HDFC Express Car Loan: ಕೇವಲ ಅರ್ಧ ಗಂಟೆಯಲ್ಲಿ ಸಿಗಲಿದೆ ಎಕ್ಸ್‌ಪ್ರೆಸ್ ಕಾರ್ ಲೋನ್`
HDFC ಬ್ಯಾಂಕ್ ಕಾರು ಖರೀದಿದಾರರಿಗೆ ವಿಶಾಲವಾದ, ವೇಗವಾದ, ಹೆಚ್ಚು ಅನುಕೂಲಕರ ಮತ್ತು ಡಿಜಿಟಲ್ ಸೌಲಭ್ಯವನ್ನು ಒದಗಿಸಿದೆ. ಈ ಸೌಲಭ್ಯದಿಂದಾಗಿ, ಕಾರು ಖರೀದಿ ಪ್ರಕ್ರಿಯೆ ಸರಳವಾಗಲಿದೆ ಎಂದು ಬ್ಯಾಂಕ್ ಹೇಳಿದೆ.
HDFC Express Car Loan : ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ HDFC ಬ್ಯಾಂಕ್ ಎಕ್ಸ್‌ಪ್ರೆಸ್ ಕಾರು ಸಾಲವನ್ನು ಪ್ರಾರಂಭಿಸಿದೆ. ಇದರ ಸಹಾಯದಿಂದ, ಈಗ ಬ್ಯಾಂಕ್‌ನ ಗ್ರಾಹಕರು ಎಂಡ್-ಟು-ಎಂಡ್ ಡಿಜಿಟಲ್ ಹೊಸ ಕಾರ್ ಲೋನ್ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್ ತನ್ನ ಸಾಲಗಳನ್ನು ದೇಶಾದ್ಯಂತ ಆಟೋಮೊಬೈಲ್ ಡೀಲರ್‌ಗಳೊಂದಿಗೆ ಸಂಯೋಜಿಸಿದೆ. ಎಕ್ಸ್‌ಪ್ರೆಸ್ ಕಾರ್ ಲೋನ್ ಸೌಲಭ್ಯದೊಂದಿಗೆ, ದೇಶದಲ್ಲಿ ಕಾರ್ ಫೈನಾನ್ಸ್ ಅನ್ನು ನಿರ್ವಹಿಸುವ ರೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಕಾಣುವ ಭರವಸೆಯನ್ನು ಬ್ಯಾಂಕ್ ಹೊಂದಿದೆ.
ಕಾರು ಖರೀದಿ ಪ್ರಕ್ರಿಯೆ ಸರಳವಾಗಲಿದೆ :
HDFC ಬ್ಯಾಂಕ್ ಕಾರು ಖರೀದಿದಾರರಿಗೆ ವಿಶಾಲವಾದ, ವೇಗವಾದ, ಹೆಚ್ಚು ಅನುಕೂಲಕರ ಮತ್ತು ಡಿಜಿಟಲ್ ಸೌಲಭ್ಯವನ್ನು ಒದಗಿಸಿದೆ. ಈ ಸೌಲಭ್ಯದಿಂದಾಗಿ, ಕಾರು ಖರೀದಿ ಪ್ರಕ್ರಿಯೆ ಸರಳವಾಗಲಿದೆ ಎಂದು ಬ್ಯಾಂಕ್ ಹೇಳಿದೆ. ಇದರೊಂದಿಗೆ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಕಾರು ಮಾರಾಟವನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. “ನಾವು ಈಗ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಎಂಡ್-ಟು-ಎಂಡ್ ಡಿಜಿಟಲ್ ಕಾರ್ ಲೋನ್ ಪರಿಹಾರವನ್ನು ಪ್ರಾರಂಭಿಸುವ ಮೂಲಕ ಹೆಜ್ಜೆ ಹಾಕುತ್ತಿದ್ದೇವೆ. ಈ ಸೌಲಭ್ಯವು ಅವರ ಎಲ್ಲಾ ಶಾಖೆಗಳಲ್ಲಿ, ಡೀಲರ್‌ಶಿಪ್‌ಗಳಲ್ಲಿ ಮತ್ತು ಅಂತಿಮವಾಗಿ ಥರ್ಡ್ ಪಾರ್ಟಿ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ರಿಟೇಲ್ ಅಸೆಟ್ಸ್ ನ ಕಂಟ್ರಿ ಹೆಡ್ ಅರವಿಂದ್ ಕಪಿಲ್ ತಿಳಿಸಿದ್ದಾರೆ.
ಇದನ್ನೂ ಓದಿ : Driving License New Rules: ಇನ್ನು ಡ್ರೈವಿಂಗ್ ಲೈಸೆನ್ಸ್ ಮಾಡಿಸಲು RTOಗೆ ಅಲೆಯಬೇಕಿಲ್ಲ, ಸರ್ಕಾರ ಬದಲಾಯಿಸಿದೆ ನಿಯಮ
4 ಚಕ್ರದ ವಾಹನಗಳಿಗೆ ಸಿಗಲಿದೆ ಈ ಸೌಲಭ್ಯ :
ಸದ್ಯ ನಾಲ್ಕು ಚಕ್ರದ ವಾಹನಗಳು ಅಥವಾ ಕಾರುಗಳಿಗೆ ಈ ಸೌಲಭ್ಯವನ್ನು ಒದಗಿಸಲಾಗುವುದು. ಕ್ರಮೇಣ ದ್ವಿಚಕ್ರ ವಾಹನಗಳಿಗೂ ಈ ಸೌಲಭ್ಯ ಆರಂಭವಾಗಲಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 35 ಮಿಲಿಯನ್ ಹೊಸ ಮೋಟಾರು ವಾಹನಗಳು ಮಾರಾಟವಾಗುತ್ತವೆ ಎಂಬುದು ಉಲ್ಲೇಖನೀಯ. ಈ ಮಾರಾಟದ ವೇಗ ಹೀಗೆ ಮುಂದುವರಿದರೆ, ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಭಾರತವು ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಲಿದೆ.
ಗ್ರಾಹಕರ ಅನುಭವ ಬದಲಾಗುತ್ತದೆ :
ಆಟೋಮೋಟಿವ್ ಇಕೋ ಸಿಸ್ಟಮ್ ವಿಕಸನಗೊಂಡಂತೆ, ಗ್ರಾಹಕರ ಅನುಭವವನ್ನು ಪರಿವರ್ತಿಸುವ ಮೂಲಕ ಗ್ರಾಹಕರಿಗೆ ಮೌಲ್ಯವನ್ನು ಅನ್ಲಾಕ್ ಮಾಡಲು ಮಹತ್ವದ ಅವಕಾಶವಿದೆ ಎಂದು ಅರವಿಂದ್ ಕಪಿಲ್ ಹೇಳಿದ್ದಾರೆ. ಮೊದಲಿಗೆ, HDFC ಬ್ಯಾಂಕ್ ಈ ಸೌಲಭ್ಯವನ್ನು ಪಡೆಯಲು 20% ರಿಂದ 30% ರಷ್ಟು ಗ್ರಾಹಕರನ್ನು (ಿರೀಕ್ಷಿಸುತ್ತದೆ.
ಇದನ್ನೂ ಓದಿ : Gold Price Today: ಏರಿಕೆ ಕಂಡ ಚಿನ್ನದ ಬೆಲೆ, ಖರೀದಿ ಮುನ್ನ ಇಂದಿನ ಬೆಲೆ ತಿಳಿದುಕೊಳ್ಳಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.