Gruhalakshmi Scheme: ಗೃಹಲಕ್ಷ್ಮಿ ಯೋಜನೆ ಜು.19ರಿಂದ ಜಾರಿ: ಫಲಾನುಭವಿಗಳು ಯಾರು? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ
Gruhalakshmi Scheme 2023: ಜುಲೈ 19ರಂದು ಗೃಹಲಕ್ಷ್ಮಿ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದು, ಜು.20ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ನೋಂದಣಿಗೆ ದಾಖಲೆ ಏನೇನು ಬೇಕು..!? ಇಲ್ಲಿದೆ ಮಾಹಿತಿ
Gruhalakshmi Scheme: ರಾಜ್ಯದ ಮನೆಯೊಡತಿಗೆ ಗುಡ್ ನ್ಯೂಸ್ ನೀಡಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ತನ್ನ ನಾಲ್ಕನೇ ಗ್ಯಾರಂಟಿ ಯೋಜನೆ ಜಾರಿಗೆ ಡೇಟ್ ಫಿಕ್ಸ್ ಮಾಡಿದೆ. ಇನ್ನು ಜುಲೈ 20ರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಶುರುವಾಗಲಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ರಸ್ತೆ ತಡೆದು ಎಬಿವಿಪಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಜುಲೈ 19ರಂದು ಗೃಹಲಕ್ಷ್ಮಿ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದು, ಜು.20ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಇನ್ನು ಈ ಯೋಜನೆಯ ಅನುಸಾರ ಮನೆಯೊಡತಿ ಖಾತೆಗೆ ಪ್ರತೀ ತಿಂಗಳು ರೂ.2000 ಹಣ ಬರಲಿದೆ.
ನೋಂದಣಿಗೆ ದಾಖಲೆ ಏನೇನು ಬೇಕು..!?
1. ಪಡಿತರ ಚೀಟಿ ಸಂಖ್ಯೆ
2. ಪತಿ-ಪತ್ನಿ ಇಬ್ಬರ ಅಧಾರ್ ಕಾರ್ಡ್ ಜೆರಾಕ್ಸ್
3. ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್ ಅಥವಾ ಬೇರೆ ಬ್ಯಾಂಕ್ ವರ್ಗಾವಣೆ ಬೇಕು ಅಂದಲ್ಲೂ ಅವಕಾಶ
4. ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್
ನೋಂದಣಿ ಹೇಗೆ ಸಲ್ಲಿಕೆ ಮಾಡಬೇಕು:
ಪಡಿತರ ಚೀಟಿಯಲ್ಲಿ ಮನೆಯೊಡತಿ ಲಿಂಕ್ ಮಾಡಿಸಿರುವ ಮೊಬೈಲ್ ನಂಬರ್ ಗೆ ದಿನಾಂಕ, ಸಮಯ ಮತ್ತು ಸ್ಥಳದ ಸಂದೇಶ ಬರಲಿದೆ
ನಿಗದಿತ ದಿನ ಸ್ಥಳೀಯ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬೇಕು
ನೋಂದಣಿಗೆ ಸಂದೇಶ ಬಾರದೇ ಇದ್ರೆ 1902ಗೆ ಕರೆ ಮಾಡಿ ಅಥವಾ 8147500500 ಗೆ ಕರೆ ಮಾಡಿ ಮಾಹಿತಿ ಪಡೆಯಿರಿ
ನಿಗದಿತ ಸಮಯಕ್ಕೆ ಹೋಗಲು ಆಗದಿದ್ದರೆ ಅದೇ ಸೇವಾ ಕೇಂದ್ರಕ್ಕೆ ಸಂಜೆ 5-7ರ ಸಮಯದಲ್ಲಿ ತೆರಳಿ ನೋಂದಣಿ ಸಾಧ್ಯ
ಒಂದು ವೇಳೆ ನೀವು ನಿಗದಿತ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲದಿದ್ದೆ ಚಿಂತೆಯಿಲ್ಲ. ಸರ್ಕಾರವೇ ನೇಮಿಸಿರು ಪ್ರಜಾಪ್ರತಿನಿಧಿಗಳು ನಿಮ್ಮ ಮನೆಯ ಬಳಿಯೇ ಬಂದು ನೋಂದಣಿ ಮಾಡಲಿದ್ದಾರೆ
ಇದನ್ನೂ ಓದಿ: ಕಾಂಗ್ರೆಸ್ ಇನ್ನೂ ಹನಿಮೂನ್ ಪೀರಿಯಡ್‌ನಿಂದ ಹೊರ ಬಂದಿಲ್ಲ : ಬಿ.ವೈ. ವಿಜಯೇಂದ್ರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.