ಬೆಂಗಳೂರು : ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಕೋಟಿಗಟ್ಟಲೆ ಖಾತೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.ಈ ಸಂದೇಶದಿಂದ ದೂರವಿರುವಂತೆ ಎಸ್‌ಬಿಐ ಖಾತೆದಾರರಿಗೆ ಸರ್ಕಾರ ಸಲಹೆ ನೀಡಿದೆ.ಎಸ್‌ಬಿಐ ಖಾತೆದಾರರು ವಂಚನೆಯ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.ಜನರ ಖಾತೆಗೆ ಕನ್ನ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ನಕಲಿ ಸಂದೇಶಗಳ ಮೂಲಕ ಖಾತೆಯಿಂದ ಹಣ ಡ್ರಾ ಆಗುತ್ತಿದೆ.ಈ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಅಪಾಯದಲ್ಲಿದ್ದಾರೆ SBI ಖಾತೆದಾರರು : 
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐನ ಕೋಟಿಗಟ್ಟಲೆ ಖಾತೆದಾರರು ವಂಚನೆಯ ಭೀತಿ ಎದುರಿಸುತ್ತಿದ್ದಾರೆ.ಈ ಕುರಿತು ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದೆ.ಎಸ್‌ಬಿಐ ಹೆಸರಿನಲ್ಲಿ ಬರುವ ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಹೊರಡಿಸಿರುವ ಸಲಹೆಯಲ್ಲಿ ಹೇಳಲಾಗಿದೆ.ಕಳೆದ ಕೆಲವು ದಿನಗಳಿಂದ,SBI ಖಾತೆದಾರರನ್ನು ರಿವಾರ್ಡ್ ಪಾಯಿಂಟ್‌ಗಳ ಹೆಸರಿನಲ್ಲಿ ವಂಚಿಸಲಾಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಂಚನೆ ಸಂದೇಶದ ಮೂಲಕ ಇಮೇಲ್ ಮತ್ತು ಸಂದೇಶಗಳ ಮೂಲಕ ರಿವಾರ್ಡ್ ಪಾಯಿಂಟ್‌ಗಳ ಆಮಿಷವೊಡ್ಡಿ ಜನರನ್ನು ಸೈಬರ್ ವಂಚನೆಗೆ ಗುರಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. 


ಇದನ್ನೂ ಓದಿ : Arecanut Price Today: ಶಿವಮೊಗ್ಗ & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ


SBIನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಈ ಸಂದೇಶದಿಂದ ದೂರವಿರಿ :   
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೇಗವಾಗಿ ಹರಿದಾಡುತ್ತಿದೆ.ಇದರಲ್ಲಿ ಎಸ್‌ಬಿಐ ನೆಟ್‌ಬ್ಯಾಂಕಿಂಗ್ ರಿವಾರ್ಡ್ ಪಾಯಿಂಟ್ 9980 ರೂ ಎಂದು ಹೇಳಲಾಗಿದೆ.ಸಂದೇಶದಲ್ಲಿ,ಈ ರಿವಾರ್ಡ್ ಪಾಯಿಂಟ್ ಅನ್ನು ರಿಡೀಮ್ ಮಾಡಲು APK ಫೈಲ್ ಅನ್ನು ಡೌನ್‌ಲೋಡ್ ಮಾಡುವಂತೆ ಕೇಳಲಾಗುತ್ತದೆ.ಈ ಸಂದೇಶಗಳನ್ನು ಎಸ್‌ಎಂಎಸ್,ಇಮೇಲ್,ವಾಟ್ಸಾಪ್ ಮೂಲಕ ಜನರಿಗೆ ಕಳುಹಿಸಲಾಗುತ್ತಿದೆ.ಈ ಸಂದೇಶಗಳು ಸಂಪೂರ್ಣ ನಕಲಿ.ಈ ಸಂದೇಶವನ್ನು PIB ಫ್ಯಾಕ್ಟ್ ಚೆಕ್ ನಲ್ಲಿ ನಕಲಿ ಎಂದು ಘೋಷಿಸಲಾಗಿದೆ.ಎಸ್‌ಬಿಐ ತನ್ನ ಗ್ರಾಹಕರಿಗೆ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಯಾವುದೇ ಲಿಂಕ್ ಅನ್ನು ಎಂದಿಗೂ ಕಳುಹಿಸುವುದಿಲ್ಲ ಎಂದು ಹೇಳಿದೆ.APK ಫೈಲ್ ಅನ್ನು ಡೌನ್‌ಲೋಡ್ ಮಾಡದಂತೆ ಜನರಿಗೆ ಬ್ಯಾಂಕ್ ಮತ್ತು ಸರ್ಕಾರವು ಸಲಹೆ ನೀಡಿದೆ.ಯಾವುದೇ ರೀತಿಯ ಬಹುಮಾನ ಇತ್ಯಾದಿಗಳಿಗಾಗಿ ಎಸ್‌ಬಿಐ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜನರಿಗೆ ಸಲಹೆ ನೀಡಲಾಗಿದೆ.  


ಇದನ್ನೂ ಓದಿ : ಸರ್ಕಾರಿ ನೌಕರರ ವೇತನ ಹೆಚ್ಚಳ ಯಾವಾಗ? ಎಲ್ಲಾ ಸಂದೇಹಗಳಿಗೆ ಸಿಕ್ಕಿದೆ ಫುಲ್ ಕ್ಲಾರಿಟಿ !ಈ ದಿನ ಖಾತೆಗೆ ಸೇರುವುದು ಭಾರೀ ಮೊತ್ತ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ