ಬೆಂಗಳೂರು  : Honda Affordable Bikes : ಹೋಂಡಾ ಆಕ್ಟಿವಾದೊಂದಿಗೆ ಭಾರತೀಯ ಮಾರುಕಟ್ಟೆಯ ಸ್ಕೂಟರ್ ವಿಭಾಗದಲ್ಲಿ ಬಲವಾದ ಹೆಜ್ಜೆ ಇಟ್ಟ ನಂತರ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಮೋಟಾರ್‌ಸೈಕಲ್ ವಿಭಾಗದಲ್ಲಿಯೂ ಅನೇಕ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಹೀರೊ ಮೋಟೊಕಾರ್ಪ್‌ಗೆ ಪೈಪೋಟಿ ನೀಡಲು ಈ ಹೊಸ ಬೈಕ್‌ಗಳನ್ನು ವಿಶೇಷವಾಗಿ ತರುವ ಬಗ್ರಗೆ ತಯಾರಿ ನಡೆಸಿದೆ.  ಕಂಪನಿಯು ಹೊಸ ಎಂಟ್ರಿ ಲೆವೆಲ್ ವಾಹನಗಳನ್ನು ಹೊರತರುವ ಬಗ್ಗೆ ಈಗಾಗಲೇ ಅಧ್ಯಯನ ಮಾಡಿದೆ. ಕಂಪನಿಯು 150 ಸಿಸಿ ವಿಭಾಗದಲ್ಲಿ ಬೈಕ್‌ಗಳನ್ನು ಬಿಡುಗಡೆ ಮಾಡಲು ಚಿಂತಿಸುತ್ತಿದೆ.  


COMMERCIAL BREAK
SCROLL TO CONTINUE READING

ಕಂಪನಿಯು ಮಾರುಕಟ್ಟೆಗೆ ತರಲಿದೆ ಅಗ್ಗದ ಬೈಕ್‌ :
ನಾವು CD110 ನಂತಹ ಅಗ್ಗದ ಮೋಟಾರ್‌ಸೈಕಲ್ ಅನ್ನು ಹೊಂದಿದ್ದೇವೆ. ಆದರೆ ಸ್ಪರ್ಧೆಗೆ ಹೋಲಿಸಿದರೆ ನಾವು ತುಂಬಾ ದುರ್ಬಲರಾಗಿದ್ದೇವೆ ಎಂದು ಎಚ್‌ಎಂಎಸ್‌ಐ ಅಧ್ಯಕ್ಷ ಅಸುಶಿ ಒಗಾಟಾ ತಿಳಿಸಿದ್ದಾರೆ.  ಹಾಗಾಗಿ ಕೈಗೆಟುಕುವ ಬೈಕ್‌ಗಳ ವಿಭಾಗವು ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಕಂಡುಹಿಡಿಯಲು  ಪ್ರಯತ್ನಿಸಿದ್ದೇವೆ. ಈ ನಿಟ್ಟಿನಲ್ಲಿ ಅಧ್ಯಯನ ಪೂರ್ಣಗೊಂಡಿದ್ದು, ಇದೀಗ ನಾವು ಕೈಗೆಟುಕುವ ವಿಭಾಗದಲ್ಲಿ ಹೊಸ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಿದ್ದೇವೆ ಎಂದ ಹೇಳಿದ್ದಾರೆ. 


ಇದನ್ನೂ ಓದಿ :  LPG Price Increases: LPG ಬೆಲೆಯಲ್ಲಿ 50 ರೂಪಾಯಿ ಏರಿಕೆ , ಜನಸಾಮಾನ್ಯನ ಮೇಲೆ ಮತ್ತೆ ಬೆಲೆ ಏರಿಕೆ ಬರೆ


ಹೀರೋ ಮೋಟೋಕಾರ್ಪ್‌ನದ್ದೇ ಪ್ರಾಬಲ್ಯ :  
ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ಒಟ್ಟು 42 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿದೆ. ಈ ಪೈಕಿ ಶೇ.56 ರಷ್ಟು 75-110 ಸಿಸಿ ವಿಭಾಗದಲ್ಲಿವೆ. ಈ ವಿಭಾಗದಲ್ಲಿ Hero MotoCorp ನ ಮೋಟಾರ್ ಸೈಕಲ್ ಗಳೇ ಜಾಸ್ತಿ. ಪ್ರತಿ ನಾಲ್ಕು ಮೋಟಾರ್‌ಸೈಕಲ್‌ಗಳಲ್ಲಿ ಮೂರು ಹೀರೋಗೆ ಸೇರಿದ ಬೈಕ್ ಗಳೇ ಆಗಿದೆ. ಹೆಚ್ಎಂಎಸ್ಐ ಪ್ರಸ್ತುತ ಈ ವಿಭಾಗದಲ್ಲಿ ಕೇವಲ 3.6 ಶೇಕಡಾ ಪಾಲನ್ನು ಹೊಂದಿದೆ. ಆದರೂ, ಜಪಾನ್‌ನ ಈ ದ್ವಿಚಕ್ರ ವಾಹನ ತಯಾರಕರು 110-125 ಸಿಸಿ ವಿಭಾಗದಲ್ಲಿ ಉತ್ತಮ ಹಿಡಿತವನ್ನು ಹೊಂದಿದ್ದಾರೆ. 2022 ರ ಹಣಕಾಸು ವರ್ಷದಲ್ಲಿ ಜನವರಿಯಿಂದ ಏಪ್ರಿಲ್ ನಡುವೆ ಕಂಪನಿಯು ಈ ವಿಭಾಗದಲ್ಲಿ ಸುಮಾರು 9.25 ಲಕ್ಷ ಬೈಕ್‌ಗಳನ್ನು ಮಾರಾಟ ಮಾಡಿದೆ. ಈ ವಿಭಾಗದಲ್ಲಿಯೂ  Hero MotoCorp ಪ್ರಾಬಲ್ಯ ಹೊಂದಿದ್ದು,  ಕಂಪನಿಯು 48 ಪ್ರತಿಶತ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. 


ಇದನ್ನೂ ಓದಿ :  ಚೆನ್ನೈನಲ್ಲಿ ಇಳಿಕೆಯಾದ ಇಂಧನ ಬೆಲೆ: ನಿಮ್ಮ ಊರಲ್ಲಿ ಪೆಟ್ರೋಲ್‌ ದರ ಎಷ್ಟಿದೆ ಗೊತ್ತಾ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.