ನವದೆಹಲಿ: Hero MotoCorp ಈ ಹಬ್ಬದ ಋತುವಿನಲ್ಲಿ 8 ಹೊಸ ಮಾದರಿಗಳನ್ನು (ಬೈಕುಗಳು ಮತ್ತು ಸ್ಕೂಟರ್‌ಗಳು) ಬಿಡುಗಡೆ ಮಾಡಲು ಯೋಜಿಸಿದೆ. ಗ್ರಾಹಕರು ಮತ್ತು ನಿರ್ದಿಷ್ಟ ಪ್ರಾದೇಶಿಕ ಮಾರುಕಟ್ಟೆಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಮಾದರಿಗಳನ್ನು ಹೊರ ತರಲಾಗುವುದು ಅಂತಾ ಕಂಪನಿಯು ದೃಢಪಡಿಸಿದೆ.


COMMERCIAL BREAK
SCROLL TO CONTINUE READING

2022ರ ದೀಪಾವಳಿ ಹಬ್ಬದ ಸೀಸನ್ ದ್ವಿಚಕ್ರ ವಾಹನ ತಯಾರಕರಿಗೆ ಖಂಡಿತ ಉತ್ತಮವಾಗಲಿದೆ ಎಂದು ಹೀರೋ ಮೋಟೋಕಾರ್ಪ್ ಮುಖ್ಯ ಬೆಳವಣಿಗೆ ಅಧಿಕಾರಿ ರಂಜಿವ್ಜಿತ್ ಸಿಂಗ್ ಹೇಳಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುತ್ತದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಇನ್ಮುಂದೆ ಅವಮಾನ ಎದುರಿಸೋ ಅಗತ್ಯವಿಲ್ಲ; ನಿಮಿಷದಲ್ಲಿ ಚೇಂಜ್ ಮಾಡಬಹುದು Aadhar ಫೋಟೋ: ಹೇಗೆ ಗೊತ್ತಾ!


ಮುಂಬರುವ ಹೊಸ ಹೀರೋ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ ಈ ಶ್ರೇಣಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Hero Vida Electric Scooter), ಎಕ್ಸ್‌ಟ್ರೀಮ್ 160 R ಸ್ಟೆಲ್ತ್ 2.0 ಆವೃತ್ತಿ, ಅಸ್ತಿತ್ವದಲ್ಲಿರುವ ಮಾದರಿಯ ನವೀಕರಿಸಿದ ಆವೃತ್ತಿಗಳು ಮತ್ತು ಹೊಸ ಬಣ್ಣ ರೂಪಾಂತರಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಹೇಳುವುದಾದರೆ, ಇದು ಕಂಪನಿಯ ಹೊಸ ವಿಡಾ ಉಪ-ಬ್ರಾಂಡ್ ಅಡಿಯಲ್ಲಿ ಬರುವ ಮೊದಲ ಮಾದರಿಯಾಗಿದೆ. ಇ-ಸ್ಕೂಟರ್‌ನ ಬೆಲೆ ಸುಮಾರು 1 ಲಕ್ಷ ರೂ. ಮತ್ತು ಬಜಾಜ್ ಇ-ಚೇತಕ್, ಟಿವಿಎಸ್ ಐಕ್ಯೂಬ್, ಓಲಾ S1 ಪ್ರೊಗೆ ಸ್ಪರ್ಧೆ ಒಡ್ಡಲಿದೆ ಅಂತಾ ಹೇಳಲಾಗುತ್ತಿದೆ.


ಹೀರೋ ವಿಡಾ ಸ್ಕೂಟರ್ ಅನ್ನು ಜೈಪುರದಲ್ಲಿರುವ ಬ್ರ್ಯಾಂಡ್‌ನ R & D ಹಬ್ ಸೆಂಟರ್ ಆಫ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (ಸಿಐಟಿ)ಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೀರೋನ ಆಂಧ್ರಪ್ರದೇಶದ ಸೌಲಭ್ಯವನ್ನು ಎಲೆಕ್ಟ್ರಿಕ್ ಸ್ಕೂಟರ್‌ನ ಉತ್ಪಾದನಾ ಕೇಂದ್ರವಾಗಿ ಬಳಸಲಾಗುತ್ತದೆ. ಅಕ್ಟೋಬರ್ 7ರಂದು ಮುಂಬರುವ ಇ-ಸ್ಕೂಟರ್‌ನ ಬೆಲೆಗಳು, ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸುವುದಾಗಿ ಕಂಪನಿಯು ಮಾಹಿತಿ ನೀಡಿದೆ.


ಇದನ್ನೂ ಓದಿ: Liquidity Crisis In Banks: ಬ್ಯಾಂಕ್ ಗಳಲ್ಲಿ ನಗದು ಕೊರತೆ, ಹೂಡಿಕೆದಾರರ ಓಲೈಕೆಗೆ ಮುಂದಾಗಲಿವೆಯಾ ಬ್ಯಾಂಕುಗಳು


ಇದರೊಂದಿಗೆ ಈ ಹಬ್ಬದ ಋತುವಿನಲ್ಲಿ ದೇಶೀಯ ದ್ವಿಚಕ್ರ ವಾಹನ ತಯಾರಕ ಹೀರೋ Maestro Xoom ಸ್ಕೂಟರ್‍ಅನ್ನು ಹೊರತರಲಿದೆ. ಇದು ಮೆಸ್ಟ್ರೋ ಎಡ್ಜ್‌ನ ಮೇಲಿರುತ್ತದೆ, ಇದರ ಡ್ರಮ್ ರೂಪಾಂತರಕ್ಕೆ 66,820 ರೂ. ಮತ್ತು ಡಿಸ್ಕ್ ರೂಪಾಂತರಕ್ಕೆ 73,498 ರೂ. ದರವಿರುತ್ತದೆ. ಸಾಮಾನ್ಯ ಮಾದರಿಗೆ ಹೋಲಿಸಿದರೆ ಇದು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.