ಯ ವಿಷಯದಲ್ಲಿ ಚಿಲ್ಲರೆ ಬೆಲೆಗಳು 2020 ಮತ್ತು 2019ರಲ್ಲಿ ಚಾಲ್ತಿಯಲ್ಲಿದ್ದ ಮಟ್ಟಕ್ಕಿಂತಲೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ. ‘ಡಿಸೆಂಬರ್ ಆರಂಭದಿಂದಲೇ ಉತ್ತರ ಭಾರತದ ರಾಜ್ಯಗಳಿಂದ ಟೊಮೇಟೊ ಆಗಮನವಾಗಲಿದೆ. ಇದು ಮಾರುಕಟ್ಟೆಯಲ್ಲಿ ಅಗತ್ಯ ತರಕಾರಿಯ ಲಭ್ಯತೆಯನ್ನು ಹೆಚ್ಚಿಸುತ್ತದೆ. ನಂತರ ತೀವ್ರ ಏರಿಕೆ ಕಂಡಿರುವ ಟೊಮೋಟೊ ಬೆಲೆಯು ಇಳಿಕೆಯಾಗಲಿದೆ’ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: RBI Penalty On SBI: SBIಗೆ ಭಾರಿ ದಂಡ ವಿಧಿಸಿದ RBI, ಗ್ರಾಹಕರ ಮೇಲೆ ಏನು ಪರಿಣಾಮ?


ಕಳೆದ ವರ್ಷದ ಅವಧಿಯಲ್ಲಿ 21.32 ಲಕ್ಷ ಟನ್‌ಗಳಿಗೆ ಹೋಲಿಸಿದರೆ ಈ ವರ್ಷ ನವೆಂಬರ್‌ನಲ್ಲಿ ಕೇವಲ 19.62 ಲಕ್ಷ ಟನ್ ಟೊಮೇಟೊ ಆಗಮನವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಅಕಾಲಿಕ ಮಳೆಯಿಂದ ಸೆಪ್ಟೆಂಬರ್ ಅಂತ್ಯದಿಂದ ಚಿಲ್ಲರೆ ಟೊಮೇಟೊ ಬೆಲೆ(Tomato Price) ಏರಿಕೆಯಾಗಿದ್ದು, ಈ ರಾಜ್ಯಗಳಿಂದ ಬೆಳೆ ಹಾನಿ ಮತ್ತು ವಿಳಂಬಕ್ಕೆ ಕಾರಣವಾಗಿದೆ ಎಂದು ಸಚಿವಾಲಯ ತಿಳಿಸಿದೆ.


ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ(Karnataka)ದಲ್ಲಿ ಭಾರೀ ಮಳೆಯಿಂದ ಉತ್ತರ ಭಾರತದ ರಾಜ್ಯಗಳಿಂದ ಟೊಮೇಟೊ ತಡವಾಗಿ ಆಗಮಿಸಿದ್ದು, ಇದು ಪೂರೈಕೆಗೆ ಅಡ್ಡಿಪಡಿಸಿತು ಮತ್ತು ಮಳೆಯಿಂದ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.


ಟೊಮೇಟೊ ಬೆಲೆ(Tomato Price) ಹೆಚ್ಚು ಅಸ್ಥಿರವಾಗಿದೆ ಎಂದು ಹೇಳಿರುವ ಸಚಿವಾಲಯ, ಪೂರೈಕೆ ಸರಪಳಿಯಲ್ಲಿ ಯಾವುದೇ ಸಣ್ಣ ಅಡೆತಡೆಗಳು ಅಥವಾ ಭಾರೀ ಮಳೆಯಿಂದ ಉಂಟಾಗುವ ಬೆಳೆ ಹಾನಿಯು ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ಹೇಳಿದೆ. ಸದ್ಯ ಭಾರೀ ಏರಿಕೆ ಕಂಡಿರುವ ಟೊಮೇಟೊ ಬೆಲೆ ಸಹಜಸ್ಥಿತಿಗೆ ಮರಳುತ್ತದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾಗುತ್ತಿದ್ದಂತೆ ಬೆಲೆಗಳು ಕುಸಿಯುತ್ತವೆ. ಹೀಗಾಗಿ ಜನರು ಸ್ವಲ್ಪ ದಿನ ತಾಳ್ಮೆಯಿಂದ ಕಾಯಬೇಕು ಎಂದು ಸಚಿವಾಲಯ ತಿಳಿಸಿದೆ.


ಇದನ್ನೂ ಓದಿ: Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ


ಹೆಚ್ಚುವರಿ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಈರುಳ್ಳಿ ಸೇರಿದಂತೆ ವಿವಿಧ ತರಕಾರಿಗಳ ಬೆಲೆ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿದೆ. ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎಫ್) ಅಡಿಯಲ್ಲಿ 2.08 ಲಕ್ಷ ಟನ್‌ಗಳ ಬಫರ್ ಈರುಳ್ಳಿ ಸ್ಟಾಕ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.