ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ತತ್ತರಿಸಿರುವ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಅನೇಕ ಜನಪ್ರಿಯ ಕಂಪನಿಗಳು ನಿರಂತರವಾಗಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇವುಗಳಲ್ಲಿ ಒಂದು ಚೀನಾದ ಇವಿ ತಯಾರಕ ಹಾರ್ವಿನ್ ಕೂಡ ಒಂದು. ಹಾರ್ವಿನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ.  ಇದು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ 2022 ಹಾರ್ವಿನ್ ಎಸ್ಕೆ 3  ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದೇ ಚಾರ್ಜ್‌ನಲ್ಲಿ 160 ಕಿಮೀ ವರೆಗೆ ಓಡಿಸಬಹುದು ಮತ್ತು ಪ್ರತ್ಯೇಕ ಬ್ಯಾಟರಿಯನ್ನು ಸ್ಥಾಪಿಸಿದಾಗ ಈ ಶ್ರೇಣಿಯು 300 ಕಿಮೀಗೆ ಹೆಚ್ಚಾಗುತ್ತದೆ ಎಂದು ಹಾರ್ವಿನ್ ಕಂಪನಿ ಹೇಳಿಕೊಂಡಿದೆ.


COMMERCIAL BREAK
SCROLL TO CONTINUE READING

ಅತ್ಯುತ್ತಮ ವಿನ್ಯಾಸದ ಇ-ಸ್ಕೂಟರ್:
2022 ಹಾರ್ವಿನ್ ಎಸ್ಕೆ 3  ಜಾಗತಿಕ ಮಾರುಕಟ್ಟೆಯಲ್ಲಿ ಉಳಿದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಭಿನ್ನವಾಗಿದೆ. ಇದನ್ನು ಇಂದಿನ ಯುಗದ ತೀಕ್ಷ್ಣ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ಮಾದರಿಯಲ್ಲಿ ಕಂಡುಬರುವ ಏಕೈಕ ಪ್ರಮುಖ ಬದಲಾವಣೆಯೆಂದರೆ ಮುಂಭಾಗದಲ್ಲಿ ಸ್ಥಾಪಿಸಲಾದ ಹೊಸ ವಿಂಡ್ ಡಿಫ್ಲೆಕ್ಟರ್. ಸ್ಕೂಟರ್‌ನೊಂದಿಗೆ  ಮೊದಲಿನಂತೆ  ಟ್ವಿನ್ ಎಲ್‌ಇಡಿ ಹೆಡ್‌ಲೈಟ್ ಅನ್ನು ನೀಡಲಾಗಿದೆ, ಇದು ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ. ಹಳೆಯ ಮಾದರಿಗೆ ಹೋಲಿಸಿದರೆ, 2022 ಹಾರ್ವಿನ್ ಎಸ್ಕೆ3 ಅನ್ನು ಮ್ಯಾಕ್ಸಿ ಸ್ಕೂಟರ್‌ನಂತೆ ಮಾಡಲಾಗಿದೆ ಮತ್ತು ಅದರ ಎಲ್ಲಾ ಭಾಗಗಳನ್ನು ಸಹ ಅದೇ ರೀತಿಯಲ್ಲಿ ಮಾಡಲಾಗಿದೆ ಎನ್ನಲಾಗಿದೆ. 


ಇದನ್ನೂ ಓದಿ- Samsung Fab Grab Fest: ಬ್ರಾಂಡ್‌ನ ಪ್ರತಿಯೊಂದು ಉತ್ಪನ್ನದ ಮೇಲೆ ಭಾರಿ ರಿಯಾಯಿತಿ


ಉತ್ತಮ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್:
ಹಾರ್ವಿನ್ ಹೊಸ ಎಸ್ಕೆ3 ಗೆ ಪ್ರತಿ ಚಾರ್ಜ್‌ಗೆ 300 ಕಿಮೀ ವರೆಗೆ ಉತ್ತಮ ಶ್ರೇಣಿಯನ್ನು ನೀಡಿರುವುದು ಮಾತ್ರವಲ್ಲದೆ ಇದಕ್ಕೆ ಉತ್ತಮ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಈ ಹೈಟೆಕ್ ವೈಶಿಷ್ಟ್ಯಗಳು ಪೂರ್ಣ ಟಿಎಫ್ಟಿ  ಸ್ಪೀಡೋಮೀಟರ್ ಪ್ಯಾನೆಲ್ ಅನ್ನು ಒಳಗೊಂಡಿದ್ದು ಅದು ಸ್ಮಾರ್ಟ್‌ಫೋನ್ ಸಂಪರ್ಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇತರೆ ವೈಶಿಷ್ಟ್ಯಗಳೆಂದರೆ ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಕೀ ಲಾಕ್ ಸಿಸ್ಟಮ್ ಮತ್ತು ಕಾಂಬಿನೇಷನ್ ಬ್ರೇಕಿಂಗ್ ಸಿಸ್ಟಮ್. ಆಸನದ ಕೆಳಗೆ ಸಂಗ್ರಹಣೆಯು ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ, ಆದರೆ ಪ್ರತ್ಯೇಕ ಬ್ಯಾಟರಿಯನ್ನು ಸ್ಥಾಪಿಸಿದರೆ ಅದು ಕಡಿಮೆಯಾಗಬಹುದು ಎನ್ನಲಾಗಿದೆ.


90 ಕಿಮೀ/ಗಂಟೆ ಗರಿಷ್ಠ ವೇಗ:
ಈ ಎಲೆಕ್ಟ್ರಿಕ್ ಸ್ಕೂಟರ್‌ನ ಒಟ್ಟು ತೂಕ 115 ಕೆಜಿ ಮತ್ತು ಇದು 3.1 ಕೆಡಬ್ಲ್ಯೂ ಮೋಟಾರ್‌ನೊಂದಿಗೆ ಬರುತ್ತದೆ. 2022 ಹಾರ್ವಿನ್ ಎಸ್ಕೆ3 ಪಡೆದ 72ವಿ 36ಎಎಚ್ Lithysm-Ion ಬ್ಯಾಟರಿ ಪ್ಯಾಕ್ ಒಟ್ಟು 6.2 kW ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ. ಆರಾಮದಾಯಕ ಪ್ರಯಾಣಕ್ಕಾಗಿ, ಸ್ಕೂಟರ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಇದಕ್ಕೆ 14 ಇಂಚಿನ ಮಿಶ್ರಲೋಹದ ಚಕ್ರಗಳನ್ನು ನೀಡಲಾಗಿದೆ. 


ಇದನ್ನೂ ಓದಿ- Maruti Alto: ಗ್ರಾಹಕರ ನೆಚ್ಚಿನ ಮಾರುತಿ ಆಲ್ಟೊ ಇದೀಗ ಹೊಸ ಶೈಲಿಯಲ್ಲಿ ಬಿಡುಗಡೆ


ಕಂಪನಿಯು ಪ್ರಸ್ತುತ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಯುರೋಪ್‌ನಲ್ಲಿ 2022 ಎಸ್ಕೆ3 ನ ಬೆಲೆ 4,500 ಯುರೋ ಆಗಿದ್ದು, ಭಾರತೀಯ ಕರೆನ್ಸಿಯಲ್ಲಿ ಸುಮಾರು 3.63 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಈ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.