Gruha Lakshmi Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ʼಗೃಹಲಕ್ಷ್ಮಿʼ ಯೋಜನೆ ಹಣ ಲೋಕಸಭಾ ಚುನಾವಣೆ ನಂತರ ಯಜಮಾನಿಯರ ಖಾತೆಗೆ ಬಂದಿಲ್ಲ. ಹಣ ಬಾರದಿರುವುದು ಮಹಿಳೆಯರನ್ನು ಕಂಗೆಡೆಸಿದ್ದು, ಅವರು ಪ್ರತಿನಿತ್ಯ ಬ್ಯಾಂಕ್‌ ಹಾಗೂ ಅಂಗನವಾಡಿಗಳಿಗೆ ಅಲೆಯುವಂತಾಗಿದೆ.


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲಿ ಮೇ 7ರಂದು ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿತ್ತು. ಇದೇ ವೇಳೆ ಮಹಿಳೆಯರ ಖಾತೆಗೆ ಮೇ ತಿಂಗಳ ʼಗೃಹಲಕ್ಷ್ಮಿʼ ಹಣ ಸಂದಾಯವಾಗಿತ್ತು. ಇದಾಗಿ ಎರಡು ತಿಂಗಳು ಕಳೆದರೂ ಮತ್ತೆ ಹಣ ಬರದಿರುವುದು ಮಹಿಳೆಯರಲ್ಲಿ ಗೊಂದಲ ಮೂಡುವಂತೆ ಮಾಡಿದೆ.


ಇದನ್ನೂ ಓದಿ: ದೇಶದ ಪ್ರಪ್ರಥಮ ಗ್ರೀನ್ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿಯ ಉದ್ಘಾಟನೆ


ಇದೀಗ ಈ ಯೋಜನೆಯ ಬಗ್ಗೆ ಮಹತ್ವದ ಅಪ್‌ಡೇಟ್‌ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ʼರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ʼಗೃಹಲಕ್ಷ್ಮಿʼ ಯೋಜನೆಯ ಜೂನ್‌ ಮತ್ತು ಜುಲೈ ತಿಂಗಳ ಹಣ ಹಂತಹಂತವಾಗಿ ಯಜಮಾನಿಯರ ಖಾತೆಗೆ ಜಮಾ ಆಗಲಿದೆʼ ಎಂದಿದ್ದಾರೆ. 


ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜಿಲ್ಲೆಗಳಾದ್ಯಂತ ಹಂತ ಹಂತವಾಗಿ ʼಗೃಹಲಕ್ಷ್ಮಿʼ ಹಣ ವಿತರಣೆಯೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಯೋಜನೆ ಮುಂದುವರಿಯುತ್ತದೆ ಎಂದು ಫಲಾನುಭವಿಗಳಿಗೆ ಭರವಸೆ ನೀಡಿದ್ದಾರೆ.


ಇದನ್ನೂ ಓದಿರಿಲಯನ್ಸ್ ಜಿಯೋ ಮೊದಲ ತ್ರೈಮಾಸಿಕ ಲಾಭ 5,445 ಕೋಟಿ ರೂಪಾಯಿ: ಮುಂದಿನ ವರ್ಷ ಐಪಿಒ ಸಾಧ್ಯತೆ


ಕಳೆದ ಆಗಸ್ಟ್‌ನಲ್ಲಿ ಪ್ರಾರಂಭಿಸಲಾದ ʼಗೃಹಲಕ್ಷ್ಮಿʼ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಅರ್ಹ ಮಹಿಳೆಯರಿಗೆ ಮಾಸಿಕ 2,000 ರೂ.ಗಳ ಆರ್ಥಿಕ ನೆರವು ನೀಡುವ ಗುರಿ ಹೊಂದಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ʼಗೃಹಲಕ್ಷ್ಮಿʼ ಹಣ ಸಿಗದಿರುವುದು ಕೋಟ್ಯಂತರ ಮಹಿಳೆಯರಿಗೆ ಬೇಸರ ತರಿಸಿದೆ. ಅನೇಕರು ಪ್ರತಿದಿನ ಬ್ಯಾಂಕುಗಳಿಗೆ ಎಡತಾಕುತ್ತಿದ್ದು, ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.