Gruha Lakshmi Yojana: ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರವು ʼಗೃಹಲಕ್ಷ್ಮೀʼ ಯೋಜನೆಯನ್ನು ರೂಪಿಸಿದೆ. ಮಹಿಳೆಯ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹುದೊಡ್ಡದು. ಹೀಗಾಗಿ ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ. ಜಮಾ ಮಾಡಲು ಈ ಯೋಜನೆಯನ್ನು ಅನುಷ್ಠಾನ ಮಾಡಿದೆ. 


COMMERCIAL BREAK
SCROLL TO CONTINUE READING

2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ʼಗೃಹ ಲಕ್ಷ್ಮೀʼ ಯೋಜನೆಯ ಬಗ್ಗೆ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಲಾಗಿತ್ತು. ಅದರಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾಣಕ್ಕೆ ತರಲು ಸಿಎಂ ಸಿದ್ದರಾಮಯ್ಯನವರು ಈ ಯೋಜನೆಗಳ ಘೋಷಣೆ ಮಾಡಿದರು.


ಇದನ್ನೂ ಓದಿ: Zelio Ebikes: ಬಜೆಟ್‌ ಬೆಲೆಗೆ 80KM ಮೈಲೇಜ್‌ ನೀಡುವ ರಿವರ್ಸ್ ಗೇರ್ ‌ಎಲೆಕ್ಟ್ರಿಕ್‌ ಸ್ಕೂಟರ್!


ನಮ್ಮ ರಾಜ್ಯದಲ್ಲಿ ಸುಮಾರು 1 ಕೋಟಿಗಿಂತ ಹೆಚ್ಚಿನ ಮಹಿಳೆಯರು ʼಗೃಹಲಕ್ಷ್ಮೀʼ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಪ್ರತಿ ತಿಂಗಳು ಹಣ ಪಡೆಯುತ್ತಿದ್ದಾರೆ. ಅನೇಕ ಮಹಿಳೆಯರು ಈ ಯೋಜನೆಯ ಹಣವನ್ನು ಪಡೆದು ಚಿನ್ನ ಖರೀದಿಸುವುದು ಸೇರಿದಂತೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. 


ಈಗಾಗಲೇ ʼಗೃಹಲಕ್ಷ್ಮೀʼ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 10 ಕಂತುಗಳ ಹಣವನ್ನು ಜಮಾ ಮಾಡಲಾಗಿದೆ. 11ನೇ ಕಂತಿನ ಹಣ ಕೆಲವೇ ದಿನಗಳಲ್ಲಿ ತಲುಪಬೇಕಿದೆ. ಆದರೆ ಕೆಲವು ಮಹಿಳೆಯರಿಗೆ ಇನ್ನು ಕೂಡ ʼಗೃಹಲಕ್ಷ್ಮೀʼ ಯೋಜನೆಯ ಹಣ ಅವರ ಬ್ಯಾಂಕ್ ಖಾತೆಗೆ ಬರುತ್ತಿಲ್ಲ. ಇದಕ್ಕೆ ಕಾರಣ ಅವರು ಕೆಲವು ದಾಖಲೆಗಳನ್ನು ಸರಿಯಾಗಿ ನೀಡದಿರುವುದು. ಒಂದು ವೇಳೆ ನಿಮಗೆ ʼಗೃಹಲಕ್ಷ್ಮೀʼ ಯೋಜನೆಯ ಹಣ ಇನ್ನೂ ಬರುತ್ತಿಲ್ಲವೆಂದರೆ, ಕೆಲವು ದಾಖಲೆಗಳನ್ನು ಕೂಡಲೇ ನೀಡಬೇಕು. ಈ ಅಗತ್ಯ ದಾಖಲೆಗಳನ್ನು ನೀಡಿದ್ರೆ ನಿಮಗೆ ಈ ಯೋಜನೆಯ ಹಣ ಖಂಡಿತ ಬರುತ್ತದೆ. 


ನೀಡಬೇಕಾದ ಅಗತ್ಯ ದಾಖಲೆಗಳು  


  • ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿದ್ದು, ಅದಕ್ಕೆ ಆಧಾರ್ ನಂಬರ್‌ ಲಿಂಕ್‌ ಮಾಡಿಲ್ಲವೆಂದರೆ ಹಣ ಬರುವುದಿಲ್ಲ. ಹೀಗಾಗಿ ಮೊದಲು ಇದನ್ನು ಸರಿಪಡಿಸಿಕೊಳ್ಳಬೇಕು.

  • ಗೃಹಲಕ್ಷ್ಮೀ ಯೋಜನೆಯ ಹಣ ಬರದಿರುವುದಕ್ಕೆ ಮತ್ತೊಂದು ಕಾರಣ ನಿಮ್ಮ ಬ್ಯಾಂಕ್ ಅಕೌಂಟ್‌ಗೆ e-KYC ಮಾಡಿಸದಿರುವುದು. ಹೀಗಾಗಿ e-KYC ಆಗಿದೆಯೋ ಇಲ್ಲವೋ ಎನ್ನುವುದನ್ನು ಸಹ ನೀವು ಚೆಕ್‌ ಮಾಡ್ಬೇಕು. 

  • ಜೂನ್‌ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದ್ದು, ನಿಮಗೂ ಈ ಹಣ ಬಂದಿದೆಯೋ ಅಂತಾ ಚೆಕ್‌ ಮಾಡಬೇಕು.

  • ನೀವು ಅರ್ಜಿ ಸಲ್ಲಿಸುವಾಗ ನೀಡಿರುವ ಯಾವುದಾದರೂ ದಾಖಲೆಗಳಲ್ಲಿ ಸಮಸ್ಯೆ ಇದ್ದರೆ ಆಗಲೂ ಸಹ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವುದಿಲ್ಲ. ಹೀಗಾಗಿ ನೀವು ಕೊಟ್ಟಿರುವ ದಾಖಲಾತಿಗಳನ್ನು ಒಮ್ಮೆ ಪರಿಶೀಲಿಸಿರಿ.

  • ನಿಮ್ಮ ಬ್ಯಾಂಕ್ ಖಾತೆ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ಯಾ? ಆಧಾರ್ ಕಾರ್ಡ್ ರೇಷನ್ ಕಾರ್ಡ್‌ಗೆ ಲಿಂಕ್ ಆಗಿದ್ಯಾ? ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದ್ಯಾ? ಇದನ್ನು ಪರಿಶೀಲಿಸಬೇಕು.

  • ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಏನಾದರೂ ಸಮಸ್ಯೆ ಇದ್ದರೆ, ತಕ್ಷಣ ಬೇರೆ ಬ್ಯಾಂಕ್‌ನಲ್ಲಿ ಹೊಸ ಖಾತೆ ಓಪನ್‌ ಮಾಡಿ ಅದನ್ನು ಗೃಹಲಕ್ಷ್ಮಿ ಯೋಜನೆಯ ಜೊತೆಗೆ ಲಿಂಕ್‌ ಮಾಡಬೇಕು. ಆಗ ಸಮಸ್ಯೆ ಸರಿಹೋಗುತ್ತದೆ.


ಇದನ್ನೂ ಓದಿ: ಗೃಹ ಸಾಲದ ಮೇಲೆ LIC ಬಂಪರ್ ಆಫರ್.. ಶೇಕಡಾ 35 ರಷ್ಟು ರಿಯಾಯಿತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.