ಓಕ್ಲ್ಯಾಂಡ್ : ನೌಕರರಿಗೆ ನೀಡುವ ಸೌಲಭ್ಯಗಳ ವಿಚಾರದಲ್ಲಿ ಐಟಿ ದಿಗ್ಗಜ ಗೂಗಲ್ (GOOGLE) ಜಗತ್ತಿಗೆ ನಂಬರ್ 1 ಕಂಪನಿ.  ಗೂಗಲ್ ನಲ್ಲಿ ಕೆಲಸ ಗಿಟ್ಟಿಸುವುದು ಎಲ್ಲರ ಕನಸು.  ಗೂಗಲ್ ನಲ್ಲಿ ವೇತನ ಕೂಡಾ ಚೆನ್ನಾಗಿ ಸಿಗುತ್ತದೆ.  ಇಂಥ ಗೂಗಲ್ ಕಂಪನಿಯಲ್ಲೇ ಲೇಬರ್ ಯೂನಿಯನ್ ಅಸ್ತಿತ್ವಕ್ಕೆ ಬಂದಿದೆ. ಕಾರ್ಮಿಕರ ಹಕ್ಕಿಗಾಗಿ ಈ ಯೂನಿಯನ್ ಹೋರಾಡಲಿದೆ. 


COMMERCIAL BREAK
SCROLL TO CONTINUE READING

ಅಮೆರಿಕದ ಸಿಲಿಕಾನ್ ವ್ಯಾಲಿಗೆ ಶಾಕ್..!
ಕಾರ್ಮಿಕರಿಗೆ ಉತ್ತಮ ವೇತನ, ಸೌಲಭ್ಯ, ಪರಿಹಾರ  ಇತ್ಯಾದಿ ವಿಚಾರಗಳ ಬಗ್ಗೆ ಯೂನಿಯನ್ ಹೋರಾಟ ನಡೆಸಲಿದೆ. 225ಕ್ಕೂ ಹೆಚ್ಚಿನ ನೌಕರರು ಇದರಲ್ಲಿ ಸದಸ್ಯರಾಗಿದ್ದಾರೆ. ಅಮೆರಿಕಾ ಐಟಿ ಉದ್ಯಮದಲ್ಲಿ ಯೂನಿಯನ್ (Union) ಸೃಷ್ಟಿಯಾಗುತ್ತಿರುವುದು ಇದೇ ಮೊದಲು. ಐಟಿ (IT) ವಲಯದಲ್ಲಿ ಯೂನಿಯನ್ ರಚನೆಗೆ ಅಮೆರಿಕದಲ್ಲಿ (America) ಅವಕಾಶ ಇಲ್ಲ ಎನ್ನಲಾಗಿದೆ. ಹಾಗಾಗಿ ತುಂಬಾ ರಹಸ್ಯವಾಗಿ ಈ ಯೂನಿಯನ್ ಅಸ್ತಿತ್ವಕ್ಕೆ ಬಂದಿದೆ. ಡಿಸೆಂಬರ್ ನಲ್ಲಿ ಅದರ ನಾಯಕರ ಚುನಾವಣೆಯೂ ನಡೆದಿದೆ. ಈ ಯೂನಿಯನ್ ಹೆಸರು, ಅಲ್ಫಾಬೆಟಾ ವರ್ಕರ್ಸ್ ಯೂನಿಯನ್ (Alphabet Workers Union). 


ALSO READ : Dearness Allowance:ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೊಂದು ಸಂತಸದ ಸುದ್ದಿ


ಕಾರ್ಮಿಕರ ಶೋಷಣೆ ಆಗಬಾರದು..!
ರಾಯಿಟರ್ ನ್ಯೂಸ್ ಏಜನ್ಸಿಗೆ ಪತ್ರ ಬರೆದಿರುವ ಯೂನಿಯನ್ ಅಧ್ಯಕ್ಷರು, ಯೂನಿಯನ್ ಉದ್ದೇಶವನ್ನು ಸ್ಫಷ್ಟ ಪಡಿಸಿದ್ದಾರೆ.  ಗೂಗಲ್ ನಲ್ಲಿ (Google) ಕಾರ್ಮಿಕರ ಶೋಷಣೆ ಆಗಬಾರದು. ಅವರಲ್ಲಿ ಭೇದಭಾವ ಮಾಡಬಾರದು.  ಕಾರ್ಮಿಕರು ಸರಿಯಾದ ವೇತನ (Salary) ಪಡೆಯಬೇಕು. ಕಾರ್ಮಿಕರು ಹೆದರದೇ ಕಾರ್ಯ ನಿರ್ವಹಿಸುತ್ತಿರಬೇಕು ಎಂಬುದೇ ಅಲ್ಫಾಬೆಟಾ ವರ್ಕರ್ಸ್ ಯೂನಿಯನ್ ಉದ್ದೇಶ ಎಂದು ಅವರು ಹೇಳಿದ್ದಾರೆ. 


ಗೂಗಲ್ ನಲ್ಲಿ ನಡೆದಿದ್ದಾರೂ ಏನು..?
ಗೂಗಲ್ ನೀತಿಗಳ ವಿರುದ್ಧ ಪ್ರದರ್ಶನ ನಡೆಸಿದ  ಮತ್ತು ಯೂನಿಯನ್ ಮಾಡಲು ಪ್ರಯತ್ನಿಸಿದ್ದ ಕೆಲವು ಕಾರ್ಮಿಕರನ್ನು ಅಸಂವಿಧಾನಿಕ ವಿಧಾನದಲ್ಲಿ ಗೂಗಲ್  ವಿಚಾರಣೆ ನಡೆಸಿತ್ತು ಮತ್ತು ಅವರನ್ನು ನೌಕರಿಯಿಂದ ಕಿತ್ತು ಹಾಕಲಾಗಿತ್ತು ಎಂಬ ಆಪಾದನೆ ಇತ್ತೀಚೆಗೆ ಕಂಪನಿ ಮೇಲೆ ಬಂದಿತ್ತು. 


ALSO READ : SBI ಗ್ರಾಹಕರಿಗೆ ಒಳ್ಳೆಯ ಸುದ್ದಿ, Bank ಸೌಲಭ್ಯಗಳನ್ನು ಈಗ ಮನೆಯಿಂದಲೇ ಪಡೆಯಿರಿ


ಆಪಾದನೆಗೆ ಗೂಗಲ್ ಕೊಟ್ಟ  ಉತ್ತರವೇನು..?
ಈ ಆರೋಪಗಳಿಗೆ ಉತ್ತರಿಸಿರುವ ಗೂಗಲ್,  ಕಂಪನಿ ಯಾವತ್ತಿಗೂ ನೌಕರರ ಹಿತಕ್ಕಾಗಿ ಕೆಲಸ ಮಾಡುತ್ತದೆ.  ಅವರಿಗೆ ಪೂರಕ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ಯಾವಾಗಲೂ ನಡೆಯುತ್ತಿರುತ್ತದೆ.  ಕಾರ್ಮಿಕರು ಕಾರ್ಮಿಕ ಕಾನೂನು ಅಡಿಯಲ್ಲಿ ಬರುತ್ತಾರೆ.  ನಾವು ಮುಂದಿನ ದಿನಗಳಲ್ಲಿ ಕಾರ್ಮಿಕರೊಂದಿಗೆ ನೇರ ಸಂಪರ್ಕದಲ್ಲಿರುತ್ತೇವೆ ಎಂದು ಸ್ಪಷ್ಟೀಕರಣ ಕೊಟ್ಟಿದೆ. 


ಗೂಗಲ್ ನಲ್ಲಿ ವೇತನ ಸಮಸ್ಯೆಯೇ ಅಲ್ಲ:
ನಿಮಗೆ ಗೊತ್ತಿರಲಿ. ಗೂಗಲ್ ನಲ್ಲಿ ಯಾವತ್ತಿಗೂ ವೇತನ ವಿಚಾರದಲ್ಲಿ ವಿವಾದ ತಲೆದೋರುವುದಿಲ್ಲ. ಆದರೆ, ಕಾರ್ಮಿಕರ ನಡುವೆ ರಾಜಕೀಯ ಮತ್ತು ವೈಚಾರಿಕ ಮತಭೇದ ಹೆಚ್ಚಾಗಿ ಕಂಡು ಬರುತ್ತದೆ. ಇದು ವಿವಾದದ ಸ್ವರೂಪ ಪಡೆಯುತ್ತದೆ. ಲೈಂಗಿಕ ಶೋಷಣೆಯ (Sexual Assault) ವಿವಾದಗಳೂ ಕಂಪನಿಯಲ್ಲಿ ಕೇಳಿ ಬರುತ್ತಿರುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.