HDFC ಖಾತೆದಾರರಿಗೆ ಎಚ್ಚರ! ಈ ಸಂದೇಶ ಬಂದರೆ ತಕ್ಷಣವೇ ಡಿಲೀಟ್ ಮಾಡಿ !ಇಲ್ಲವಾದರೆ ಖಾಲಿಯಾಗುವುದು ಖಾತೆ
ವಂಚಕರು ಹಣ ಕದಿಯಲು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿರುತ್ತಾರೆ. ಇದರಲ್ಲಿ ವಂಚಕರು ಅನುಸರಿಸುವ ಅತ್ಯಂತ ಸಾಮಾನ್ಯವಾದ ಮಾರ್ಗವೆಂದರೆ SMS.
ಬೆಂಗಳೂರು : ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಬ್ಯಾಂಕಿಂಗ್ ಮತ್ತು ಡಿಜಿಟಲ್ ಪೇಮೆಂಟ್ ವಂಚನೆಯ ಸಾವಿರಾರು ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿವೆ. ವಂಚಕರು ಹಣ ಕದಿಯಲು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿರುತ್ತಾರೆ. ಇದರಲ್ಲಿ ವಂಚಕರು ಅನುಸರಿಸುವ ಅತ್ಯಂತ ಸಾಮಾನ್ಯವಾದ ಮಾರ್ಗವೆಂದರೆ SMS. ಬ್ಯಾಂಕ್ ಖಾತೆಯನ್ನು ಸೀಜ್ ಮಾಡಲಾಗಿದೆ ಎಂದು ಹೇಳಿ, ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಹೇಳಲಾಗುತ್ತದೆ. ಒಂದೊಮ್ಮೆ ಈ ಮಾತನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದರೆ ಗ್ರಾಹಕರ ಫೋನ್ ಹ್ಯಾಕ್ ಆಗುತ್ತದೆ. ಖಾತೆಯ ಹಣ ಮಾಯವಾಗುತ್ತದೆ. HDFC ಖಾತೆದಾರರಿಗೆ ಈ ರೀತಿಯ್ ಮೆಸೇಜ್ ಕಳುಹಿಸಲಾಗುತ್ತಿದೆ.
ಸಂಘಮಿತ್ರ ಮಜುಂದಾರ್ ಎಂಬ ಬಳಕೆದಾರರು, ತಮಗೆ ಬಂದಿರುವ SMSನ ಪ್ರಿಂಟ್ ಶಾಟ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡದೇ ಹೋದರೆ ಖಾತೆ ಸೀಜ್ ಮಾಡಲಾಗುವುದು. ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಎನ್ನುವ ಮೆಸೇಜ್ ಅದಾಗಿದೆ. ಈ ಟ್ವೀಟ್ ಗೆ ಉತ್ತರಿಸಿದ ಮತ್ತೊಬ್ಬ ಬಳಕೆದಾರರು ತಮಗೆ ಬಂದಿರುವ ಮೆಸೇಜ್ ಅನ್ನು ಕೂಡಾ ಶೇರ್ ಮಾಡಿದ್ದಾರೆ. ಇಲ್ಲಿ KYC ಅಪ್ಡೇಟ್ ಮಾಡುವ ಸಲುವಾಗಿ ಲಿಂಕ್ ಕಳುಹಿಸಲಾಗಿದೆ. ಆದರೆ ಬಳಕೆದಾರರ ಈ ಅನುಮಾನಗಳಿಗೆ HDFC ಬ್ಯಾಂಕ್ ಕೇರ್ ಟ್ವೀಟ್ ಮೂಲಕವೇ ಉತ್ತರಿಸಿದೆ. PAN ಕಾರ್ಡ್/KYC ಅಪ್‌ಡೇಟ್ ಅಥವಾ ಯಾವುದೇ ಇತರ ಬ್ಯಾಂಕಿಂಗ್ ಮಾಹಿತಿಯನ್ನು ಕೇಳುವ ಅಪರಿಚಿತ ಸಂಖ್ಯೆಗಳಿಗೆ ಪ್ರತಿಕ್ರಿಯಿಸದಂತೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : Public Provident Fund ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ ಮೋದಿ ಸರ್ಕಾರ!
ಬ್ಯಾಂಕ್ ಎಂದಿಗೂ ಪ್ಯಾನ್ ವಿವರಗಳು, OTP, UPI, VPA / MPIN, ಗ್ರಾಹಕ ID ಮತ್ತು ಪಾಸ್‌ವರ್ಡ್, ಕಾರ್ಡ್ ಸಂಖ್ಯೆ, ATM ಪಿನ್ ಮತ್ತು CVV ಗಳನ್ನು ಕೇಳುವುದಿಲ್ಲ. ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಟ್ವಿಟರ್ ಥ್ರೆಡ್‌ನಲ್ಲಿ ಮನವಿ ಮಾಡಿದೆ.
ಫಿಶಿಂಗ್ ಸ್ಕ್ಯಾಮ್ ಎಂದರೇನು?
ವಂಚಕರು ನಕಲಿ ಸಂದೇಶಗಳನ್ನು ಗ್ರಾಹಕರಿಗೆ ಕಳುಹಿಸುತ್ತಾರೆ. ಅದರಲ್ಲಿ ಖಾತೆ ವಿವರಗಳು, OTP ಮತ್ತು ಗುರುತಿನ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಒದಗಿಸುವಂತೆ ಕೇಳುತ್ತಾರೆ. ಇದಕ್ಕಾಗಿ ಲಿಂಕನ್ನು ಕೂಡಾ ಕಳುಹಿಸಲಾಗುತ್ತದೆ. ಗ್ರಾಹಕರು ಇದನ್ನು ನಂಬಿ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಸ್ಕ್ಯಾಮರ್ ಗಳು ಮೊಬೈಲ್ ಅಥವಾ ಬ್ಯಾಂಕ್ ಕ್ರೆಡೆನ್ಶಿಯಲ್ ಗಳಿಗೆ ರಿಮೋಟ್ ಅಕ್ಸೆಸ್ ಪಡೆದುಕೊಳ್ಳುತ್ತಾರೆ. ಈ ಮೂಲಕ ಸುಲಭವಾಗಿ ಅಕೌಂಟ್ ಖಾಲಿ ಮಾಡಿ ಬಿಡುತ್ತಾರೆ.
ಇದನ್ನೂ ಓದಿ : Gold Price Today : ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ, ಇಲ್ಲಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ!
ವಂಚನೆಯಿಂದ ತಪ್ಪಿಸುವುದು ಹೇಗೆ ? :
- ಯಾರೊಂದಿಗೂ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ.
- ಯಾವಾಗಲೂ ಸ್ಟ್ರಾಂಗ್ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳಿ.
- ಅನುಮಾನ ಬರುವಂಥಹ ಸಂದೇಶಗಳು ಬಂದರೆ ಬ್ಯಾಂಕ್ ಅನ್ನು ಸಂಪರ್ಕಿಸಿ.
- ಟೂ ಫ್ಯಾಕ್ಟರ್ ಅಥೆನ್ಟಿಕೆಶನ್ ಆಕ್ಟಿವ್ ಮಾಡಿಕೊಳ್ಳಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.