Hero Electric Scooter: ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ (Hero MotoCorp) ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಅನ್ನು ನೋಡಿ, ಇದೀಗ ಕಂಪನಿಯು ತನ್ನ ಮೊದಲ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರ್ಚ್ 2022 ರಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಸುದ್ದಿಯನ್ನು ಕಂಪನಿಯು ಕೆಲವು ತಿಂಗಳ ಹಿಂದಷ್ಟೇ ಖಚಿತಪಡಿಸಿತ್ತು. ಸ್ಪ್ಲೆಂಡರ್‌ನಂತಹ ಬಲಿಷ್ಠ ಬೈಕ್‌ ತಯಾರಿಸುವ ಈ ಸಂಸ್ಥೆಯು ಎಲೆಕ್ಟ್ರಿಕ್‌ ವಾಹನ ಯೋಜನೆ ಕಾಮಗಾರಿ ಆರಂಭಗೊಂಡಿದ್ದು, ಈ ಕಾರ್ಯ ಈಗ ಅಂತಿಮ ಹಂತ ತಲುಪಿದೆ ಎಂದು ಮಾಹಿತಿ ನೀಡಿತ್ತು.


COMMERCIAL BREAK
SCROLL TO CONTINUE READING

ಎಲೆಕ್ಟ್ರಿಕ್ ಸ್ಕೂಟರ್‌ನ ನೋಟ:
ಕಳೆದ ವರ್ಷ, ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ (Hero Electric Scooter) ಅನ್ನು ಮೊದಲ ಬಾರಿಗೆ ತೋರಿಸಿತು. ಇದರ ಹೊರತಾಗಿ, ಏಪ್ರಿಲ್ 2021 ರಲ್ಲಿ, ಹೀರೋ ತನ್ನ ಇ-ಸ್ಕೂಟರ್‌ನೊಂದಿಗೆ ಬ್ಯಾಟರಿ ಸ್ವಾಪ್ ತಂತ್ರಜ್ಞಾನ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಒದಗಿಸಲು ತೈವಾನ್‌ನ ಟೆಕ್ ಕಂಪನಿ ಗೊಗೊರೊ ಜೊತೆ ಕೈಜೋಡಿಸಿದೆ. ಮೊದಲ ಹೀರೋ ಇ-ಸ್ಕೂಟರ್ ಸಿಂಗಲ್-ಸೈಡೆಡ್ ಸ್ವಿಂಗರ್ಮ್, ಫುಲ್-ಎಲ್ಇಡಿ ಲೈಟಿಂಗ್, ಫಾಸ್ಟ್ ಚಾರ್ಜಿಂಗ್, ದೀರ್ಘ ಶ್ರೇಣಿ ಮತ್ತು ಬ್ಯಾಟರಿ ಬೇರ್ಪಡಿಕೆಯೊಂದಿಗೆ ಬರಬಹುದು ಎಂದು ವರದಿಗಳು ತಿಳಿಸಿವೆ.


ಇದನ್ನೂ ಓದಿ - PM kisan ಯೋಜನೆಯ 10ನೇ ಕಂತಿನ ₹2000 ನಿಮ್ಮ ಖಾತೆಗೆ ಬಂದಿಲ್ಲವೇ? ಹಾಗಿದ್ರೆ ತಕ್ಷಣ ಈ ಕೆಲಸ  ಮಾಡಿ


ಬಹಳ ಕಠಿಣ ಸ್ಪರ್ಧೆ: 
ಹೀರೋ ಮೋಟೋಕಾರ್ಪ್ (Hero MotoCorp) ತನ್ನಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ನಂತರ, ಇದು ಭಾರತದಲ್ಲಿ ಪ್ರಬಲವಾದ ಸ್ಪರ್ಧೆಯನ್ನು ನೀಡಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್, ಬಜಾಜ್ ಚೇತಕ್ ಎಲೆಕ್ಟ್ರಿಕ್, Ola S1 ಮತ್ತು S1 Pro, Ather 450X, TVS iQube ಮತ್ತು ಅಂತಹ ಅನೇಕ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳ ಸ್ಕೂಟರ್‌ಗಳಿಗೆ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ. ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಇ-ಸ್ಕೂಟರ್‌ನ ಬೆಲೆ ಸುಮಾರು 1 ಲಕ್ಷ ರೂ. ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ - Aadhaar Card Update: ನಿಮ್ಮ ಆಧಾರ್‌ನಲ್ಲಿನ ಫೋಟೋ ಬದಲಾಯಿಸುವುದು ಹೇಗೆ?


ಕಳೆದ ವರ್ಷ ಒಟ್ಟು 2.89 ಲಕ್ಷ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿದೆ:
ಹೀರೋ ಮೋಟೋಕಾರ್ಪ್ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಬಹಳಷ್ಟು ರಫ್ತು ಮಾಡಲು ಪ್ರಾರಂಭಿಸಿದೆ, ಇದು ಏಷ್ಯಾ, ಆಫ್ರಿಕಾ, ದಕ್ಷಿಣ ಮತ್ತು ಮಧ್ಯ ಅಮೆರಿಕದ ಜೊತೆಗೆ ಕೆರಿಬಿಯನ್ ಪ್ರದೇಶವನ್ನು ಒಳಗೊಂಡಿದೆ. ಕಂಪನಿಯು ಕಳೆದ ವರ್ಷ ದ್ವಿಚಕ್ರ ವಾಹನಗಳನ್ನು ರಫ್ತು ಮಾಡುವ ಎಲ್ಲಾ ದಾಖಲೆಗಳನ್ನು ಮುರಿದಿದೆ ಮತ್ತು 2021 ರಲ್ಲಿ ಕಂಪನಿಯ ರಫ್ತು ಶೇಕಡಾ 71 ರಷ್ಟು ಹೆಚ್ಚಾಗಿದೆ. Hero MotoCorp ಕಳೆದ ವರ್ಷ ಒಟ್ಟು 2.89 ಲಕ್ಷ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿದೆ. ಇದು ಬಹಳ ದೊಡ್ಡ ಅಂಕಿ ಅಂಶವಾಗಿದೆ. 2020 ರಲ್ಲಿ ಈ ರಫ್ತು ಸಂಖ್ಯೆಯನ್ನು 1.69 ಲಕ್ಷ ಆಗಿತ್ತು. Hero MotoCorp ಈ ರಫ್ತು ಮೈಲಿಗಲ್ಲನ್ನು ಆಚರಿಸುತ್ತಿರುವಾಗ, ಕಂಪನಿಗೆ ಈ ಅಂಕಿ ಅಂಶವು ಆಶ್ಚರ್ಯವೇನಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.