EPF Claim ಪದೇ ಪದೇ ತಿರಸ್ಕೃತವಾಗುತ್ತಿದೆಯೇ? ಹಾಗಿದ್ದರೆ ಈ ವಿಧಾನ ಅನುಸರಿಸಿ
ಕೆಲವೊಮ್ಮೆ EPF ಅಧಿಕಾರಿಗಳು ಮಾನ್ಯ ಕಾರಣಗಳಿಲ್ಲದೆ PF ಸದಸ್ಯರ ಕ್ಲೈಂ ಅನ್ನು ತಿರಸ್ಕರಿಸುತ್ತಾರೆ ಎನ್ನುವ ದೂರು ಕೇಳಿ ಬರುತ್ತದೆ. ಇದರಿಂದಾಗಿ ಇಪಿಎಫ್ ಸದಸ್ಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಬೆಂಗಳೂರು : ಕಚೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಪಿಎಫ್ ಖಾತೆಯನ್ನು ಹೊಂದಿದ್ದಾರೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಭವಿಷ್ಯ ನಿಧಿ (EPF) ಕೊಡುಗೆಗಳ ಮೇಲ್ವಿಚಾರಣೆ ಮಾಡುವುದರೊಂದಿಗೆ ಅದನ್ನು ನಿರ್ವಹಿಸುತ್ತದೆ. ಪ್ರತಿ ತಿಂಗಳು ನೌಕರರು ತಮ್ಮ ವೇತನದಿಂದ ನಿರ್ದಿಷ್ಟ ಮೊತ್ತವನ್ನು ತಮ್ಮ ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಕಂಪನಿಯು ಅಷ್ಟೇ ಪ್ರಮಾಣದ ಮೊತ್ತವನ್ನು ಠೇವಣಿ ಮಾಡುತ್ತದೆ. ಪಿಎಫ್ ಮೊತ್ತವನ್ನು ಉದ್ಯೋಗಿ ಪಿಂಚಣಿಯ ಪ್ರಮುಖ ಅಂಶಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
EPF ಖಾತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ಅಪ್ಡೇಟ್ ಗಳನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ.ನಿವೃತ್ತಿಯ ನಂತರ ಪಿಎಫ್ ಸದಸ್ಯನು ತನ್ನ ಪಿಎಫ್ ಖಾತೆಯಿಂದ ಇಪಿಎಫ್ ಮೊತ್ತವನ್ನು ಹಿಂಪಡೆಯುತ್ತಾನೆ. ಕೆಲವು ಸಂದರ್ಭಗಳಲ್ಲಿ ಈ ಮೊತ್ತವನ್ನು ಸದಸ್ಯರು ಇದಕ್ಕೂ ಮೊದಲೇ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ EPF ಅಧಿಕಾರಿಗಳು ಮಾನ್ಯ ಕಾರಣಗಳಿಲ್ಲದೆ PF ಸದಸ್ಯರ ಕ್ಲೈಂ ಅನ್ನು ತಿರಸ್ಕರಿಸುತ್ತಾರೆ ಎನ್ನುವ ದೂರು ಕೇಳಿ ಬರುತ್ತದೆ. ಇದರಿಂದಾಗಿ ಇಪಿಎಫ್ ಸದಸ್ಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ : Post Office: ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ದುಪ್ಪಟ್ಟಾಗುತ್ತದೆ..!
ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇಂತಹ ಸಮಸ್ಯೆಗಳು ಉದ್ಭವಿಸದಂತೆ ನೋಡಿಕೊಳ್ಳಲು ನಿರ್ದೇಶನಗಳನ್ನು ನೀಡಿದೆ. ನೀವು ಕೂಡಾ ಇಪಿಎಫ್ ಕ್ಲೈಮ್‌ಗೆ ಅರ್ಜಿ ಸಲ್ಲಿಸಿದ್ದರೆ, ತಿರಸ್ಕೃತಗೊಳ್ಳುವ ಬಗ್ಗೆ ಚಿಂತಿಸಬೇಡಿ. ಇಪಿಎಫ್‌ಒ ಇದಕ್ಕೆ ಪರಿಹಾರ ಒದಗಿಸಿದೆ.
ಇಪಿಎಫ್‌ಒ ನೀಡಿರುವ ಮಾರ್ಗಸೂಚಿಗಳೇನು?
- ಒಂದೇ EPFO ಕ್ಲೈಮ್ ಅನ್ನು ಅನೇಕ ಕಾರಣಗಳಿಗಾಗಿ ತಿರಸ್ಕರಿಸಬಾರದು.
- ಯಾವುದೇ ಕ್ಲೈಮ್ ಅನ್ನು ಅನಗತ್ಯವಾಗಿ ವಿಳಂಬ ಮಾಡಬಾರದು ಎಂದು ಇಪಿಎಫ್‌ಒ ಹೇಳಿದೆ.
- ಕ್ಲೈಮ್‌ನ ಪುನರಾವರ್ತಿತ ನಿರಾಕರಣೆಯ ಸಂದರ್ಭದಲ್ಲಿ, ಕಾರಣವನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಇಪಿಎಫ್‌ಒ ಹೇಳಿದೆ
- ಚಂದಾದಾರರ ಕ್ಲೈಮ್‌ನ ಮೇಲೆ ಪರಿಣಾಮ ಬೀರುವ ಯಾವುದೇ ದೋಷಗಳನ್ನು ಇಪಿಎಫ್‌ಒ ಪತ್ತೆಮಾಡಿದರೆ, ಅದನ್ನು ಸಲ್ಲಿಸುವ ಮೊದಲು ಅದನ್ನು ಚಂದಾದಾರರಿಗೆ ತಿಳಿಸಬೇಕು.
- ಇದರ ನಂತರವೂ, ಒಬ್ಬರ ಕ್ಲೈಮ್ ಅನ್ನು ತಿರಸ್ಕರಿಸಿದರೆ, ಎಲ್ಲಾ ಕ್ಲೈಮ್‌ಗಳನ್ನು ಮರು ಪರೀಕ್ಷೆಗೆ ಕಳುಹಿಸಬೇಕು.
- ತಪ್ಪನ್ನು ಸರಿಪಡಿಸಬೇಕು ಮತ್ತು ಕ್ಲೈಮ್‌ಗಳನ್ನು ನಿರ್ದಿಷ್ಟ ಅವಧಿಯೊಳಗೆ ಪ್ರಕ್ರಿಯೆಗೊಳಿಸಬೇಕು.
- ಇಪಿಎಫ್ ಚಂದಾದಾರರ ಕ್ಲೈಮ್‌ನಲ್ಲಿರುವ ಎಲ್ಲಾ ದೋಷಗಳನ್ನು ತಕ್ಷಣವೇ ಅವರಿಗೆ ವರದಿ ಮಾಡಬೇಕು.
- ಈ ರೀತಿಯಾಗಿ ಉದ್ಯೋಗಿ ಪುನರಾವರ್ತಿತ ಸಮಸ್ಯೆಗಳನ್ನು ಎದುರಿಸುವುದನ್ನು ತಪ್ಪಿಸಬಹುದು.
- ಎಲ್ಲಾ ಕ್ಲೈಮ್‌ಗಳನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು ಎಂದು ಇಪಿಎಫ್‌ಒ ಹೇಳಿದೆ
ಕ್ಷೇತ್ರ ಕಚೇರಿಗಳು ತಿರಸ್ಕರಿಸಿದ ಪಿಎಫ್ ಕ್ಲೈಮ್‌ಗಳನ್ನು ಮರುಪರಿಶೀಲನೆಗಾಗಿ ವಲಯ ಕಚೇರಿಗಳಿಗೆ ರವಾನಿಸುತ್ತವೆ ಎಂದು ಹೊಸ ಮಾರ್ಗಸೂಚಿಗಳು ತಿಳಿಸಿವೆ. ಸದಸ್ಯರ ಕ್ಲೈಂ ಅನ್ನು ಸರಿಯಾದ ಸಮಯದೊಳಗೆ ಪ್ರಕ್ರಿಯೆಗೊಳಿಸಬೇಕು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.
ಇದನ್ನೂ ಓದಿ : 2032ರ ವೇಳೆಗೆ ರಾಜ್ಯ 1 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆ: ಸಚಿವ ಎಂ ಬಿ ಪಾಟೀಲ
ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯುವುದು ಹೇಗೆ?
- EPFO ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸದಸ್ಯರ ಪೋರ್ಟಲ್‌ಗೆ ಹೋಗಬೇಕು.
- ನಂತರ ಮೆನುವಿನಲ್ಲಿ Services option ಕ್ಲಿಕ್ ಮಾಡಿ.
- ಈಗ For Employees ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆದುಕೊಳ್ಳುತ್ತದೆ.
- ಇಲ್ಲಿ ನೀವು ಸದಸ್ಯ UAN/ಆನ್‌ಲೈನ್ ಸೇವೆ (OCS/OTCP) ಆಯ್ಕೆಯನ್ನು ಆರಿಸಬೇಕಾಗುತ್ತದೆ.
- ಅದರ ನಂತರ, ಲಾಗ್ ಇನ್ ಪುಟ ತೆರೆಯುತ್ತದೆ. ನಿಮ್ಮ UAN ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಪೋರ್ಟಲ್‌ಗೆ ಲಾಗ್ ಇನ್ ಮಾಡಿ. ಇದರ ನಂತರ Online Services ಮೇಲೆ ಕ್ಲಿಕ್ ಮಾಡಿ.
- ಕೆಳಗೆ ಕಾಣಿಸುವ ಮೆನುವಿನಿಂದ ಆನ್‌ಲೈನ್ ಸೇವೆಗಳ ಮೇಲೆ ಕ್ಲಿಕ್ ಮಾಡಿ.
- ಡ್ರಾಪ್‌ಡೌನ್ ಮೆನುವಿನಿಂದ ಕ್ಲೇಮ್ (ಫಾರ್ಮ್-31, 19 ಮತ್ತು 10 ಸಿ) ಆಯ್ಕೆಮಾಡಿ.
- ಇದರ ನಂತರ, ಹೊಸ ಪುಟ ತೆರೆಯುತ್ತದೆ. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಪರಿಶೀಲಿಸಿ.
- ಖಾತೆ ಪರಿಶೀಲನೆಯ ನಂತರ, ಅಫಿಡವಿಟ್ ತೆರೆಯಲಾಗುತ್ತದೆ
- ಇದರ ನಂತರ ಒಪ್ಪಂದದ ಪ್ರಮಾಣಪತ್ರವನ್ನು ಸಹ ಸ್ವೀಕರಿಸಬೇಕು.
- ನಂತರ, ಆನ್‌ಲೈನ್ ಕ್ಲೈಮ್‌ಗಾಗಿ ಮುಂದುವರಿಯಿರಿ.
- ಒಂದು ಫಾರ್ಮ್ ಇಲ್ಲಿ ತೆರೆಯುತ್ತದೆ. ಇದರಲ್ಲಿ, PF ADVANCE (ಫಾರ್ಮ್ - 31) ಅನ್ನು ಆಯ್ಕೆ ಮಾಡಬೇಕು.
- ಇದರ ನಂತರ ಸದಸ್ಯರು ಹಿಂಪಡೆಯಲು ಕಾರಣ ಮತ್ತು ಅವರು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಬೇಕು.
- ಇದರ ನಂತರ, ಚೆಕ್‌ಬಾಕ್ಸ್ ಅನ್ನು ಗುರುತಿಸಿದ ನಂತರ, ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.