ನವದೆಹಲಿ : ಹೋಳಿ ರಿಯಾಯಿತಿಗಳು ಮತ್ತು ಕೊಡುಗೆಗಳು: ಹೋಳಿ ಹಬ್ಬದ ಪ್ರಯುಕ್ತ ಹಲವು ಉತ್ಪನ್ನಗಳ ಮೇಲೆ ಸಾಕಷ್ಟು ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇ-ಕಾಮರ್ಸ್ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹಲವು ರೀತಿಯ ಕೊಡುಗೆಗಳನ್ನು ತಂದಿವೆ. ಪೇಟಿಎಂ ಮಾಲ್ (Paytm MAll) ಸಹ ಹೋಳಿ ವಿಶೇಷ ಮಾರಾಟದೊಂದಿಗೆ ಬಂದಿದೆ. ಈ ಶಾಪಿಂಗ್ ಮಾರಾಟದಲ್ಲಿ ನೀವು ಹಲವು ಉತ್ಪನ್ನಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.


COMMERCIAL BREAK
SCROLL TO CONTINUE READING

ಪೇಟಿಎಂ ಮಾಲ್‌ನಲ್ಲಿ ಮಹಾ ಶಾಪಿಂಗ್ ಉತ್ಸವ :
ಪೇಟಿಎಂ (Paytm) ಮಾಲ್‌ನಲ್ಲಿ ಮಹಾ ಶಾಪಿಂಗ್ ಫೆಸ್ಟಿವಲ್ (Maha Shopping Festival) ಸೇಲ್ ಪ್ರಾರಂಭವಾಗಿದೆ. ನಮ್ಮ ಪಾಲುದಾರ ವೆಬ್ಸೈಟ್ ಜೀ ನ್ಯೂಸ್‌ನ ವರದಿಯ ಪ್ರಕಾರ, ಮಾರ್ಚ್ 20ರಿಂದ ಆರಂಭವಾಗಿರುವ ಈ ಸೇಲ್ ಇನ್ನೂ ಕೆಲವು ದಿನಗಳವರೆಗೆ ಮುಂದುವರೆಯಲಿದೆ. ಈ ಮಾರಾಟದಲ್ಲಿ, 15,000 ಕ್ಕೂ ಹೆಚ್ಚು ಬ್ರಾಂಡ್‌ಗಳ ಉತ್ಪನ್ನಗಳ ಮೇಲೆ 80 ಪ್ರತಿಶತ ರಿಯಾಯಿತಿ, ಕ್ಯಾಶ್‌ಬ್ಯಾಕ್ ಮತ್ತು ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ - ಹಣ ಇಲ್ಲವೇ? ಚಿಂತೆಬಿಡಿ Amazon, Paytm, Mobikwik ನೀಡುತ್ತಿವೆ ಉತ್ತಮ ಕೊಡುಗೆ


ಸ್ಮಾರ್ಟ್‌ಫೋನ್‌ಗಳಿಗೆ 25 ಪ್ರತಿಶತದಷ್ಟು ರಿಯಾಯಿತಿ :
ಪೇಟಿಎಂನ ಅಧಿಕೃತ ಆ್ಯಪ್ ಪ್ರಕಾರ, ಪೇಟಿಎಂ ಮಾಲ್‌ನಲ್ಲಿ ಮಹಾ ಶಾಪಿಂಗ್ ಫೆಸ್ಟಿವಲ್ (Maha Shopping Festival) ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ (Smartphones) 25 ಪ್ರತಿಶತದಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ, ಮೊಬೈಲ್ ಖರೀದಿಸುವಾಗ ನೀವು 5000 ರೂಪಾಯಿಗಳ ಕ್ಯಾಶ್‌ಬ್ಯಾಕ್ ಅನ್ನು ಕೂಡ ಪಡೆಯಬಹುದು. ಇಷ್ಟೇ ಅಲ್ಲದೆ ಆ್ಯಪ್ ನಿಮಗೆ 9,600 ರೂ.ಗಳ ವಿನಿಮಯ ಕೊಡುಗೆಯನ್ನು ಸಹ ನೀಡುತ್ತಿದೆ. 


ಇದನ್ನೂ ಓದಿ - LPG Gas Cylinder: 819 ರೂ. ಗ್ಯಾಸ್ ಸಿಲಿಂಡರ್ ಅನ್ನು 119 ರೂ.ಗೆ ಖರೀದಿಸಿ


ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ 75% ರಿಯಾಯಿತಿ:
ಮಹಾ ಶಾಪಿಂಗ್ ಫೆಸ್ಟಿವಲ್ (Maha Shopping Festival) ಸೇಲ್ ನಲ್ಲಿ ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ 75 ಪ್ರತಿಶತದಷ್ಟು ರಿಯಾಯಿತಿ ಮತ್ತು 3,000 ರೂ.ಗಳ ಕ್ಯಾಶ್‌ಬ್ಯಾಕ್ (Cashback) ನೀಡಲಾಗುತ್ತಿದೆ. ಅದೇ ಸಮಯದಲ್ಲಿ ಗ್ರಾಹಕರು ಎಲ್ಲಾ ಉತ್ಪನ್ನಗಳನ್ನು ನೋ ಕಾಸ್ಟ್ ಇಎಂಐನಲ್ಲಿ ಖರೀದಿಸಬಹುದಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.