Home Loan EMI: ಹೋಮ್ ಲೋನ್ ಒಂದು ದೀರ್ಘಾವಧಿಯ ಸಾಲವಾಗಿದೆ. ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವಾಗ ಮಾತ್ರವಲ್ಲದೆ, ಫ್ಲಾಟ್ ಖರೀದಿಗೂ ಹೋಮ್ ಲೋನ್ ಪಡೆಯುತ್ತಾರೆ. ಹತ್ತಾರು ಜಾಗಗಳಲ್ಲಿ ಸಾಲ ಮಾಡುವುದಕ್ಕಿಂತ ಒಟ್ಟಿಗೆ ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆಯುವುದರಿಂದ ಹಣದ ಅಗತ್ಯತೆಯನ್ನು ಪೂರೈಸಬಹುದು. ಜೊತೆಗೆ ಸುಲಭ ಇಎಂಐ ಕಂತುಗಳನ್ನು ಕಟ್ಟುತ್ತಾ ಸಾಲ ಮರುಪಾವತಿಯನ್ನು ಮಾಡಬಹುದು. ಆದಾಗ್ಯೂ, ಮಿಸ್ ಆಗಿ ನಿಮ್ಮ ಗೃಹ ಸಾಲದ ಇಎಂಐ ಬೌನ್ಸ್ ಆದರೆ ಕೂಡಲೇ ಒಂದು ಕೆಲಸ ಮಾಡುವುದು ಅಗತ್ಯ.


COMMERCIAL BREAK
SCROLL TO CONTINUE READING

ಹೌದು, ಗೃಹ ಸಾಲ ಪಡೆದಾಗ ನಿಗದಿತ ದಿನಾಂಕದಂದು ಇಎಂಐ ಅನ್ನು ಸಹ ಪಾವತಿಸಬೇಕು. ಒಂದೊಮ್ಮೆ ಇಎಂಐ ಬೌನ್ಸ್ ಆದರೆ ಬ್ಯಾಂಕ್ ಅಂತಹ ಗ್ರಾಹಕರನ್ನು ಡೀಫಾಲ್ಟರ್ ಎಂದು ಘೋಷಿಸಬಹುದು. ಇದು ನಿಮ್ಮ CIBIL ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಭವಿಷ್ಯದಲ್ಲಿ ಯಾವುದೇ ಲೋನ್ ಪಡೆಯುವಲ್ಲಿ ನಿಮಗೆ ಸಮಸ್ಯೆ ಉಂಟು ಮಾಡಬಹುದು. 


ಇದನ್ನೂ ಓದಿ- Stock market today: ಸೆನ್ಸೆಕ್ಸ್, ನಿಫ್ಟಿ 50 ಕುಸಿತ; ಹೂಡಿಕೆದಾರರಿಗೆ ₹9 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಕಾರಣವೇನು?


ಮೊದಲ ಇಎಂಐ ಬೌನ್ಸ್ ಆದಾಗ ಏನು ಮಾಡಬೇಕು? 
ನಿಮ್ಮ ಗೃಹ ಸಾಲದ ಇಎಂಐ ಮೊದಲ ಬಾರಿಗೆ ಬೌನ್ಸ್ ಆಗಿದ್ದರೆ ಕೆಲವು ಪ್ರತಿಕೂಲ ಪರಿಸ್ಥಿತಿಯಿಂದಾಗಿ ಇದು ಸಂಭವಿಸಿದ್ದಲ್ಲಿ ಕೂಡಲೇ ಬ್ಯಾಂಕ್ ಮ್ಯಾನೇಜರ್ ಭೇಟಿಯಾಗಿ ಸಮಸ್ಯೆ ಬಗ್ಗೆ ತಿಳಿಸಿ, ಭವಿಷ್ಯದಲ್ಲಿ ಮತ್ತೆ ಈ ರೀತಿಯ ಸಮಸ್ಯೆ ಆಗುವುದಿಲ್ಲ ಎಂಬುದನ್ನೂ ಅವರಿಗೆ ಮನವರಿಕೆ ಮಾಡಿ ಕೊಡಿ. ಈ ಸಂದರ್ಭದಲ್ಲಿ ಬ್ಯಾಂಕ್ ದಂಡ ವಿಧಿಸಿದರೂ ಅದು ಹೆಚ್ಚೀನೂ ಇರುವುದಿಲ್ಲ. 


ಸತತ ಎರಡು ಇಎಂಐ ಬೌನ್ಸ್ ಆದ್ರೆ... 
ಸತತವಾಗಿ ಒಂದೆರಡು ಕಂತುಗಳು ಬೌನ್ಸ್ ಆದರೂ ಕೂಡ ಬ್ಯಾಂಕ್ ಮ್ಯಾನೇಜರ್‌ನೊಂದಿಗೆ ಮಾತನಾಡಿ, ಬ್ಯಾಲೆನ್ಸ್ ಹಣವನ್ನು ಪಾವತಿಸಿ ನಿಮ್ಮ CIBIL ನಲ್ಲಿ ನಕಾರಾತ್ಮಕ ವರದಿಯನ್ನು ಕಳುಹಿಸದಂತೆ ಮ್ಯಾನೇಜರ್‌ಗೆ ವಿನಂತಿ ಇದು ಭವಿಷ್ಯದಲ್ಲಿ ನೀವು ಲೋನ್ ಪಡೆಯಲು ಎದುರಾಗಬಹುದಾದ ಸಮಸ್ಯೆಯನ್ನು ತಪ್ಪಿಸಲು ಸಹಾಯಕವಾಗಿದೆ. 


ಇದನ್ನೂ ಓದಿ- ನಕಲಿ ದಾಖಲೆ ತೋರಿಸಿ ಬಿಪಿಎಲ್ ಕಾರ್ಡ್ ಪಡೆದು ಶಾಕ್‌ನಲ್ಲಿದ್ದವರಿಗೆ ಗುಡ್ ನ್ಯೂಸ್..!


ದೀರ್ಘ ಕಾಲದವರೆಗೆ ಇಎಂಐ ಕಟ್ಟಲು ಸಾಧ್ಯವಾಗದಿದ್ದರೆ... 
ಒಂದೊಮ್ಮೆ ಭಾರೀ ಆರ್ಥಿಕ ಮುಗ್ಗಟ್ಟಿನಿಂದಾಗಿ ನಿಮಗೆ ದೀರ್ಘಸಮಯದವರೆಗೆ ಇಎಂಐ ಪಾವತಿಸಲು ಸಾಧ್ಯವಾಗುತ್ತಲೇ ಇಲ್ಲ ಎಂಬ ಕಷ್ಟದ ಸಂದರ್ಭದಲ್ಲಿ  ಬ್ಯಾಂಕ್ ಮ್ಯಾನೇಜರ್‌ನೊಂದಿಗೆ ಮಾತನಾಡಿ, ಸ್ವಲ್ಪ ಸಮಯಾವಕಾಶಕ್ಕಾಗಿ ಅರ್ಜಿ ಸಲ್ಲಿಸಿ. 


ಸಂಬಳ ತಡವಾಗುವುದರಿಂದ ಇಎಂಐ ಬೌನ್ಸ್ : 
ಸಂಬಳ ತಡವಾಗುವುದರಿಂದ ಇಎಂಐ ಬೌನ್ಸ್ ಆಗುತ್ತಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಇಎಂಐ ಪಾವತಿ ದಿನಾಂಕವನ್ನು ಬದಲಾಯಿಸುವ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಮಾತನಾಡಿ, ಇದಕ್ಕಾಗಿ ಅರ್ಜಿ ಸಲ್ಲಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.