Gruha Lakshmi Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ʼಗೃಹಲಕ್ಷ್ಮಿ ಯೋಜನೆʼಯಿಂದ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಘೋಷಿಸಿದ ಪ್ರಣಾಳಿಕೆಯಂತೆ ಸರ್ಕಾರ ರಚನೆಯಾದ ಬಳಿಕ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಯಿತು.


COMMERCIAL BREAK
SCROLL TO CONTINUE READING

ಇದುವರೆಗೂ ಬರೋಬ್ಬರಿ 1 ಕೋಟಿ 24 ಲಕ್ಷಕ್ಕೂ ಅಧಿಕ ಮನೆಯ ಯಜಮಾನಿಯರು ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ʼಗೃಹಲಕ್ಷ್ಮಿ ಯೋಜನೆʼ ಆರಂಭವಾದಾಗಿನಿಂದ ಹದಿಮೂರು ಕಂತುಗಳ ಹಣ ಅಂದರೆ ಬರೋಬ್ಬರಿ 26 ಸಾವಿರ ರೂ. ಪ್ರತಿಯೊಬ್ಬ ಮನೆ ಯಜಮಾನಿಯ ಅಕೌಂಟ್​ಗೆ ಜಮಾ ಆಗಿದೆ.


ಇದನ್ನೂ ಓದಿ: Gold Price Today: ಚಿನ್ನದ ಬೆಲೆಯಲ್ಲಿ ದಿಢೀರ್‌ ಕುಸಿತ! ಭಾರಿ ಕಡಿಮೆ ಬೆಲೆಗೆ ಸಿಗಲಿದೆ ಚಿನ್ನ?


ಆದರೆ ಕಳೆದ 2 ತಿಂಗಳಿಂದ ಜುಲೈ ಮತ್ತು ಆಗಸ್ಟ್ 2 ತಿಂಗಳ ಕಂತಿನ ಹಣ ಬಂದಿರಲಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ 2 ತಿಂಗಳ ಕಂತಿನ ಹಣ ಜಮಾ ಆಗಿರಲಿಲ್ಲ. ಆದರೆ ಇದೀಗ ಎರಡೂ ಕಂತಿನ ಹಣ ನವರಾತ್ರಿ ಹಬ್ಬದಲ್ಲೇ ಜಮಾ ಆಗುತ್ತದೆ ಅಂತಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.


ಜುಲೈ ಮತ್ತು ಆಗಸ್ಟ್‌ ತಿಂಗಳ ಕಂತಿನ ಹಣವನ್ನು ಹಾಕಿಯೇ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಜುಲೈ ತಿಂಗಳ ಕಂತಿನ ಹಣವನ್ನು ಇದೇ ತಿಂಗಳು ಏಳರಂದು ಹಾಗೂ ಆಗಸ್ಟ್‌ ತಿಂಗಳ ಹಣವನ್ನು ಇದೇ ತಿಂಗಳು 9ರಂದು ಜಮಾ ಮಾಡಲಾಗುತ್ತಿದೆ. 2 ದಿನದ ಅಂತರದಲ್ಲಿ ನಾಲ್ಕು ಸಾವಿರ ರೂ. ಹಣ ಜಮಾ ಮಾಡಲಾಗುತ್ತಿದ್ದು, ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: Good News: ಸಿಲಿಕಾನ್‌ ಸಿಟಿಯಲ್ಲಿ ಮೊದಲ ಆಪಲ್ ಎಕ್ಸ್‌ಕ್ಲೂಸಿವ್ ರಿಟೇಲ್ ಸ್ಟೋರ್


ಇನ್ನೂ ರಾಜ್ಯದ 1 ಲಕ್ಷ 22 ಸಾವಿರ ಗೃಹಲಕ್ಷ್ಮಿಯರಿಗೆ ಐದು ಸಾವಿರ ಕೋಟಿ ರೂ. ಹಣ ಜಮಾವಣೆ ಮಾಡುತ್ತಿರುವುದಾಗಿ ಇದೇ ವೇಳೆ ಸಚಿವರು ಮಾಹಿತಿ ನೀಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಹಣ ಜಮಾ ಮಾಡುತ್ತಿರುವುದು ಮಹಿಳೆಯರಿಗೆ ಸಾಕಷ್ಟು ಖುಷಿ ತಂದುಕೊಟ್ಟಿದೆ. ಒಮ್ಮೆಲೆ ನಾಲ್ಕು ಸಾವಿರ ಹಣ ಬರುತ್ತಿರುವುದು ಹಬ್ಬದಲ್ಲಿ ಅನುಕೂಲ ಆಗಲಿದೆ ಎಂದು ನಾಡಿನ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.