1.60 ಲಕ್ಷ ಕೋಟಿ ರೂ. ದಾಟಿದ GST ಸಂಗ್ರಹ: ಹಣಕಾಸು ಸಚಿವಾಲಯ
GST collection: ಆಗಸ್ಟ್ ನಲ್ಲಿ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಶೇ.10ರಷ್ಟು(1.47 ಲಕ್ಷ ಕೋಟಿ ರೂ.) ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 4ನೇ ಬಾರಿಗೆ GST ಕಲೆಕ್ಷನ್ 1.60 ಲಕ್ಷ ರೂ. ಗಡಿ ದಾಟಿದೆ.
ನವದೆಹಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(GST)ಯ ಮೂಲಕ ಸೆಪ್ಟೆಂಬರ್ ತಿಂಗಳಿನಲ್ಲಿ 1,62,712 ಕೋಟಿ ರೂ. ವರಮಾನ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಈ ಬಗ್ಗೆ ಸುದ್ದಿಸಂಸ್ಥೆ ANI ಭಾನುವಾರ ವರದಿ ಮಾಡಿದೆ.
ಇದನ್ನೂ ಓದಿ: ಅಕ್ಟೋಬರ್ ಆರಂಭದಲ್ಲೇ ಕಹಿ! ಭಾರೀ ಏರಿಕೆ ಕಂಡ ಸಿಲಿಂಡರ್ ಬೆಲೆ… ಎಷ್ಟಾಗಿದೆ ನೋಡಿ
ಕಳೆದ ಆಗಸ್ಟ್ ತಿಂಗಳಿನಲ್ಲಿ 1.59 ಲಕ್ಷ ಕೋಟಿ ರೂ. ವರಮಾನ ಸಂಗ್ರಹ ಆಗಿತ್ತು. ಆಗಸ್ಟ್ ನಲ್ಲಿ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಶೇ.10ರಷ್ಟು(1.47 ಲಕ್ಷ ಕೋಟಿ ರೂ.) ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 4ನೇ ಬಾರಿಗೆ GST ಕಲೆಕ್ಷನ್ 1.60 ಲಕ್ಷ ರೂ. ಗಡಿ ದಾಟಿದೆ.
ಕಡಿಮೆ ಹೂಡಿಕೆಯಲ್ಲಿ ಈ ಹಣ್ಣಿನ ಕೃಷಿ ಆರಂಭಿಸಿ, ಮಾರುಕಟ್ಟೆಯಲ್ಲಿ ಇದಕ್ಕಿದೆ ಭಾರಿ ಡಿಮ್ಯಾಂಡ್, ಬಂಪರ್ ಹಣಗಳಿಕೆ ಪಕ್ಕಾ!
2023ರ ಸೆಪ್ಟೆಂಬರ್‍ನಲ್ಲಿ ಸಂಗ್ರಹವಾಗಿರುವ ಒಟ್ಟಾರೆ ತೆರಿಗೆಯಲ್ಲಿ ಕೇಂದ್ರ GST 29,818 ಕೋಟಿ ರೂ, ರಾಜ್ಯ GST 37,657 ಕೋಟಿ ರೂ. ಆದರೆ, ಸಮಗ್ರ GST 83,623 ಕೋಟಿ ರೂ. ಹಾಗೂ ಸೆಸ್ 11,695 ಕೋಟಿ ರೂ. ಒಳಗೊಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.