ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; NPS ಬದಲು ಸಿಗಲಿದೆ ಹಳೆಯ Pension ಸ್ಕೀಮ್ ಲಾಭ
ಹಳೆಯ ಪಿಂಚಣಿ ಯೋಜನೆ ಲಾಭ ಪಡೆಯಲು ಬಯಸುವ ನೌಕರರು ಮೇ 5 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ. ಅರ್ಜಿ ಸಲ್ಲಿಸದ ನೌಕರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ ಲಾಭ ಪಡೆಯುತ್ತಲೇ ಇರುತ್ತಾರೆ.
ನವದೆಹಲಿ : NPS and Old Pension System: ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಪಟ್ಟಂತೆ ಸರ್ಕಾರ ಪ್ರಕಟಣೆ ಹೊರಡಿಸಿದೆ. ಸರ್ಕಾರಿ ನೌಕರರು 31 ಮೇ 2021 ರವರೆಗೆ ಹಳೆಯ ಪಿಂಚಣಿ ಯೋಜನೆಯ (OPS) ಲಾಭ ಪಡೆಯಬಹುದು. ಡಿಪಾರ್ಟ್ಮೆಂಟ್ ಆಫ್ ಪೆನ್ಷನ್ ಅಂಡ್ ಪೆನ್ಶನರ್ಸ್ ವೆಲ್ಫೇರ್ (DoPPW) ಅಧಿಸೂಚನೆಯ ಮೂಲಕ ಈ ಮಾಹಿತಿಯನ್ನು ನೀಡಿದೆ.
ಹಳೆಯ ಪಿಂಚಣಿ ಯೋಜನೆಗೆ ಮೇ 5 ರೊಳಗೆ ಅರ್ಜಿ ಸಲ್ಲಿಸಬಹುದು :
ಇದರ ಲಾಭ ಪಡೆಯಲು ಬಯಸುವ ನೌಕರರು ಮೇ 5 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ. ಅರ್ಜಿ ಸಲ್ಲಿಸದ ನೌಕರರು ರಾಷ್ಟ್ರೀಯ ಪಿಂಚಣಿ (NPS) ವ್ಯವಸ್ಥೆಯಿಂದ ಲಾಭ ಪಡೆಯುತ್ತಲೇ ಇರುತ್ತಾರೆ. 1 ಜನವರಿ 2004 ರಿಂದ 28 ಅಕ್ಟೋಬರ್ 2009 ರ ನಡುವೆ ನೇಮಕಗೊಂಡ ನೌಕರರಿಗೆ ಸಿಸಿಎಸ್ ಪಿಂಚಣಿ (CCS Pension) ಅಡಿಯಲ್ಲಿ ಮಾತ್ರ ಪಿಂಚಣಿ ಸೌಲಭ್ಯ ಸಿಗುತ್ತದೆ.
ಇದನ್ನೂ ಓದಿ : PM Kisan: ರೈತರ ಖಾತೆಗೆ 8ನೇ ಕಂತು, ನಿಮ್ಮ ಖಾತೆಗೆ ಹಣ ಬಂದಿದೆಯೇ ಈ ರೀತಿ ಪರಿಶೀಲಿಸಿ
ಹಳೆಯ ಪಿಂಚಣಿ ಯೋಜನೆ ಹೆಚ್ಚು ಪ್ರಯೋಜನಕಾರಿ !
ಹಳೆಯ ಪಿಂಚಣಿ ಯೋಜನೆ (OPS) ಎನ್‌ಪಿಎಸ್‌ಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಹಳೆಯ ಯೋಜನೆಯಲ್ಲಿ ನಿವೃತ್ತಿಯ ನಂತರ ಪಿಂಚಣಿದಾರರು ಮತ್ತು ಕುಟುಂಬ ಸದಸ್ಯರಿಗೂ ಫೈನಾನ್ಶಿಯಲ್ ಸೆಕ್ಯೂರಿಟಿ (Financial Security) ಸಿಗುತ್ತದೆ.
ಯಾವ ಉದ್ಯೋಗಿಗಳಿಗೆ ಯೋಜನೆಯ ಲಾಭ ಸಿಗಲಿದೆ ?
1972 ರ ಅಡಿಯಲ್ಲಿ ಬರುವ ರೈಲ್ವೆ ಪಿಂಚಣಿ ನಿಯಮಗಳು ಅಥವಾ CCS ನಿಯಮಗಳ ಅನ್ವಯ ಯಾವುದೇ ರಾಜ್ಯ ಸರ್ಕಾರಿ ಇಲಾಖೆಗಳು ಅಥವಾ ಸ್ವಾಯತ್ತ ಸಂಸ್ಥೆಗಳಿಗೆ ಜನವರಿ 1, 2004 ರ ಮೊದಲು ನೇಮಕಗೊಂಡ ಕೇಂದ್ರ ನೌಕರರಿಗೆ ಮಾತ್ರ ಹಳೆಯ ಪಿಂಚಣಿ ಯೋಜನೆ ಲಾಭ ಸಿಗಲಿದೆ.
ಇದನ್ನೂ ಓದಿ : Old Cheque Book Valid News : ಜೂನ್ ೩೦ರವರೆಗೆ ಮಾತ್ರ ಮಾನ್ಯವಾಗಿರಲಿದೆ ಹಳೆಯ ಚೆಕ್ ಬುಕ್
ಎನ್‌ಪಿಎಸ್ ಎಂದರೇನು?
18 ರಿಂದ 60 ವರ್ಷದೊಳಗಿನ ಜನರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಬಹುದು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ(Bank) ಖಾತೆಗಳನ್ನು ತೆರೆಯಬಹುದು. ಸೆಕ್ಷನ್ 80 CCD ಸೆಕ್ಷನ್ 80 CCD (1) ರ ಅಡಿಯಲ್ಲಿ ನೌಕರರು ಪಿಂಚಣಿ ಯೋಜನೆಯಲ್ಲಿ ಠೇವಣಿಗಳ ಮೇಲೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಸಂಬಳ ಪಡೆಯುವ ನೌಕರರು ತಮ್ಮ ಸಂಬಳದ (Salary) 10 ಪ್ರತಿಶತದವರೆಗೆ ಮತ್ತು ಸಂಬಳ ಪಡೆಯದ ನೌಕರರು ತಮ್ಮ ಒಟ್ಟು ಆದಾಯದ 20 ಪ್ರತಿಶತದವರೆಗೆ ಪಿಂಚಣಿ ಖಾತೆಯಲ್ಲಿ ಜಮಾ ಮಾಡಬಹುದು. ಇದರ ಮೇಲೆ ಅವರಿಗೆ 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ರಿಯಾಯಿತಿ ಸಿಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.