Gold Silver Today :  ಮದುವೆಯ ಋತುವಿನಲ್ಲಿ ಚಿನ್ನವು ಅಗ್ಗವಾಗಿದೆ. ಇದಲ್ಲದೇ ಇಂದು ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಾಣುತ್ತಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ ಮತ್ತು ಬೆಳ್ಳಿ ಲೋಹಗಳ ಬೆಲೆಯಲ್ಲಿನ ಇಳಿಕೆ ಕಂಡು ಬಂದಿದೆ. ಇಂದು MCX ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 60,000 ರೂ. ಆಸುಪಾಸಿನಲ್ಲಿದೆ. ಅದೇ ಸಮಯದಲ್ಲಿ, ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನಲ್ಲಿ ಚಿನ್ನವು ಅಗ್ಗವಾಗಿದೆ. IBJA ನಲ್ಲಿ ಚಿನ್ನದ ಬೆಲೆ ಸುಮಾರು 61,000 ರೂ. ಆಗಿದೆ. 


COMMERCIAL BREAK
SCROLL TO CONTINUE READING

MCX ನಲ್ಲಿ ಅಗ್ಗವಾಯಿತು ಚಿನ್ನ ಮತ್ತು ಬೆಳ್ಳಿ :


ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಇಂದು ಶೇಕಡಾ 0.06 ರಷ್ಟು ಕುಸಿದು 10 ಗ್ರಾಂ. ಚಿನ್ನ 60,676 ರೂ.ಗೆ ತಲುಪಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.60ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 72,699 ರೂ.ಆಗಿದೆ.  


ಇದನ್ನೂ ನೋಡಿ : ಕಂಪನಿಯು ನಿಮ್ಮ ಹಣವನ್ನು ಇಪಿಎಫ್ ಖಾತೆಗೆ ಜಮಾ ಮಾಡುತ್ತಿದೆಯೇ ? ತಿಳಿದುಕೊಳ್ಳುವುದು ಹೇಗೆ?


ಇಂದಿನ ಚಿನ್ನದ ದರ : 
22 ಕ್ಯಾರೆಟ್ ಚಿನ್ನದ ಬೆಲೆ : 
ದೆಹಲಿ - 56,650 ರೂ. 
ಬೆಂಗಳೂರು -56,500 ರೂ. 
ಮುಂಬೈ - 56,500 ರೂ.
ಕೋಲ್ಕತ್ತಾ -56,500 ರೂ.
ಕೇರಳ -56,500 ರೂ.
ಹೈದರಾಬಾದ್  -56,500 ರೂ.
ಚೆನ್ನೈ  - 57,050 ರೂ. 


ಇಂದಿನ ಬೆಳ್ಳಿ ದರ (100 ಗ್ರಾಂ ಗಳಲ್ಲಿ ) :
ದೆಹಲಿ - 7,600 ರೂ. 
ಬೆಂಗಳೂರು - 7,525 ರೂ. 
ಮುಂಬೈ - 7,600 ರೂ. 
ಕೋಲ್ಕತ್ತಾ - 7,600 ರೂ. 
ಕೇರಳ - 7,900 ರೂ.  
ಹೈದರಾಬಾದ್  -7,900 ರೂ. 
ಚೆನ್ನೈ  -  7,900 ರೂ


ಇದನ್ನೂ ನೋಡಿ : ಕ್ರೆಡಿಟ್ ಕಾರ್ಡ್ ಬಳಕೆದಾರರೇ ಹುಷಾರ್! ಇಂತಹ ಎಸ್ಎಂಎಸ್ ಬಗ್ಗೆ ಜಾಗರೂಕರಾಗಿರಿ
 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ : 
ಅಂತಾರಾಷ್ಟ್ರೀಯ ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. COMEXನಲ್ಲಿ ಚಿನ್ನದ ದರವು ಪ್ರತಿ ಔನ್ಸ್ ಗೆ  1984 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ. ಬೆಳ್ಳಿ ಕೂಡ ಪ್ರತಿ ಔನ್ಸ್ ಗೆ 23.78 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ. 


10 ಗ್ರಾಂ ಬೆಲೆಯನ್ನು ಪರಿಶೀಲಿಸಿ : 
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ಈ ನಂಬರ್ ಗೆ ಮಿಸ್ಕಾಲ್ ಕೊಡುತ್ತಿದ್ದಂತೆಯೇ ಇಂದಿನ ಬೆಲೆ ಎಷ್ಟಿದೆ ಎನ್ನುವ ಮೆಸೇಜ್ ನಿಮ್ಮ ಮೊಬೈಲ್ ಗೆ ಬರುತ್ತದೆ. 


IBJA ಶುದ್ಧತೆಗೆ ಅನುಗುಣವಾಗಿ ದರ:


IBJA ಮತ್ತು ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ಎರಡರಿಂದಲೂ ಚಿನ್ನದ ದರಗಳನ್ನು ನೀಡಲಾಗುತ್ತದೆ. ಈ ದರಗಳನ್ನು ವಿವಿಧ ಶುದ್ಧತೆಗೆ ಅನುಗುಣವಾಗಿ ನೀಡಲಾಗುತ್ತದೆ. ಈ ಚಿನ್ನದ ಬೆಲೆಗಳಲ್ಲಿ ತೆರಿಗೆಗಳು ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಸೇರಿಸಲಾಗಿಲ್ಲ. ಈ ಬೆಲೆಗಳ ಮೇಲೆ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ವಿಧಿಸಿದ ನಂತರವೇ ಮಾರುಕಟ್ಟೆಯಲ್ಲಿ ಚಿನ್ನದ ಆಭರಣ ಖರೀದಿಸುವುದು ಸಾಧ್ಯವಾಗುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.