ನವದೆಹಲಿ: SBI Door Step Banking - ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೊಂದು ಸಂತಸದ ಸುದ್ದಿ ಪ್ರಕಟಗೊಂಡಿದೆ.  ಸಾಮಾನ್ಯವಾಗಿ ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೊರೊನಾದ ಕಾಲದಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಡೋರ್ ಸ್ಟೆಪ್ ಬ್ಯಾಂಕಿಂಗ್ ವ್ಯವಸ್ಥೆ ಕೂಡ ಆರಂಭಿಸಿದೆ. ಈ ವ್ಯವಸ್ಥೆಯ ಅಡಿ ನಿಮಗೆ ಹಣ ಹಿಂಪಡೆಯುವಿಕೆಯಿಂದ ಹಿಡಿದು, ಪೆ ಆರ್ಡರ್ಸ್, ಹೊಸ ಚೆಕ್ ಬುಕ್, ಹೊಸ ಚೆಕ್ ಬುಕ್ ವಿನಂತಿಗೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಮನೆಯಲ್ಲಿಯೇ ಕುಳಿತು ಹಣ ಪಡೆಯುವ ಮಿನಿಮಮ್ ಲಿಮಿಟ್ ರೂ.1000 ಆಗಿದೆ. ಇದರ ಅಡಿ ನೀವು ಮ್ಯಾಕ್ಸಿಮಮ್ ರೂ.20000 ಹಣ ಪಡೆಯಬಹುದು. ಕ್ಯಾಶ್ ವಿಥ್ ಡ್ರಾ ಮಾಡುವ ಮೊದಲು ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣ ಇರಬೇಕು. ಹಣ ಇರದಿದ್ದರೆ, ನಿಮ್ಮ ವಹಿವಾಟು ರದ್ದಾಗಲಿದೆ.


ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ SBI
ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬರೆದುಕೊಂಡಿರುವ ಬ್ಯಾಂಕ್, ಬ್ಯಾಂಕು ಇದೀಗ ನಿಮ್ಮ ಮನೆಬಾಗಿಲಿಗೆ ಬರಲಿದೆ. ಬ್ಯಾಂಕ್ ನ 'ಡೋರ್ ಸ್ಟೆಪ್ ಬ್ಯಾಂಕಿಂಗ್' ಸೇವೆಗಾಗಿ ಇಂದೇ ಹೆಸರನ್ನು ನಮೂದಿಸಿ. ಹೆಚ್ಚಿನ ಮಾಹಿತಿಗಾಗಿ https://bank.sbi/dsb ಲಿಂಕ್ ಮೇಲೆ ಕ್ಲಿಕ್ಕಿಸಿ ಅಥವಾ 1800 1037 188 ಹಾಗೂ 1800 1213 721 ಟೋಲ್ ಫ್ರೀ ನಂಬರ್ ಗಳನ್ನು ಡೈಲ್ ಮಾಡಿ ಎಂದು ಹೇಳಿದೆ.


PM Kisan : ಪತಿ ಪತ್ನಿ ಇಬ್ಬರೂ ಪಡೆಯಬಹುದೇ ಯೋಜನೆಯ ಲಾಭ ? ಏನು ಹೇಳುತ್ತದೆ ನಿಯಮ


ಡೋರ್ ಸ್ಟೆಪ್ ಬ್ಯಾಂಕಿಂಗ್ ವಿಶೇಷತೆ
>> ಇದಕ್ಕಾಗಿ ಮೊದಲು ನೀವು ಹೋಂ ಬ್ರಾಂಚ್ ನಲ್ಲಿ ಹೆಸರನ್ನು ನಮೂದಿಸಬೇಕು.
>> ಎಲ್ಲಿಯವರೆಗೆ ಕಾಂಟಾಕ್ಟ್ ಸೆಂಟರ್ ನಲ್ಲಿ ಈ ಸೌಲಭ್ಯ ಪೂರ್ಣಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ನೀವು ಹೋಂ ಬ್ರಾಂಚ್ ನಲ್ಲಿಯೇ ಇದಕ್ಕಾಗಿ ಅರ್ಜಿ ಸಲ್ಲಿಸಬಹುದು.
>> ಹಣ ಜಮಾ ಮಾಡುವ ಹಾಗೂ ಹಿಂಪಡೆಯವ ಗರಿಷ್ಟ ಮಿತಿ ರೂ.20000 ಆಗಿರಲಿದೆ.
>> ಎಲ್ಲಾ  Non-Financial Transactions ಗಳಿಗಾಗಿ ಸೇವಾ ಶುಲ್ಕ ರೂ.60+GST ಮತ್ತು Financial Transaction ಗಳಿಗಾಗಿ ರೂ.100 +GST ಇರಲಿದೆ. 
>> ಹಣ ಹಿಂಪಡೆಯಲು ಚೆಕ್ ಹಾಗೂ ವಿಥ್ ಡ್ರಾವಲ್ ಫಾರ್ಮ್ ಜೊತೆಗೆ ಪಾಸ್ ಬುಕ್ ಅವಶ್ಯಕತೆ ಇರಲಿದೆ.


ಇದನ್ನೂ ಓದಿ- Petrol-Diesel Prices : ವಾಹನ ಸವಾರರ ಗಮನಕ್ಕೆ : ಪೆಟ್ರೋಲ್ ಸ್ಥಿರ, ಡೀಸೆಲ್ ಬೆಲೆ 13 ರಿಂದ 18 ಪೈಸೆ ಏರಿಕೆ!


ಯಾರಿಗೆ ಈ ಸೌಲಭ್ಯ ಸಿಗುವುದಿಲ್ಲ
ಜಂಟಿ ಖಾತೆ, ಮೈನರ್ ಖಾತೆ, ನಾನ್-ಪರ್ಸನಲ್ ಅಕೌಂಟ್ ಹಾಗೂ ಯಾವ ಗ್ರಾಹಕರ ರಜಿಸ್ಟರ್ಡ್ ಹೋಮ್ ಅಡ್ರೆಸ್ಸ್ 5 ಕಿ.ಮೀ ವ್ಯಾಪ್ತಿಯಲ್ಲಿ ಇರುವವರಿಗೆ ಈ ಸೌಲಭ್ಯ ನೀಡಲಾಗುವುದಿಲ್ಲ. 


ಇದನ್ನೂ ಓದಿ- Today Gold-Silver Rate : ಚಿನ್ನ ಖರೀದಿದಾರರಿಗೆ ಇದು ಸರಿಯಾದ ಸಮಯ : ಇಳಿಕೆಯಾದ ಚಿನ್ನದ ಬೆಲೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ