ಮತ್ತೆ ಏರಿಕೆಯಾಯಿತು ಎಲ್ ಪಿಜಿ ದರ ! ಇಂದಿನಿಂದ ಸಿಲಿಂಡರ್ ಗೆ ಪಾವತಿಸಬೇಕು ಎರಡು ಸಾವಿರಕ್ಕೂ ಅಧಿಕ ಬೆಲೆ !
LPG Cylinder Price :ಇಂದಿನಿಂದ ಗ್ಯಾಸ್ ಸಿಲಿಂಡರ್ ದರದಲ್ಲಿ ಏರಿಕೆಯಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ.
LPG Cylinder Price : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ನವೆಂಬರ್ 30 ರ ಸಂಜೆ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದರ ಕೂಡಾ ದುಬಾರಿಯಾಗಿದೆ. ತೈಲ ಕಂಪನಿಗಳು ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಗ್ಯಾಸ್ ಸಿಲಿಂಡರ್ ದರದಲ್ಲಿ 26 ರೂಪಾಯಿ ಏರಿಕೆಯಾಗಿದೆ.
ಇಂದಿನಿಂದಲೇ ಹೊಸ ದರ ಜಾರಿ :
ಡಿಸೆಂಬರ್ 1 ರಿಂದ ಅಂದರೆ ಇಂದಿನಿಂದ ವಾಣಿಜ್ಯ ಸಿಲಿಂಡರ್‌ನ ಹೊಸ ದರವನ್ನು ಜಾರಿಗೆ ತರಲಾಗಿದೆ. 19 ಕೆಜಿ ಸಿಲಿಂಡರ್‌ಗೆ ಇಂದಿನಿಂದ ದೆಹಲಿಯಲ್ಲಿ 1796.50 ರೂ. ಪಾವತಿಸಬೇಕಾಗುತ್ತದೆ. ಅದೇ ರೀತಿ ಕೋಲ್ಕತ್ತಾದಲ್ಲಿ 1885.50 ರೂಪಾಯಿ ಬದಲು 1908 ರೂಪಾಯಿ, ಮುಂಬೈನಲ್ಲಿ 1728 ರೂಪಾಯಿ ಬದಲು 1749 ರೂಪಾಯಿ ಪಾವತಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ಈ ದರ 1883 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಈ ಬೆಲೆ 1968.50 ರೂ.ಗೆ ಏರಿಕೆಯಾಗಿದೆ. ಈ ಹಿಂದೆ ಇಲ್ಲಿ ಸಿಲಿಂಡರ್ 1942 ರೂ.ಗೆ ಲಭ್ಯವಿತ್ತು. ಪ್ರತಿ ತಿಂಗಳ 1 ರಂದು ತೈಲ ಕಂಪನಿಗಳು ಹೊಸ ಸಿಲಿಂಡರ್ ದರಗಳನ್ನು ಘೋಷಣೆ ಮಾಡುತ್ತವೆ.
ಇದನ್ನೂ ಓದಿ : Google Pay ಟ್ರ್ಯಾನ್ಸ್ಯಕ್ಷನ್ ಹಿಸ್ಟರಿ ಡಿಲೀಟ್ ಮಾಡ್ಬೇಕ? ಇಲ್ಲಿದೆ ಸುಲಭ ಮಾರ್ಗ
ಇನ್ನು ಸಿಲಿಂಡರ್ ಗೆ ಪಾವತಿಸಬೇಕು 2024.5 ರೂ. :
ರಾಜಸ್ಥಾನದ ಜೈಪುರದಲ್ಲಿ ಸಿಲಿಂಡರ್ ಬೆಲೆ 1819 ರೂ. ಅದೇ ರೀತಿ ಭೋಪಾಲ್ ನಲ್ಲಿ ಇಂದಿನಿಂದ 1804.5 ರೂ. ಹೈದರಾಬಾದ್, ತೆಲಂಗಾಣದಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 2024.5 ರೂ.ಗೆ ಏರಿಕೆಯಾಗಿದೆ. ಛತ್ತೀಸ್ ಗಢದ ರಾಜಧಾನಿ ರಾಯಪುರದಲ್ಲಿ 2004 ರೂ. ಪಾವತಿಸಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಮಾತ್ರ ಏರಿಕೆಯಾಗಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಡಿಸೆಂಬರ್ 1 ರಿಂದ ಅನ್ವಯವಾಗುವ ದರಗಳು :
ದೆಹಲಿ-1796.50
ಕೋಲ್ಕತ್ತಾ-1908
ಮುಂಬೈ-1749
ಚೆನ್ನೈ-1968.50
ಬೆಂಗಳೂರು : 1883.00
ಇದನ್ನೂ ಓದಿ : ಜೀವನದಲ್ಲಿ ಕೋಟ್ಯಾಧಿಪತಿಯಾಗಲು ಇಲ್ಲಿದೆ ಒಂದು ವ್ಯಾಪಾರ ಪರಿಕಲ್ಪನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ