World Bank Outlook On Global Growth: ವಿಶ್ವ ಬ್ಯಾಂಕ್ ಮತ್ತೊಮ್ಮೆ ಜಾಗತಿಕ ಬೆಳವಣಿಗೆಯ ತನ್ನ ದೃಷ್ಟಿಕೋನವನ್ನು ಬದಲಾಯಿಸಿದೆ. ವಿಶ್ವದಾದ್ಯಂತ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರಗಳನ್ನು ತೀವ್ರವಾಗಿ ಹೆಚ್ಚಿಸುವ ನಿರ್ಧಾರ ಕೈಗೊಂಡ ಕಾರಣ ವಿಶ್ವ ಬ್ಯಾಂಕ್ ಮತ್ತೊಮ್ಮೆ 2023 ರ ತನ್ನ ಜಾಗತಿಕ ಬೆಳವಣಿಗೆಯ ದೃಷ್ಟಿಕೋನವನ್ನು ಶೇಕಡಾ 2.1 ಕ್ಕೆ ಇಳಿಸಿದೆ.


COMMERCIAL BREAK
SCROLL TO CONTINUE READING

ಜಾಗತಿಕ ಬೆಳವಣಿಗೆಯು 2022 ರಲ್ಲಿ ಶೇ. 3.1 ರಷ್ಟಿದ್ದರೆ, 2023 ರಲ್ಲಿ ಅದು ಕೇವಲ ಶೇ. 2.1 ರಷ್ಟಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ ಎಂದು ವಿಶ್ವ ಬ್ಯಾಂಕ್ ತನ್ನ ಇತ್ತೀಚಿನ ಔಟ್ ಲುಕ್ ನಲ್ಲಿ ಹೇಳಿದೆ. ವಿಶ್ವ ಬ್ಯಾಂಕ್ 2024 ರ ಜಾಗತಿಕ ಬೆಳವಣಿಗೆಯ ಮುನ್ನೋಟವನ್ನು ಶೇ. 2.4 ಕ್ಕೆ ಇಳಿಸಿದೆ, ಇದು ಜನವರಿ 2023 ರಲ್ಲಿ ಶೇ. 2.7 ರಷ್ಟು ಇರಲಿದೆ ಎಂದು ಮೊದಲೇ ಅಂದಾಜಿಸಲಾಗಿತ್ತು. ಕೇಂದ್ರೀಯ ಬ್ಯಾಂಕ್‌ಗಳ ಕಟ್ಟುನಿಟ್ಟಿನ ಹಣಕಾಸು ನೀತಿಯ ಪರಿಣಾಮವು ವ್ಯಾಪಾರದಿಂದ ವಸತಿ ಹೂಡಿಕೆಯವರೆಗೂ ಕಂಡುಬರುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.


ಈ ವರ್ಷದ ಜನವರಿಯಲ್ಲಿ, ವಿಶ್ವಬ್ಯಾಂಕ್ ಜಾಗತಿಕ ಬೆಳವಣಿಗೆ ದರವನ್ನು ಅಂದರೆ 2023 ರಲ್ಲಿ ಜಿಡಿಪಿ ಶೇ. 1.7 ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಆರ್ಥಿಕತೆಯಲ್ಲಿ ಸುಧಾರಣೆಯ ನಂತರ, ಅದನ್ನು ಶೇ. 2.1ಕ್ಕೆ ಹೆಚ್ಚಿಸಲಾಗಿದೆ. ಆದರೆ 2024ಕ್ಕೆ ಅದನ್ನು ಶೇ.2.7ರಿಂದ ಶೇ.2.4ಕ್ಕೆ ಇಳಿಸಲಾಗಿದೆ.


2023ರ ದ್ವಿತೀಯಾರ್ಧದಲ್ಲಿ ಜಾಗತಿಕ ಬೆಳವಣಿಗೆಯ ವೇಗ ಕಡಿಮೆಯಾಗಲಿದ್ದು, 2024ರಲ್ಲೂ ಈ ದೌರ್ಬಲ್ಯ ಮುಂದುವರಿಯಲಿದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ. ಬ್ಯಾಂಕುಗಳ ಬಿಕ್ಕಟ್ಟು ಮತ್ತು ಕಟ್ಟುನಿಟ್ಟಾದ ವಿತ್ತೀಯ ನೀತಿಯನ್ನು ಮತ್ತಷ್ಟು ನೋಡಿದರೆ, ಜಾಗತಿಕ ಬೆಳವಣಿಗೆಯಲ್ಲಿ ಮತ್ತಷ್ಟು ಇಳಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.


ಇದನ್ನೂ ಓದಿ-RBI MPC Meting: ಇಂದಿನಿಂದ ಆರಂಭಗೊಂಡಿದೆ ಆರ್ಬಿಐ ಹಣಕಾಸು ನೀತಿ ಪರಿಶೀಲನಾ ಸಭೆ, ಈ ಬಾರಿಯೂ ರೆಪೋ ದರಗಳಲ್ಲಿ ಬದಲಾವಣೆ ಇಲ್ಲ ಎಂದ ತಜ್ಞರು


ವಾಸ್ತವದಲ್ಲಿ ಅಮೆರಿಕಾದ ಫೆಡರಲ್ ರಿಸರ್ವ್ ನಿಂದ ಭಾರತದ ಆರ್‌ಬಿಐ ನಿಂದ ಹಿಡಿದು ಮತ್ತು ಬ್ರಿಟನ್‌ನ ಬ್ಯಾಂಕ್ ಆಫ್ ಇಂಗ್ಲೆಂಡ್‌ವರೆಗೆ, ಉಕ್ರೇನ್‌ನ ಮೇಲೆ ರಷ್ಯಾದ ದಾಳಿಯ ನಂತರ ವೇಗವಾಗಿ ಏರುತ್ತಿರುವ ಹಣದುಬ್ಬರವನ್ನು ತಡೆಯಲು ಕೇಂದ್ರೀಯ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿವೆ, ಇದು ಆರ್ಥಿಕ ಬೆಳವಣಿಗೆಯ ವೇಗದ ಮೇಲೆ ಪರಿಣಾಮ ಬೀರಲಿದೆ ಎಂದು ಅದು ಹೇಳಿದೆ.


ಇದನ್ನೂ ಓದಿ-Stock Market Update: ಸೆನ್ಸೆಕ್ಸ್ ನಲ್ಲಿ ಭಾರಿ ಗೂಳಿ ಜಿಗಿತ, ಹಸಿರು ಅಂಕಿಗಳಲ್ಲಿ ವಹಿವಾಟು ನಿಲ್ಲಿಸಿದ ಷೇರುಪೇಟೆ


ಇನ್ನೊಂದೆಡೆ ವಿಶ್ವಬ್ಯಾಂಕ್ ಅಮೆರಿಕದ ಆರ್ಥಿಕ ಅಭಿವೃದ್ಧಿಯಲ್ಲಿ ಹೆಚ್ಚಳದ ಭರವಸೆಯನ್ನು ವ್ಯಕ್ತಪಡಿಸಿದೆ. ತನ್ನ ಅಂದಾಜಿನಲ್ಲಿ, ವಿಶ್ವಬ್ಯಾಂಕ್ ಅಮೆರಿಕದ ಆರ್ಥಿಕ ಬೆಳವಣಿಗೆಯ ದರವು ಈ ವರ್ಷ ಶೇ. 1.1 ರಷ್ಟು ಇರಬಹುದು ಎಂದು ಹೇಳಿದೆ, ಇದು ಜನವರಿಯಲ್ಲಿ ವ್ಯಕ್ತಪಡಿಸಿದ ಅಂದಾಜಿನ ಎರಡುಪಟ್ಟಾಗಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.