ಬೆಂಗಳೂರು : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಹೆಚ್ಚಿರುವ ತೈಲ ಬೆಲೆ ಇಳಿಕೆಯಾಗುವ ಲಕ್ಷಣಗಳು ಕೂಡಾ ಗೋಚರಿಸುತ್ತಿಲ್ಲ. ಇದೀಗ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇಂದು ಹೀರೋ ಮೋಟೋಕಾರ್ಪ್ ತನ್ನ ಮೊದಲ ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ತನ್ನ ಇ-ಮೊಬಿಲಿಟಿ ಬ್ರ್ಯಾಂಡ್ ವಿಡಾ ಅಡಿಯಲ್ಲಿ ಈ ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಬಿಡುಗಡೆಗೂ ಮುನ್ನ ಈ ಸ್ಕೂಟರ್ ಅನ್ನು ಸುಮಾರು 2 ಲಕ್ಷ ಕಿ.ಮೀ ಓಡಿಸಿ ಪರೀಕ್ಷೆ ನಡೆಸಲಾಗಿದ್ದು, ಖರೀದಿಯ ನಂತರ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.  


COMMERCIAL BREAK
SCROLL TO CONTINUE READING

 ಇ-ಸ್ಕೂಟರ್‌ನಲ್ಲಿರಲಿದೆ  ಈ ವೈಶಿಷ್ಟ್ಯಗಳು : 
ಇ-ಸ್ಕೂಟರ್‌ನ ವಿವರಗಳನ್ನು ಕಂಪನಿಯು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ ಮಾಧ್ಯಮಗಳಲ್ಲಿನ ಮಾಹಿತಿಯ ಪ್ರಕಾರ, ಈ ಸ್ಕೂಟರ್‌ನಲ್ಲಿ ಸ್ಥಾಪಿಸಲಾದ ಎಲೆಕ್ಟ್ರಾನಿಕ್ ಮೋಟಾರ್ 3kW ನ ಗರಿಷ್ಠ ಶಕ್ತಿಯನ್ನು ಮತ್ತು 115Nm ನ ಟಾರ್ಕ್ ಅನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಈ ಇ-ಸ್ಕೂಟರ್ ಅನ್ನು ಸುಮಾರು 25 ಕಿ.ಮೀ ವರೆಗೆ ತಡೆರಹಿತವಾಗಿ ಓಡಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ : Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..?


ಗ್ರಾಹಕರು ಬ್ಯಾಟರಿ ವಿನಿಮಯದ ಸೌಲಭ್ಯವನ್ನು ಪಡೆಯುತ್ತಾರೆ :
ಮೂಲಗಳ ಪ್ರಕಾರ, ಹೀರೋ ಮೋಟೋಕಾರ್ಪ್‌ನ ಇ-ಸ್ಕೂಟರ್ ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನದೊಂದಿಗೆ ಬರಲಿದೆ. ಇದಕ್ಕಾಗಿ ಕಂಪನಿಯು ತೈವಾನ್ ಮೂಲದ ಗೊಗೊರೊ ಜೊತೆ ಪಾಲುದಾರಿಕೆ ಹೊಂದಿದೆ. ಈ ಕಂಪನಿಯನ್ನು ಬ್ಯಾಟರಿ ತಯಾರಿಕೆ ಮತ್ತು ವಿನಿಮಯ ತಂತ್ರಜ್ಞಾನದಲ್ಲಿ ಪರಿಣಿತ ಎಂದು ಪರಿಗಣಿಸಲಾಗಿದೆ. ಈ ತಂತ್ರಜ್ಞಾನದ ಅಡಿಯಲ್ಲಿ, ಬಳಕೆದಾರರು ಸ್ಕೂಟರ್‌ನ ಬ್ಯಾಟರಿಯನ್ನು ಸ್ವತಃ ಬದಲಾಯಿಸಲು ಸಾಧ್ಯವಾಗುತ್ತದೆ.


ದೇಶದಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೆಚ್ಚಿಸಲು ಹೀರೋ ಕಂಪನಿಯು ಬಿಪಿಸಿಎಲ್‌ನೊಂದಿಗೆ ಸಹಭಾಗಿತ್ವ ಹೊಂದಿದೆ. ಎರಡೂ ಕಂಪನಿಗಳು ಒಟ್ಟಾಗಿ ಬೆಂಗಳೂರು, ದೆಹಲಿ ಸೇರಿದಂತೆ ದೇಶದ 7 ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಮೂಲಸೌಕರ್ಯವನ್ನು ಸಿದ್ಧಪಡಿಸಲಿವೆ. 


ಇದನ್ನೂ ಓದಿ : Gold Price Today : ಮತ್ತೆ ಏರಿಕೆಯಾಯಿತು ಚಿನ್ನದ ಬೆಲೆ, ಬೆಲೆಯಲ್ಲಿ ಕೊಂಚ ಇಳಿಕೆ


ಸ್ಕೂಟರ್ ಬೆಲೆ ಎಷ್ಟು ? : 
ಹೀರೋ ಕಂಪನಿಯ ಈ ಮೊದಲ ಇ-ಸ್ಕೂಟರ್ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಲ್‌ಇಡಿ ಲ್ಯಾಂಪ್, ಸ್ಮಾರ್ಟ್ ಸೆನ್ಸಾರ್, ಫಿಕ್ಸೆಡ್ ಸೆಟಪ್ ಬಾರ್, ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಮ್, ಹೈಡ್ರಾಲಿಕ್ ಡಿಸ್ಕ್ ಬ್ರೇಕ್‌ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮೊದಲ ಇ-ಸ್ಕೂಟರ್‌ನ ಬೆಲೆಯನ್ನು ಕಂಪನಿಯು ಇನ್ನು ಕೂಡಾ ಬಹಿರಂಗಪಡಿಸಿಲ್ಲ. ಈ ಸ್ಕೂಟರ್‌ನ ಬೆಲೆ 80 ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಗೆ ಪ್ರವೇಶಿಸಿದ ನಂತರ, ಈ ಇ-ಸ್ಕೂಟರ್ ಬಜಾಜ್ ಚೇತಕ್, ಓಲಾ ಎಸ್ 1, ಓಕಿನಾವಾ ಮತ್ತು ಟಿವಿಎಸ್ ಐಕ್ಯೂಬ್‌ಗಳೊಂದಿಗೆ  ಸ್ಪರ್ಧೆಗೆ ಇಳಿಯಲಿದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.