ನವದೆಹಲಿ: ಗೂಗಲ್ ಸಹ-ಸಂಸ್ಥಾಪಕ ಮತ್ತು ವಿಶ್ವದ 6ನೇ ಶ್ರೀಮಂತ ವ್ಯಕ್ತಿ ಸೆರ್ಗೆ ಬ್ರಿನ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ 3 ವರ್ಷಗಳ ದಾಂಪತ್ಯ ಜೀವನ ಮುಕ್ತಾಯಗೊಳಿಸಲು ಅವರು ನಿರ್ಧರಿಸಿದ್ದಾರೆ. ಸೆರ್ಗೆ ಬ್ರಿನ್ ಕಳೆದ 4 ವರ್ಷಗಳಲ್ಲಿ ಇದೇ ರೀತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 3ನೇ ಮೆಗಾ ಬಿಲಿಯನೇರ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಬ್ರಿನ್ ತಮ್ಮ ಪತ್ನಿ ನಿಕೋಲ್ ಶಾನಹಾನ್ ಅವರೊಂದಿಗಿನ ವಿವಾಹ ವಿಸರ್ಜಿಸಲು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ತಮ್ಮಿಬ್ಬರ ನಡುವಿನ ‘ಸರಿಪಡಿಸಲಾಗದ ವ್ಯತ್ಯಾಸಗಳನ್ನು’ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರಂತೆ. 3 ವರ್ಷದ ಪುತ್ರನನ್ನು ಹೊಂದಿರುವ ದಂಪತಿ ಪರಸ್ಪರ ಬೇರೆ ಬೇರೆಯಾಗುತ್ತಿರುವ ವಿವರಗಳನ್ನು ಗೌಪ್ಯವಾಗಿಡಲು ಕ್ರಮ ಕೈಗೊಂಡಿದ್ದು, ತಮ್ಮ ದಾಖಲಾತಿಗಳಿಗೆ ಮೊಹರು ಮಾಡುವಂತೆ ನ್ಯಾಯಾಲಯಕ್ಕೆ ವಿನಂತಿಸಿದ್ದಾರೆ.


ಇದನ್ನೂ ಓದಿ: Edible Oil Prices Down: ಖಾದ್ಯ ತೈಲ ದರದಲ್ಲಿ ಮತ್ತೆ ಭಾರಿ ಇಳಿಕೆ, ಇಲ್ಲಿದೆ ಹೊಸ ದರ


ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿ ಸಲ್ಲಿಸಿರುವ ಅರ್ಜಿಯ ಪ್ರಕಾರ, ‘ದಂಪತಿ ನಡುವಿನ ಸಂಬಂಧವು ಹೈ ಪ್ರೊಫೈಲ್ ಕೇಸ್ ಆಗಿರುವುದರಿಂದ, ವಿಚ್ಛೇದನ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. 3 ವರ್ಷದ ಮಗುವಿನ ಪಾಲನೆ ಸಮಸ್ಯೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯು ಪ್ರಾಮುಖ್ಯತೆಯನ್ನು ಹೊಂದಿರುವ ಕಾರಣ ಗೌಪತ್ಯೆ ಕಾಯ್ದುಕೊಳ್ಳಲು ದಂಪತಿ ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.


ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ 48 ವರ್ಷದ ಬ್ರಿನ್ ಅವರು 94 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಸಂಪತ್ತನ್ನು ಹೊಂದಿದ್ದಾರೆ. ಗೂಗಲ್‌ನಲ್ಲಿನ ಅವರ ಹಿಡುವಳಿಗಳಿಂದಾಗಿಯೇ ಅತಿಹೆಚ್ಚು ಹಣವನ್ನು ಬ್ರಿನ್ ಸಂಪಾದಿಸಿದ್ದಾರೆ. ಲ್ಯಾರಿ ಪೇಜ್ ಜೊತೆಗೂಡಿ ಬ್ರಿನ್ ಗೂಗಲ್ ಸ್ಥಾಪಿಸಿದ್ದರು. ಬಳಿಕ ಅವರು ಗೂಗಲ್‍ನ ಮೂಲ ಕಂಪನಿ ಆಲ್ಫಾಬೆಟ್ ಇಂಕ್‍ನ ಅಧ್ಯಕ್ಷರಾಗಿದ್ದರು. 2019ರಲ್ಲಿ ಆಲ್ಫಾಬೆಟ್ ಕಂಪನಿ ತೊರೆದರೂ ಸಹ ಬ್ರಿನ್ ಮಂಡಳಿಯಲ್ಲಿ ಇನ್ನೂ ಸ್ಥಾನ ಉಳಿಸಿಕೊಂಡಿದ್ದು, ನಿಯಂತ್ರಣ ಷೇರುದಾರರಾಗಿದ್ದಾರೆ. ಬ್ರಿನ್ ತಮ್ಮ ಮೊದಲ ಪತ್ನಿ 23andMe ಸಹ-ಸಂಸ್ಥಾಪಕಿ ಅನ್ನಿ ವೊಜ್ಸಿಕಿಗೆ 2015ರಲ್ಲಿ ವಿಚ್ಛೇದನ ನೀಡಿದ್ದರು. ಬಳಿಕ ಅವರು ಶಾನಹಾನ್ ಜೊತೆ 2ನೇ ಮದುವೆಯಾಗಿದ್ದರು.


ಇದನ್ನೂ ಓದಿ: 7th Pay Commission: ತುಟ್ಟಿಭತ್ಯೆಯ ಜೊತೆಗೆ ಮನೆ ಬಾಡಿಗೆ ಭತ್ಯೆ ಕೂಡ ಶೇ.3 ರಷ್ಟು ಏರಿಕೆ!


ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ ತಮ್ಮ ವಿವಾಹವನ್ನು ವಿಸರ್ಜಿಸುವುದಾಗಿ ಘೋಷಿಸಿದ 1 ವರ್ಷದ ನಂತರ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಮ್ಯಾಕೆಂಜಿ ಸ್ಕಾಟ್ ವಿಚ್ಛೇದನದ 3 ವರ್ಷಗಳ ನಂತರ ಅವರ ಬ್ರಿನ್ ತಮ್ಮ ಪತ್ನಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. ಗೇಟ್ಸ್ ಮತ್ತು ಮೆಲಿಂಡಾ ವಿಚ್ಚೇದನ ಪಡೆಯುವ ಸಂದರ್ಭದಲ್ಲಿ ಬಿಲ್ ಗೇಟ್ಸ್ 145 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಸಂಪತ್ತನ್ನು ಹೊಂದಿದ್ದರೆ, ಬೆಜೋಸ್ ಮತ್ತು ಸ್ಕಾಟ್ 137 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಆದಾಯ ಹೊಂದಿದ್ದರು. ಈ ಇಬ್ಬರು ಬಿಲಿಯನೇರ್ ವಿಚ್ಚೇದನದ ಬಳಿಕ ಸದ್ಯ ಬ್ರಿನ್ ತಮ್ಮ ದಾಂಪತ್ಯ ಜೀವನ ಅಂತ್ಯಗೊಳಿಸಲು ಅರ್ಜಿ ಸಲ್ಲಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.