GST Rules News: ಅಕ್ಟೋಬರ್‌ನಿಂದ ಜಿಎಸ್‌ಟಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಹೌದು, GST ಅಡಿಯಲ್ಲಿ, 10 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು, ಅಕ್ಟೋಬರ್ 1 ರಿಂದ B2B ವಹಿವಾಟುಗಳಿಗಾಗಿ ಎಲೆಕ್ಟ್ರಾನಿಕ್ ಇನ್‌ವಾಯ್ಸ್ (ಇ-ಇನ್‌ವಾಯ್ಸ್) ಸಾದರುಪಡಿಸಬೇಕಾಗಲಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಸುತ್ತೋಲೆ ಹೊರಡಿಸುವ ಮೂಲಕ ಈ ಮಾಹಿತಿಯನ್ನು ನೀಡಿದೆ. ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ 10 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ 1 ಅಕ್ಟೋಬರ್ 2022 ರಿಂದ ಇ-ಇನ್ವಾಯ್ಸ್ ಕಡ್ದಾಯವಾಗಿರಲಿದೆ.


COMMERCIAL BREAK
SCROLL TO CONTINUE READING

ಇಲಾಖೆ ನೀಡಿದ ಮಾಹಿತಿ ಏನು?
ಕಳೆದ ಮಾರ್ಚ್‌ನಲ್ಲಿ 20 ರಿಂದ 50 ಕೋಟಿ ವಹಿವಾಟು ಹೊಂದಿರುವ ತೆರಿಗೆದಾರರಿಗೆ ನೋಂದಣಿ ಮತ್ತು ಲಾಗಿನ್ ಸೌಲಭ್ಯ ಸಕ್ರಿಯಗೊಳಿಸಲಾಗಿದೆ. ಇದೇ ವೇಳೆ ಏಪ್ರಿಲ್ 1, 2022 ರಿಂದ ಜಾರಿಗೆ ಬರುವಂತೆ, ಮಂಡಳಿಯು ಜಿಎಸ್‌ಟಿ ಇ-ಇನ್‌ವಾಯ್ಸಿಂಗ್‌ನ ಮಿತಿಯನ್ನು 50 ಕೋಟಿಗಳಿಂದ 20 ಕೋಟಿಗಳಿಗೆ ಇಳಿಕೆ ಮಾಡಿದೆ. ಕಳೆದ ವರ್ಷ ಏಪ್ರಿಲ್ 1 ರಿಂದ, 50 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು ಬಿ 2 ಬಿ ಇನ್‌ವಾಯ್ಸ್‌ಗಳನ್ನು ನೀಡುತ್ತಿವೆ ಎಂಬುದು ಇಲ್ಲಿ ಗಮನಾರ್ಹ. ಆದರೆ ಇದೀಗ 10 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ ಇದನ್ನು ವಿಸ್ತರಿಸಲಾಗುತ್ತಿದೆ.


ಇದನ್ನೂ ಓದಿ-ಇಲ್ಲಿ ಪೆಟ್ರೋಲ್ ಗಿಂತ ದುಬಾರಿಯಾಯಿತು ಸಿಎನ್‌ಜಿ


ಯಾಕೆ ಈ ನಿರ್ಧಾರ?
ಭಾರತ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯ ನಿಯಮಗಳಲ್ಲಿ ನಿರಂತರವಾಗಿ ಬದಲಾವಣೆಗಳನ್ನು ತರುತ್ತಿದೆ. ತೆರಿಗೆ ವಂಚನೆಯನ್ನು ಕಡಿಮೆ ಮಾಡುವುದು ಇದರ ಹಿಂದಿನ ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ಸಂಬಂಧಿಸಿದಂತೆ, 2020 ರ ಅಕ್ಟೋಬರ್‌ನಲ್ಲಿ, 500 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು ತಮ್ಮ B2B ವಹಿವಾಟುಗಳಲ್ಲಿ ಇ-ಇನ್‌ವಾಯ್ಸ್‌ಗಳನ್ನು ನೀಡುವ ಅಗತ್ಯವಿದೆ ಎಂದು ಸರ್ಕಾರ ನಿರ್ಧರಿಸಿತ್ತು.


ಇದನ್ನೂ ಓದಿ-ಐಟಿಆರ್ ಇ-ವೆರಿಫೈ ಪ್ರಕ್ರಿಯೆಯನ್ನು 30 ದಿನಗಳೊಳಗೆ ಪೂರ್ಣಗೊಳಿಸಿ, ಇಲ್ಲವೇ ಭಾರೀ ನಷ್ಟ


ಪೋರ್ಟಲ್‌ಗೆ ಮಾಹಿತಿ ನೀಡಬೇಕು
ಪ್ರಸ್ತುತ ಈ ಮಿತಿ 20 ಕೋಟಿ ರೂ.ಗಳಾಗಿದ್ದು. CBDT ಮತ್ತೆ 10 ಕೋಟಿಗೆ ಇಳಿಕೆ ಮಾಡಲು ನಿರ್ಧರಿಸಿದೆ. ಸರಕು ಮತ್ತು ಸೇವಾ ತೆರಿಗೆ ಪಾವತಿದಾರರು ಇ-ಇನ್‌ವಾಯ್ಸ್ ಅನ್ನು ನೋಂದಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಕಳುಹಿಸಲು ಸಾಧ್ಯವಾಗಲಿದೆ.  ಇನ್‌ವಾಯ್ಸ್ ಅಡಿಯಲ್ಲಿ, ತೆರಿಗೆದಾರರು ತಮ್ಮ ಆಂತರಿಕ ವ್ಯವಸ್ಥೆಯ ಮೂಲಕ ಬಿಲ್ ಅನ್ನು ರಚಿಸಬೇಕು ಮತ್ತು ಅದನ್ನು ಆನ್‌ಲೈನ್ ಇನ್‌ವಾಯ್ಸ್ ನೋಂದಣಿ ಪೋರ್ಟಲ್‌ಗೆ (IRP) ವರದಿ ಮಾಡಬೇಕಾಗಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.