ಬೆಂಗಳೂರು : ಮುಂಬರುವ ತಿಂಗಳುಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಾಕಷ್ಟು ಒಳ್ಳೆಯ ಸುದ್ದಿಗಳು ಸಿಗಲಿವೆ. ಇನ್ನು ಕೆಲವೇ ದಿನಗಳಲ್ಲಿ ತುಟ್ಟಿಭತ್ಯೆ ಏರಿಕೆ ಕುರಿತು ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಜುಲೈ 2023 ರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ನೌಕರರ ಡಿಎ ಹೆಚ್ಚಳವಾಗಲಿದೆ. ಇದಾದ ನಂತರ ನೌಕರರ ವೇತನದಲ್ಲಿ ಗಣನೀಯ ಏರಿಕೆ ಕಂಡು ಬರಲಿದೆ. ಈ ಮೂಲಕ ಹಬ್ಬದ ಸೀಸನ್ ನಲ್ಲಿ ಸರ್ಕಾರಿ ಉದ್ಯೋಗಿಗಳು ಭರ್ಜರಿ ಗಿಫ್ಟ್ ನಿರೀಕ್ಷಿಸಬಹುದು ಎನ್ನಲಾಗಿದೆ.  


COMMERCIAL BREAK
SCROLL TO CONTINUE READING

8ನೇ ವೇತನ ಆಯೋಗ : 
ಈ ಬಾರಿ ಸರ್ಕಾರವು ಎಐಸಿಪಿಇ ಸೂಚ್ಯಂಕ ಆಧರಿಸಿ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಏತನ್ಮಧ್ಯೆ, ಎಂಟನೇ ವೇತನ ಆಯೋಗವನ್ನು ಜಾರಿಗೆ ತರುವಂತೆ ಕೇಂದ್ರ ನೌಕರರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಆದರೆ ಇದಕ್ಕೆ ಕೇಂದ್ರ ಮೋದಿ ಸರ್ಕಾರ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರ ಎಂಟನೇ ವೇತನ ಆಯೋಗದ ಸೂತ್ರವನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ ಎಂದು ಮೂಲಗಳು ತಿಳಿಸಿವೆ. 


ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಮತ್ತೆ ಕುಸಿತ ಕಂಡ ಅಡಿಕೆ ಧಾರಣೆ..!


ಈ ಸೂತ್ರದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕೇಂದ್ರ ನೌಕರರ ವೇತನ ಹೆಚ್ಚಾಗಲಿದೆ. ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ಎಂಟನೇ ವೇತನ ಆಯೋಗದ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲು ಸರ್ಕಾರ ಸಜ್ಜಾಗಿದೆ. ಸರ್ಕಾರ ಶೀಘ್ರದಲ್ಲೇ ಎಂಟನೇ ವೇತನ ಆಯೋಗವನ್ನು ಜಾರಿಗೆ ತರಬಹುದು ಎಂದು ಅಂದಾಜಿಸಲಾಗಿದೆ.


ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಎಂಟನೇ ವೇತನ ಆಯೋಗವನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ ಎಂದು ಹೇಳಿದ್ದರು. ಆದರೆ, ಸದ್ಯದಲ್ಲಿಯೇ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬಹುದು ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮೊದಲು ಎಂಟನೇ ವೇತನ ಆಯೋಗದ ಬಗ್ಗೆ ಸರ್ಕಾರವು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. 


ಇದನ್ನೂ ಓದಿ : ಇಂದು ಮತ್ತೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ ! ಇಂದು ಎಷ್ಟಿದೆ ನೋಡಿ 10 ಗ್ರಾಂ ಚಿನ್ನದ ಬೆಲೆ ?


ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗ :
2013ರಲ್ಲಿ 7ನೇ ವೇತನ ಆಯೋಗ ರಚನೆಯಾಗಿರುವುದು ಗಮನಾರ್ಹ. ಆ ಬಳಿಕ 2016ರಲ್ಲಿ ಅದನ್ನು ಜಾರಿಗೆ ತರಲಾಯಿತು. ಇದಾದ ನಂತರ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗಿದೆ. ಇದೀಗ ಉದ್ಯೋಗಿಗಳ ಭಾಗ್ಯ ಮತ್ತೆ ಬೆಳಗಲಿದೆ. ಹೊಸ ವೇತನ ಆಯೋಗದ ಶಿಫಾರಸುಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೆ ತರಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. 


ಫಿಟ್ಮೆಂಟ್ ಫ್ಯಾಕ್ಟರ್ : 
ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಜಾರಿಗೆ ತಂದರೆ ಫಿಟ್ ಮೆಂಟ್ ಅಂಶ ಹೆಚ್ಚಾಗಲಿದೆ. ಕೇಂದ್ರ ಉದ್ಯೋಗಿಗಳ ಸಂಬಳದಲ್ಲಿ ಫಿಟ್ಮೆಂಟ್ ಅಂಶವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಉದ್ಯೋಗಿಗಳ ಭತ್ಯೆಗಳ ಹೊರತಾಗಿ, ಅವರ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.


ಇದನ್ನೂ ಓದಿ : ಲೋನ್ ಪಡೆಯುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಎಸ್‌ಬಿಐ ! ಹಬ್ಬದ ಋತುವಿನಲ್ಲಿ ಸಾವಿರಾರು ರೂ.ಗಳ ಲಾಭ


ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇ 44ರಷ್ಟು ಹೆಚ್ಚಿಸಲಾಗುವುದು : 
8ನೇ ವೇತನ ಆಯೋಗ ಜಾರಿಯಾದರೆ ಅಥವಾ ಸರ್ಕಾರ ಶೇಕಡವಾರು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ ಕೇಂದ್ರ ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ಉದಾಹರಣೆ ಸಹಿತ ಅರ್ಥಮಾಡಿಕೊಳ್ಳೋಣ. ಪ್ರಸ್ತುತ, ಕೇಂದ್ರೀಯ ಉದ್ಯೋಗಿಗಳಿಗೆ 2.57 ರಷ್ಟು ಫಿಟ್‌ಮೆಂಟ್ ಅಂಶ ನೀಡಲಾಗುತ್ತಿದೆ. ಇದರ ಪ್ರಕಾರ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಆಗಿರುತ್ತದೆ. ಫಿಟ್‌ಮೆಂಟ್ ಅಂಶವು ಶೇಕಡಾ 3.68 ಕ್ಕೆ ಏರಿದರೆ, ಕನಿಷ್ಠ ಮೂಲ ವೇತನವು ಶೇಕಡಾ 44 ಕ್ಕಿಂತ ಹೆಚ್ಚಳವಾಗಿ 18,000 ರಿಂದ 26,000 ಕ್ಕೆ ಏರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.