ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಎಟಿಎಂ/ಡೆಬಿಟ್ ಕಾರ್ಡ್ ಕಳೆದುಹೋದರೆ ಆನ್ ಲೈನ್ ನಲ್ಲಿ ಬ್ಲಾಕ್ ಮಾಡುವ ಅವಕಾಶ ನೀಡಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿರುವ ಎಸ್ ಬಿಐ, ಎಟಿಎಂ/ಡೆಬಿಟ್ ಕಾರ್ಡ್(Debit Card) ಕಳೆದುಹೋದ ಅಥವಾ ಕಳುವಾದ ಸಂದರ್ಭದಲ್ಲಿ ಆನ್ ಲೈನ್ SBI ಮೂಲಕ ನಿಮ್ಮ SBI ಎಟಿಎಂ ಮತ್ತು ಡೆಬಿಟ್ ಕಾರ್ಡ್ ಅನ್ನು  ಬ್ಲಾಕ್ ಮಾಡುವ ಅವಕಾಶ ಇದೆ ಎಂದು  ಎಸ್ ಬಿಐ ತಿಳಿಸಿದೆ.


ಇದನ್ನೂ ಓದಿ : SMS ಮೂಲಕ 'PF' ಖಾತೆ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ


ಎಟಿಎಂ ಕಮ್ ಡೆಬಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಲು ಕೆಲವು ಸರಳ ಹಂತಗಳು :


ಹಂತ 1: ಬಳಕೆದಾರ ಹೆಸರು ಮತ್ತು ಪಾಸ್ ವರ್ಡ್ ನೊಂದಿಗೆ www.onlinesbi.com ಲಾಗ್ ಇನ್ ಮಾಡಿ. ಹಂತ 


ಹಂತ 2: 'ಇ-ಸರ್ವೀಸಸ್' ಟ್ಯಾಬ್ ಅಡಿಯಲ್ಲಿ 'ಎಟಿಎಂ ಕಾರ್ಡ್ ಸೇವೆಗಳು>ಬ್ಲಾಕ್ ಎಟಿಎಂ ಕಾರ್ಡ್(Block ATM Card)' ಲಿಂಕ್ ಆಯ್ಕೆ ಮಾಡಿ.


ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ!


ಹಂತ 3: ನಿಮ್ಮ ಎಟಿಎಂ ಕಮ್ ಡೆಬಿಟ್ ಕಾರ್ಡ್(ATM Come Debit Card) ಅನ್ನು ನಿರ್ಬಂಧಿಸಲು ನೀವು ಬಯಸುವ ಖಾತೆಯನ್ನು ಆಯ್ಕೆ ಮಾಡಿ.


ಹಂತ 4: ಎಲ್ಲಾ ಸಕ್ರಿಯ ಮತ್ತು ನಿರ್ಬಂಧಿತ ಕಾರ್ಡ್ ಗಳನ್ನು ಪ್ರದರ್ಶಿಸಲಾಗುತ್ತದೆ. ಕಾರ್ಡ್(ಗಳ) ಮೊದಲ 4 ಮತ್ತು ಕೊನೆಯ 4 ಅಂಕಿಗಳನ್ನು ನಿಮಗೆ ತೋರಿಸಲಾಗುತ್ತದೆ.


ಇದನ್ನೂ ಓದಿ : Narendra Modi ಸರ್ಕಾರದ ಹೊಸ ದಾಖಲೆ, ಈ ವಿಷಯದಲ್ಲಿ US ಹಿಂದಿಕ್ಕಿ 5ನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ


ಹಂತ 5: ಕಾರ್ಡ್(Cards) ಆಯ್ಕೆ ಮಾಡಿ ಮತ್ತು 'ಸಲ್ಲಿಸಿ' . ಮುಂದೆ, ವಿವರಗಳನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ.


ಹಂತ 6: ದೃಢೀಕರಣದ ವಿಧಾನವನ್ನು ಎಸ್‌ಎಂಎಸ್ ಒಟಿಪಿ ಅಥವಾ ಪ್ರೊಫೈಲ್ ಪಾಸ್ ವರ್ಡ್ ಆಗಿ ಆಯ್ಕೆ ಮಾಡಿ.


ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರೆ ಗಮನಿಸಿ : ಇಂದು ಕೂಡ ಚಿನ್ನದ ಬೆಲೆ ಏರಿಕೆ!


ಹಂತ 7: ಈ ಹಿಂದೆ ಆಯ್ಕೆ ಮಾಡಿದಂತೆ ಒಟಿಪಿ ಪಾಸ್ ವರ್ಡ್ /ಪ್ರೊಫೈಲ್ ಪಾಸ್ ವರ್ಡ್(Password) ನಮೂದಿಸಿ ಮತ್ತು ಮುಂದಿನ ಪರದೆಯಲ್ಲಿ 'ದೃಢೀಕರಿಸು' .


ಹಂತ 8: ಟಿಕೆಟ್ ಸಂಖ್ಯೆಯೊಂದಿಗೆ ಯಶಸ್ಸಿನ ಸಂದೇಶ(SMS)ವನ್ನು ಪ್ರದರ್ಶಿಸಲಾಗುವುದು. ನಿಮ್ಮ ಎಟಿಎಂ ಕಮ್ ಡೆಬಿಟ್ ಕಾರ್ಡ್ ಅನ್ನು ಯಶಸ್ವಿಯಾಗಿ ನಿರ್ಬಂಧಿಸಿದ ನಂತರ. ಈ ಟಿಕೆಟ್ ಸಂಖ್ಯೆಯನ್ನು ಗಮನಿಸುವಂತೆ ನಿಮಗೆ ಸೂಚಿಸಲಾಗುತ್ತದೆ.


ಇದನ್ನೂ ಓದಿ : E-Vehicles: ದ್ವಿಚಕ್ರ ವಾಹನ ಖರೀದಿದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ Modi Government


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.