ನವದೆಹಲಿ: ಸಾಮಾನ್ಯವಾಗಿ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಂದು ಲಾಭದಾಯಕ ವ್ಯವಹಾರವೆಂದು ಪರಿಗಣಿಸಲಾಗುತ್ತದೆ. ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಅಂದರೆ PPF, ಹಿರಿಯ ನಾಗರಿಕ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಇತ್ಯಾದಿಗಳು ಶಾಮೀಳಾಗಿವೆ. ಈ ಯೋಜನೆಗಳು ಎಲ್ಲಾ ವರ್ಗದ ಜನರಿಗಾಗಿ ಇವೆ, ಇವು ತೆರಿಗೆ ಪ್ರಯೋಜನಗಳಿಂದ ಹಿಡಿದು ಖಾತರಿಯ ಆದಾಯದವರೆಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತವೆ. ಹೆಚ್ಚು ಹೆಚ್ಚು ಜನರು ಈ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಏಕೆಂದರೆ ಈ ಯೋಜನೆಗಳು ಒಳಗೊಂಡಿರುವ ಪ್ರಯೋಜನಗಳು ಇದಕ್ಕೆ ಕಾರಣ, ಸರ್ಕಾರಿ ಸಣ್ಣ ಉಳಿತಾಯ ಯೋಜನೆಗಳು ಒಳಗೊಂಡಿರುವ ಪ್ರಯೋಜನಗಳು ಯಾವುವು ತಿಳಿದುಕೊಳ್ಳೋಣ ಬನ್ನಿ (Business News In Kannada)

COMMERCIAL BREAK
SCROLL TO CONTINUE READING

1. ಗ್ಯಾರಂಟಿ ರಿಟರ್ನ್ಸ್
ಸಣ್ಣ ಉಳಿತಾಯ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಅಂದರೆ PPF, ಹಿರಿಯ ನಾಗರಿಕ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಇತ್ಯಾದಿಗಳು ಶಾಮೀಳಾಗಿವೆ. ಈ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳು ಖಾತರಿಯ ಆದಾಯವನ್ನು ನೀಡುತ್ತವೆ. ಈ ಯೋಜನೆಗಳಲ್ಲಿ ನೀವು ಯಾವ ಸಮಯದಲ್ಲಿ ಎಷ್ಟು ಮೊತ್ತವನ್ನು ಪಡೆಯಲಿರುವಿರಿ ಎಂಬುದು ನಿಮಗೆ ತಿಳಿದಿರುತ್ತದೆ. 


2. ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ಥಿರತೆ
ನೀವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ, ಅದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ಥಿರತೆಯನ್ನು ನೀಡುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಸಣ್ಣ ಉಳಿತಾಯ ಯೋಜನೆಗಳು ಸುರಕ್ಷಿತ, ನಿಯಮಿತ ಆದಾಯ ಮತ್ತು ಬಲವಾದ ಆರ್ಥಿಕ ಕಾರ್ಯತಂತ್ರದ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತವೆ.


3. ಆದಾಯ ತೆರಿಗೆ ವಿನಾಯಿತಿ
ಅನೇಕ ಸಣ್ಣ ಉಳಿತಾಯ ಯೋಜನೆಗಳು ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಒದಗಿಸುತ್ತವೆ. ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ, ನೀವು 1.5 ಲಕ್ಷದವರೆಗೆ ಆದಾಯದ ಮೇಲೆ ತೆರಿಗೆಯನ್ನು ಉಳಿಸಬಹುದು. PPF, ಹಿರಿಯ ನಾಗರಿಕ ಉಳಿತಾಯ ಯೋಜನೆ, ಸಮಯ ಠೇವಣಿ ಮತ್ತು ಎಫ್ಡಿ ಯಂತಹ ಯೋಜನೆಗಳು ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಒದಗಿಸುತ್ತವೆ.


ಇದನ್ನೂ ಓದಿ-ಯುಪಿಐ ತಪ್ಪು ವಹಿವಾಟು ನಡೆದಾಗ ಏನು ಮಾಡಬೇಕು? ಚಿಟಿಕೆ ಹೊಡೆಯೋದ್ರಲ್ಲಿ ಈ ರೀತಿ ಹಣ ವಾಪಸ್ ಪಡೆಯಿರಿ!


4. ಕನಿಷ್ಠ ಹೂಡಿಕೆ
ಈ ಯೋಜನೆಗಳಲ್ಲಿ ಹೂಡಿಕೆದಾರರು ಕನಿಷ್ಠ ಹೂಡಿಕೆ ಮಾಡಬಹುದು. ಸಣ್ಣ ಉಳಿತಾಯ ಯೋಜನೆಗಳನ್ನು ಅವಲಂಬಿಸಿದ ಮೊತ್ತವು ₹250 ರಿಂದ ₹1,000 ವರೆಗೆ ಇರುತ್ತದೆ. ಈ ಯೋಜನೆಗಳಲ್ಲಿ ನೀವು ಸಣ್ಣ ಮೊತ್ತವನ್ನು ಸಹ ಹೂಡಿಕೆ ಮಾಡಬಹುದು.


ಇದನ್ನೂ ಓದಿ-ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಈ ಜನರಿಗೆ ಸಿಗಲಿದೆ ಶೇ 15ರಷ್ಟು ಡಿಎ ಹೆಚ್ಚಳದ ಲಾಭ!


5. ಆದಾಯದ ಭರವಸೆ
ಇಂದಿನ ಕಾಲದಲ್ಲಿ, ಜನರು ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳಂತಹ ಅಪಾಯಕಾರಿ ಸ್ಥಳಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಸಣ್ಣ ಉಳಿತಾಯ ಯೋಜನೆಗಳು ಆದಾಯದ ಭರವಸೆಯನ್ನು ನೀಡುತ್ತವೆ. ನಿಶ್ಚಿತ ಬಡ್ಡಿಯೊಂದಿಗೆ, ನೀವು ಮೆಚ್ಯೂರಿಟಿಯಲ್ಲಿ ಎಷ್ಟು ಮೊತ್ತವನ್ನು ಪಡೆಯುವಿರಿ ಎಂಬುದು ನಿಮಗೆ ಮುಂಚಿತವಾಗಿ ತಿಳಿದಿರುತ್ತದೆ. ಭವಿಷ್ಯದಲ್ಲಿ ನೀವು ಆದಾಯವನ್ನು ಪಡೆಯುವ ಭರವಸೆ ಇದೆ ಎಂದರ್ಥ.


ಇದನ್ನೂ ನೋಡಿ -


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ