7th pay commission :ಈ ವರ್ಷ ಕೇಂದ್ರ ನೌಕರರಿಗೆ ಅದ್ಭುತ ಉಡುಗೊರೆಗಳನ್ನು ತಂದಿದೆ. ಜನವರಿಯಿಂದ ಕೇಂದ್ರ ಸರ್ಕಾರಿ ನೌಕರರು  50 ಪ್ರತಿಶತ ತುಟ್ಟಿಭತ್ಯೆ  ಪಡೆಯಲಿದ್ದಾರೆ.  ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ ಹೆಚ್ಚಾಗುವುದು ಮಾತ್ರವಲ್ಲದೆ,  ಅವರ ವೇತನದಲ್ಲಿಯೂ ಭಾರೀ ಏರಿಕೆ ಕಾಣಲಿದೆ. ಹೌದು ಈ ಬಾರಿ ತುಟ್ಟಿಭತ್ಯೆ ಏರಿಕೆ ಘೋಷಣೆಯಾಗುತಿದ್ದಂತೆಯೇ  ನೌಕರರ ವೇತನ 9000 ರೂ.ಯಷ್ಟು ಹೆಚ್ಚಾಗಲಿದೆ. ಡಿಎ ಹೆಚ್ಚಳಕ್ಕೆ ಮಾರ್ಚ್ ನಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡುವ ನಿರೀಕ್ಷೆಯಿದೆ. 


COMMERCIAL BREAK
SCROLL TO CONTINUE READING

ನೌಕರರ ವೇತನ ಹೆಚ್ಚಳದ ನಿಯಮವೇನು? : 
ಕೇಂದ್ರ ನೌಕರರ ತುಟ್ಟಿಭತ್ಯೆ ಪ್ರತಿ ಆರು ತಿಂಗಳಿಗೊಮ್ಮೆ ಹೆಚ್ಚಾಗುತ್ತದೆ. ಪ್ರಸ್ತುತ, ಕೇಂದ್ರ ನೌಕರರು 46 ಶೇಕಡಾ ದರದಲ್ಲಿ ತುಟ್ಟಿ ಭತ್ಯೆಯನ್ನು ಪಡೆಯುತ್ತಿದ್ದಾರೆ. ಜನವರಿ 2024 ರಿಂದ, ತುಟ್ಟಿಭತ್ಯೆ 50 ಪ್ರತಿಶತಕ್ಕೆ ಏರುತ್ತದೆ. ತುಟ್ಟಿಭತ್ಯೆಯನ್ನು ಶುನ್ಯಕ್ಕೆ ಇಳಿಸಲಾಗುತ್ತದೆ. ಈಗ ಕೇಂದ್ರ ಸರ್ಕಾರ ಮಾಡಿರುವ ನಿಯಮಗಳು ಇಲ್ಲಿ ಅನ್ವಯಿಸುತ್ತವೆ. ತುಟ್ಟಿಭತ್ಯೆ 50 ಪ್ರತಿಶತ ತಲುಪಿದ ತಕ್ಷಣ ಅದನ್ನು ಶೂನ್ಯಕ್ಕೆ ಇಳಿಸುವ ನಿಯಮವನ್ನು 2016 ರಲ್ಲಿ, ಸರ್ಕಾರ ಮಾಡಿತ್ತು.


ಇದನ್ನೂ ಓದಿ : Gold investment: ಚಿನ್ನದ ನಾಣ್ಯಗಳ ಮೇಲಿನ ಹೂಡಿಕೆಯ ಪ್ರಯೋಜನಗಳು


ಮೂಲ ವೇತನ ಹೆಚ್ಚಳ ಹೇಗೆ?
2016ರಲ್ಲಿ ಸರ್ಕಾರ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗಿತ್ತು.ಆಗ ನೌಕರರು ಹಿಂದಿನ ತುಟ್ಟಿಭತ್ಯೆಯನ್ನು ತಮ್ಮ ಮೂಲ ವೇತನಕ್ಕೆ ಸೇರಿಸಿ ನೀಡಲಾಗಿತ್ತು. ಈಗ ಮತ್ತೊಮ್ಮೆ ಅಂಥದ್ದೇ ಘಟನೆ ಮರುಕಳಿಸುತ್ತಿದೆ.  ಹಾಗಾಗಿ ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ಮತ್ತೊಮ್ಮೆ ಸೇರಿಸಿ ವೇತನ ಹೆಚ್ಚಿಸುವ ಯೋಜನೆ ಇದೆ.  


ಶೂನ್ಯವಾಗುವುದು ತುಟ್ಟಿಭತ್ಯೆ :  
2016 ರ ಜ್ಞಾಪಕ ಪತ್ರದಲ್ಲಿ, ತುಟ್ಟಿಭತ್ಯೆ (ಡಿಎ) 50 ಪ್ರತಿಶತ ಅಂದರೆ ಮೂಲ ವೇತನದ 50% ತಲುಪಿದ ತಕ್ಷಣ ಅದನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಹೇಳಲಾಗಿದೆ. ಅಂದರೆ, ಶೂನ್ಯವಾದ ನಂತರ, ಪ್ರಸ್ತುತ ತುಟ್ಟಿಭತ್ಯೆಯು 1 ಪ್ರತಿಶತ, 2 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ತುಟ್ಟಿಭತ್ಯೆ 50 ಪ್ರತಿಶತ ತಲುಪಿದ ತಕ್ಷಣ, ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಇದರೊಂದಿಗೆ ನೌಕರರು ತಮ್ಮ ವೇತನ ಪರಿಷ್ಕರಣೆಗೆ ಹೆಚ್ಚು ಸಮಯ ಕಾಯಬೇಕಾಗಿಲ್ಲ.


ಇದನ್ನೂ ಓದಿ :  New Rule: ತಂಬಾಕು-ಪಾನ್ ಮಸಾಲಾಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆ, ಏಪ್ರಿಲ್ 1 ರಿಂದ 1 ಲಕ್ಷ ರೂ. ದಂಡ


9000 ರೂ ಹೆಚ್ಚಳ ಹೇಗೆ ?:
ಪ್ರಸ್ತುತ, ಪೇ-ಬೆಡ್ ಹಂತ-1 ನಲ್ಲಿ ಮೂಲ ವೇತನವು 18000 ರೂ. ಇದು ಅತ್ಯಂತ ಕನಿಷ್ಠ  ಮೂಲ ವೆತನವಾಗಿದೆ. ಆ ಪ್ರಕಾರ ಲೆಕ್ಕಾಚಾರ ಹಾಕಿ ನೋಡಿದರೆ, ಒಟ್ಟು 7,560 ರೂ.ಗಳು ಪ್ರಸ್ತುತ ತುಟ್ಟಿಭತ್ಯೆಯಾಗಿ  ಸಿಗುತ್ತಿದೆ. ತುಟ್ಟಿಭತ್ಯೆ 50 ಪ್ರತಿಶತಕ್ಕೆ ತಲುಪಿದಾಗ   ನೌಕರರು ಪಡೆಯುವ ಡಿಎ ಕೂಡಾ  9000 ರೂ.ಆಗುತ್ತದೆ. ಅಂದರೆ ತುಟ್ಟಿಭತ್ಯೆ 50 ಶೇ. ದಷ್ಟು   ತಲುಪಿದಾಗ ಅದನ್ನು ಶೂನ್ಯಕ್ಕೆ ಇಳಿಸಿ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. 


ಹೊಸ ವೇತನ ಶ್ರೇಣಿ :
ಹೊಸ ವೇತನ ಶ್ರೇಣಿಯನ್ನು (ಕೇಂದ್ರ ವೇತನ ಆಯೋಗ) ಜಾರಿಗೆ ತಂದಾಗ, ನೌಕರರು ಪಡೆಯುವ ಡಿಎಯನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ನಿಯಮದಂತೆ ನೌಕರರು ಪಡೆಯುವ ಶೇ.100 ಡಿಎಯನ್ನು ಮೂಲ ವೇತನಕ್ಕೆ ಸೇರಿಸಬೇಕು ಆದರೆ ಇದು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಹಣಕಾಸಿನ ಪರಿಸ್ಥಿತಿಯು ಇದಕ್ಕೆ ಅಡ್ಡಿ ಉಂಟು ಮಾಡುತ್ತದೆ. 2006ರಲ್ಲಿ ಆರನೇ ವೇತನ ಶ್ರೇಣಿ ಬಂದಾಗ ಐದನೇ ವೇತನ ಶ್ರೇಣಿಯಲ್ಲಿ ಡಿಸೆಂಬರ್ ವರೆಗೆ ಶೇ.187 ಡಿಎ ನೀಡಲಾಗುತ್ತಿತ್ತು. ಸಂಪೂರ್ಣ ಡಿಎಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಯಿತು. ಆದ್ದರಿಂದ ಆರನೇ ವೇತನ ಶ್ರೇಣಿಯ ಗುಣಾಂಕ 1.87 ಆಗಿತ್ತು. ನಂತರ ಹೊಸ ಪೇ ಬ್ಯಾಂಡ್ ಮತ್ತು ಹೊಸ ದರ್ಜೆಯ ವೇತನವನ್ನು ರಚಿಸಲಾಯಿತು. ಆದರೆ ಇದಕ್ಕೆ 3 ವರ್ಷ ಬೇಕಾಯಿತು ಎನ್ನುವುದು ಕೂಡಾ ಗಮನಿಸಬೇಕಾದ ಅಂಶ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ