ಬೆಂಗಳೂರು : 2023 ರ ಎರಡನೇ ಹಂತದ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರು ಕುತೂಹಲದಿಂದ ಕಾಯುತ್ತಿದ್ದಾರೆ.  ಇತ್ತೀಚಿನ ವರದಿಗಳ ಪ್ರಕಾರ ಸಕಾರಾತ್ಮಕ ಮಾಹಿತಿಯೊಂದು ಹೊರ ಬಿದ್ದಿದೆ. ತುಟ್ಟಿಭತ್ಯೆ ಏರಿಕೆ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ. ವರದಿಗಳ ಪ್ರಕಾರ, ನವರಾತ್ರಿ ಮತ್ತು ದೀಪಾವಳಿ ನಡುವೆ ಡಿಎ ಹೆಚ್ಚಳ ಘೋಷಣೆಯಾಗಲಿದೆ ಎಂದು  ನಿರೀಕ್ಷಿಸಲಾಗಿದೆ. ಹಿಂದಿನ ವರದಿಗಳು ಕೇಂದ್ರ ನೌಕರರ ಡಿಎಯನ್ನು ಶೇಕಡಾ 3ರಷ್ಟು ಹೆಚ್ಚಿಸಲಾಗುವುದು ಎಂದು ಹೇಳಿತ್ತು. ಆದರೆ, ಈ ಅಂಕಿ ಅಂಶವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯು) ಆಧರಿಸಿ ಡಿಎ ಲೆಕ್ಕಾಚಾರದ ಸೂತ್ರದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ಶೇಕಡಾ 4 ರಷ್ಟು ಹೆಚ್ಚಳವನ್ನು ಪಡೆಯುತ್ತಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಸಿಗಲಿದೆ ಸಿಹಿ ಸುದ್ದಿ : 


ನೌಕರರ ತುಟ್ಟಿಭತ್ಯೆ ಶೇ.3 ರಷ್ಟು ಹೆಚ್ಚಳವಾದರೆ ಒಟ್ಟು ತುಟ್ಟಿಭತ್ಯೆ ಶೇಕಡಾ 45 ಕ್ಕೆ ಏರಲಿದೆ. ಈ ಬಾರಿ ನೌಕರರ ತುಟ್ಟಿಭತ್ಯೆ ಶೇಕಡಾ 4 ರಷ್ಟು ಹೆಚ್ಚಳವಾಗುವ ಮೂಲಕ ಕೇಂದ್ರ ಉದ್ಯೋಗಿಗಳ ಒಟ್ಟು ಡಿಎ ಶೇಕಡಾ 46 ಕ್ಕೆ  ಏರಲಿದೆ ಎಂದು  2023 ರ ಆರಂಭದಲ್ಲಿ ಹೇಳಲಾಗಿತ್ತು. ಅಂದರೆ ಈ ಹೆಚ್ಚಳ ಅಖಿಲ ಭಾರತ ರೈಲ್ವೇ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಅವರು ವ್ಯಕ್ತಪಡಿಸಿದ ನಿರೀಕ್ಷೆಗಿಂತ ಹೆಚ್ಚಾಗಿರಲಿದೆ.  "ನಾವು ತುಟ್ಟಿಭತ್ಯೆಯಲ್ಲಿ ನಾಲ್ಕು ಶೇಕಡಾ ಪಾಯಿಂಟ್ ಹೆಚ್ಚಳವನ್ನು ಕೇಳುತ್ತಿದ್ದೇವೆ. ಆದರೆ ಈ ಬಾರಿ ಡಿಎ ಹೆಚ್ಚಳ ಶೇಕಡಾ ಮೂರು ಅಂಕಗಳಿಗಿಂತ ಸ್ವಲ್ಪ ಹೆಚ್ಚು ಇರುತ್ತದೆ ಎಂದಿದ್ದಾರೆ. ದಶಮಾಂಶ ಬಿಂದುವನ್ನು ಡಿಎ ಏರಿಸುವಲ್ಲಿ ಸರ್ಕಾರವು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.  ಹೀಗಾಗಿ ಡಿಎ ಏರಿಕೆ ಮೂರು ಪ್ರತಿಶತ ಇರುತ್ತದೆ ಎಂದು ಹೇಳಿದ್ದರು. 


ಇದನ್ನೂ ಓದಿ : ಬ್ಯಾಂಕ್ ಸಾಲ ಪಡೆದವರಿಗೆ ಆರ್ ಬಿಐ ನೀಡಲಿದೆ ಪರಿಹಾರ ! ಮುಂದಿನ ತಿಂಗಳ ಆರಂಭದಲ್ಲಿಯೇ ಘೋಷಣೆ ಮಾಡಲಿದೆ ನೀತಿ


ಇನ್ನು ಕೇಂದ್ರ ಸರ್ಕಾರಿ ನೌಕರರಿಗೆ 2023 ಸಾಲಿನ ಎರಡನೇ ಡಿಎ ಹೆಚ್ಚಳ, ಯಾವಾಗ ಘೋಷಿಸಿದರೂ, 7 ನೇ ವೇತನ ಆಯೋಗದ ನಿಯಮಗಳ ಅಡಿಯಲ್ಲಿ ಈ ಹೆಚ್ಚಳ ಜುಲೈ 1, 2023 ರಿಂದ ಜಾರಿಗೆ ಬರಲಿದೆ.


ಹಣದುಬ್ಬರದ ಪ್ರಭಾವವನ್ನು ಸರಿದೂಗಿಸಲು ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ನೀಡಲಾಗುತ್ತದೆ. ಗ್ರಾಹಕ ಬೆಲೆ ಸೂಚ್ಯಂಕದ ಆಧಾರದಲ್ಲಿ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ. ಈ ಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ನವೀಕರಿಸಲಾಗುತ್ತದೆ. ಉದ್ಯೋಗಿಗಳಿಗೆ ಮತ್ತು ನಿವೃತ್ತರಿಗೆ ಹಣದುಬ್ಬರದ ಲೆಕ್ಕಾಚಾರವು ಲೇಬರ್ ಬ್ಯೂರೋ ಮಾಸಿಕ ಪ್ರಕಟಿಸಿದ ಕೈಗಾರಿಕಾ ಕಾರ್ಮಿಕರ (CPI-IW) ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿರುತ್ತದೆ. ಜನವರಿ 1, 2023 ರಿಂದ ಜಾರಿಗೆ ಬರುವಂತೆ ಮಾರ್ಚ್ 24, 2023 ರಂದು  ಡಿಎ ಹೆಚ್ಚಳವನ್ನು ಘೋಷಿಸಲಾಗಿತ್ತು.  


ಇದನ್ನೂ ಓದಿ : ಭರ್ಜರಿ ಇಳಿಕೆ ಕಂಡ ಬಂಗಾರದ ಬೆಲೆ! ನಿರಂತರ ಕುಸಿತದ ಬಳಿಕ ಇವತ್ತೆಷ್ಟಿದೆ ತಿಳಿಯಿರಿ 10 ಗ್ರಾಂ ಚಿನ್ನದ ರೇಟ್


ಮುಂದಿನ ಡಿಎ ಹೆಚ್ಚಳವನ್ನು ಯಾವಾಗ ನಿರೀಕ್ಷಿಸಬಹುದು? :
ಕೇಂದ್ರ ಸರ್ಕಾರ ಯಾವುದೇ ಸಮಯದಲ್ಲಿ  ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ. ಮಾಧ್ಯಮ ವರದಿಗಳ ಪ್ರಕಾರ ದೀಪಾವಳಿಯ ಮೊದಲು ಡಿಎ ಹೆಚ್ಚಳವನ್ನು ಘೋಷಿಸಬಹುದು. ಕೇಂದ್ರ ಸರ್ಕಾರವು ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಆರಂಭದಲ್ಲಿ ಹೊಸ DA/DR ಹೆಚ್ಚಳವನ್ನು ಘೋಷಿಸಬಹುದು ಎಂದು ಇತರ ಕೆಲವು ವರದಿಗಳು ಸೂಚಿಸುತ್ತವೆ . ಆದರೂ ಈ ಬಗ್ಗೆ ಯಾವುದೇ ಅಧಿಕೃತವಾಗಿ ಸರ್ಕಾರ ಏನನ್ನೂ ಹೇಳಿಲ್ಲ.  


ಇದನ್ನೂ ಓದಿ : ವ್ಯವಸ್ಥಿತ ಹೂಡಿಕೆಯ ಯೋಜನೆಗಳಲ್ಲಿ ಎಷ್ಟು ವಿಧಗಳಿವೆ ನಿಮಗೆ ಗೊತ್ತಾ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.