Gratuty Calculation : ಸರ್ಕಾರ ಇತ್ತೀಚೆಗೆ ಗ್ರಾಚ್ಯುಟಿಗೆ ಸಂಬಂಧಿಸಿದ ನಿಯಮವನ್ನು ಬದಲಾಯಿಸಿದೆ.ಆದರೆ ಈ ನಿಯಮವು ಗ್ರಾಚ್ಯುಟಿ ಮೇಲಿನ ತೆರಿಗೆಗೆ ಸಂಬಂಧಿಸಿದ್ದಾಗಿದೆ.20 ಲಕ್ಷದವರೆಗಿನ ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು ಈಗ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ.ಗ್ರಾಚ್ಯುಟಿ ಎನ್ನುವುದು ಉದ್ಯೋಗಿ ಸಂಸ್ಥೆ ಅಥವಾ ಉದ್ಯೋಗದಾತರಿಂದ ಪಡೆಯುವ ಮೊತ್ತವಾಗಿದೆ.ಗ್ರಾಚ್ಯುಟಿ ಪಡೆಯಬೇಕಾದರೆ ಉದ್ಯೋಗಿ ಕನಿಷ್ಠ 5 ವರ್ಷಗಳ ಕಾಲ ಕಂಪನಿ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡಿರಬೇಕು.ನೌಕರನು ಆ ಕಂಪನಿ ತೊರೆದಾಗ ಅಥವಾ ನಿವೃತ್ತಿಯಾದಾಗ ಸಾಮಾನ್ಯವಾಗಿ ಗ್ರಾಚ್ಯುಟಿಯನ್ನು ಪಾವತಿಸಲಾಗುತ್ತದೆ.ನೌಕರ ಯಾವುದೇ ಕಾರಣದಿಂದ ಅಥವಾ ಅಪಘಾತದಿಂದಾಗಿ ಮರಣಹೊಂದಿದರೆ, ಆ ಸಂದರ್ಭದಲ್ಲಿ ನಾಮಿನಿಗೆ ಗ್ರಾಚ್ಯುಟಿ ಮೊತ್ತವನ್ನು  ಪಾವತಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಗ್ರಾಚ್ಯುಟಿ ಪಡೆಯಬೇಕಾದರೆ ಅರ್ಹತೆ : 
ಗ್ರಾಚ್ಯುಟಿ ಪಾವತಿ ಕಾಯ್ದೆ,1972ರ ಪ್ರಕಾರ,ಗ್ರಾಚ್ಯುಟಿ ಮೊತ್ತವು ಗರಿಷ್ಠ 25 ಲಕ್ಷ ರೂ. ಗ್ರಾಚ್ಯುಟಿ ಪಡೆಯಬೇಕಾದರೆ ಉದ್ಯೋಗಿ ಕನಿಷ್ಠ 5 ವರ್ಷಗಳ ಕಾಲ ಅದೇ ಕಂಪನಿಯಲ್ಲಿ ಉದ್ಯೋಗಿಯಾಗಿರಬೇಕು. ಅದಕ್ಕಿಂತ ಕಡಿಮೆ ಅವಧಿ ಕೆಲಸ ಮಾಡಿದರೆ ಗ್ರಾಚ್ಯುಟಿ ಸಿಗುವುದಿಲ್ಲ.ಒಂದು ಕಂಪನಿಯಲ್ಲಿ 4 ವರ್ಷ 11 ತಿಂಗಳು ಕೆಲಸ ಮಾಡಿದ್ದರೂ ಗ್ರಾಚ್ಯುಟಿ ಸಿಗಿವುದಿಲ್ಲ. ಆದರೆ, ನೌಕರನ ಹಠಾತ್ ಮರಣ ಅಥವಾ ಅಪಘಾತದ ಸಂದರ್ಭದಲ್ಲಿ ಮತ್ತು ಕೆಲಸವನ್ನು ತೊರೆದಾಗ ಈ ನಿಯಮ ಅನ್ವಯವಾಗುವುದಿಲ್ಲ. 


ಇದನ್ನೂ ಓದಿ :  Home Loan Prepayment: ಹೋಮ್ ಲೋನ್ ಪೂರ್ವಪಾವತಿ ಮಾಡುವಾಗ ಈ 5 ವಿಷಯಗಳನ್ನು ನೆನಪಿಡಿ


ಒಟ್ಟು ಗ್ರಾಚ್ಯುಟಿ ಮೊತ್ತವನ್ನು ಲೆಕ್ಕಾಚಾರ ಮಾಡುವುದು ಹೇಗೆ ?: 
(ಅಂತಿಮ ಸಂಬಳ) x (15/26) x (ಕಂಪನಿಯಲ್ಲಿ ಕೆಲಸ ಮಾಡಿದ ವರ್ಷಗಳ ಸಂಖ್ಯೆ) ಆಧಾರದ ಮೇಲೆ ಗ್ರಾಚ್ಯುಟಿ ಲೆಕ್ಕ ಹಾಕಲಾಗುತ್ತದೆ. ಈ ಸೂತ್ರವನ್ನು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳುವುದಾದರೆ:  


ಒಂದು ವೇಳೆ ನೀವು 7 ವರ್ಷಗಳ ಕಾಲ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ಭಾವಿಸೋಣ.ನಿಮ್ಮ ಕೊನೆಯ ವೇತನವು  35000 ರೂ ಆಗಿದ್ದರೆ (ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿದಂತೆ) ಲೆಕ್ಕಾಚಾರವು ಈ ರೀತಿ ಇರುತ್ತದೆ.  
(35000) x (15/26) x (7) =  1,41,346 ರೂಪಾಯಿಯನ್ನು ಪಾವತಿಸಲಾಗುತ್ತದೆ. 


ಲೆಕ್ಕಾಚಾರದಲ್ಲಿ 15/26 ಅರ್ಥವೇನು? : 
ಗ್ರಾಚ್ಯುಟಿಯನ್ನು ವರ್ಷದಲ್ಲಿ 15 ದಿನಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಒಂದು ತಿಂಗಳಲ್ಲಿ ಕೇವಲ 26 ದಿನಗಳನ್ನು ಎಣಿಸಬೇಕು. ಏಕೆಂದರೆ 4 ದಿನಗಳನ್ನು ವಾರದ ರಜೆ ಎಂದು ಪರಿಗಣಿಸಲಾಗುತ್ತದೆ. ಗ್ರಾಚ್ಯುಟಿ ಲೆಕ್ಕಾಚಾರದ ಪ್ರಮುಖ ಅಂಶವೆಂದರೆ ಉದ್ಯೋಗಿ ಅದರಲ್ಲಿ 6 ತಿಂಗಳಿಗಿಂತ ಹೆಚ್ಚು ಕೆಲಸ ಮಾಡಿದರೆ, ಅದನ್ನು ಒಂದು ವರ್ಷ ಎಂದು ಪರಿಗಣಿಸಲಾಗುತ್ತದೆ.ಉದ್ಯೋಗಿ 7 ವರ್ಷ ಮತ್ತು 7 ತಿಂಗಳು ಕೆಲಸ ಮಾಡಿದರೆ ಅದನ್ನು 8 ವರ್ಷ ಎಂದು ಪರಿಗಣಿಸಲಾಗುತ್ತದೆ.ಅದರ ಆಧಾರದ ಮೇಲೆ ಗ್ರಾಚ್ಯುಟಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. 7 ವರ್ಷ 3 ತಿಂಗಳು ಕೆಲಸ ಮಾಡಿದರೆ 7 ವರ್ಷ ಎಂದು ಪರಿಗಣಿಸಲಾಗುತ್ತದೆ. 


ಇದನ್ನೂ ಓದಿ :  ಚುನಾವಣೆ ನಂತರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಬದಲಾಗಲಿದೆ ವೇತನ ಪಡೆಯುವ ನಿಯಮ


ಗ್ರಾಚ್ಯುಟಿ ಎರಡು ವರ್ಗಗಳಲ್ಲಿ ನಿರ್ಧಾರ : 
ಗ್ರಾಚ್ಯುಟಿ ಪಾವತಿ ಕಾಯ್ದೆ, 1972 ನೌಕರರಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದ ಸೂತ್ರವನ್ನು ನಿರ್ಧರಿಸಲು ನೌಕರರನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.ಮೊದಲ ವರ್ಗವು ಕಾಯಿದೆಯ ವ್ಯಾಪ್ತಿಗೆ ಒಳಪಡುವ ನೌಕರರನ್ನು ಒಳಗೊಂಡಿರುತ್ತದೆ. ಆದರೆ ಎರಡನೆಯದು ಕಾಯಿದೆಯಿಂದ ಹೊರಗಿಡಲ್ಪಟ್ಟ ನೌಕರರನ್ನು ಒಳಗೊಂಡಿದೆ.ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವ ಎರಡೂ ರೀತಿಯ ಉದ್ಯೋಗಿಗಳು ಈ ಎರಡು ವರ್ಗಗಳಲ್ಲಿ ಒಳಗೊಳ್ಳುತ್ತಾರೆ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.