World Largest House: ಗುಜರಾತ್‌ನಲ್ಲಿರುವ ಬೃಹತ್ ಲಕ್ಷ್ಮಿ ವಿಲಾಸ್ ಅರಮನೆಯು ಬ್ರಿಟನ್‌ನ ಪ್ರಸಿದ್ಧ ಬಕಿಂಗ್‌ಹ್ಯಾಮ್ ಅರಮನೆಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಕಾರಣ ಇದನ್ನು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವೆಂದು ಪರಿಗಣಿಸಲಾಗಿದೆ.ಲಕ್ಷ್ಮಿ ವಿಲಾಸ್ ಅರಮನೆಯು ಬರೋಡಾದ ಗಾಯಕ್ವಾಡ್ ಕುಟುಂಬದ ಒಡೆತನದಲ್ಲಿದೆ.ಹಿಂದೆ ಬರೋಡ  ಗಾಯಕ್ವಾಡ್  ಅಧೀನದಲ್ಲಿತ್ತು.ಇಂದಿಗೂ ಇವರು ಬರೋಡಾದಲ್ಲಿ ಹೆಚ್ಚು ಗೌರವಾನ್ವಿತರಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.ಕುಟುಂಬದ ಮುಖ್ಯಸ್ಥ ಎಚ್‌ಆರ್‌ಹೆಚ್ ಸಮರ್ಜಿತ್ ಸಿಂಗ್ ಗಾಯಕ್ವಾಡ್,ವಾಂಕನೇರ್ ರಾಜಮನೆತನಕ್ಕೆ ಸೇರಿದ ರಾಧಿಕಾ ರಾಜೇ ಗಾಯಕ್ವಾಡ್ ಅವರನ್ನು ವಿವಾಹವಾಗಿದ್ದಾರೆ.


COMMERCIAL BREAK
SCROLL TO CONTINUE READING

ಗಾತ್ರದಲ್ಲಿ ಇದು ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆಗಿಂತ ದೊಡ್ಡದಾಗಿದೆ :
ಲಕ್ಷ್ಮಿ ವಿಲಾಸ್ ಅರಮನೆಯನ್ನು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವೆಂದು ಪರಿಗಣಿಸಲಾಗಿದೆ ಏಕೆಂದರೆ ಗಾತ್ರದಲ್ಲಿ ಇದು ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆಗಿಂತ ದೊಡ್ಡದಾಗಿದೆ.Housing.com ಪ್ರಕಾರ,ಲಕ್ಷ್ಮಿ ವಿಲಾಸ್ ಅರಮನೆಯು 3,04,92,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.ಆದರೆ,ಬಕಿಂಗ್ಹ್ಯಾಮ್ ಅರಮನೆಯು 8,28,821 ಚದರ ಅಡಿಗಳನ್ನು ಹೊಂದಿದೆ. ಗಮನಿಸಬೇಕಾದ ಅಂಶವೆಂದರೆ,ವಿಶ್ವದ ಅತ್ಯಂತ ದುಬಾರಿ ಮನೆಯಾದ ಮುಖೇಶ್ ಅಂಬಾನಿ ಅವರ ಆಂಟಿಲಿಯಾ ಇರುವುದು 48,780 ಚದರ ಅಡಿಗಳು. ಅದರ ಬೆಲೆ ಸುಮಾರು 15,000 ಕೋಟಿ ಎಂದು ಹೇಳಲಾಗುತ್ತದೆ.ಆದರೆ ಲಕ್ಷ್ಮಿ ವಿಲಾಸ ಅರಮನೆ ಮಾರು ಒಂದೂವರೆ ಲಕ್ಷ ಪೌಂಡ್ ವೆಚ್ಚದಲ್ಲಿ 1890ರಲ್ಲಿ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ III ರವರು 170 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ಈ ಅರಮನೆಯನ್ನು ನಿರ್ಮಿಸಿದರು.


ಇದನ್ನೂ ಓದಿ: 27 ಅಂತಸ್ತಿನ ಭವ್ಯ ಬಂಗಲೆಯಲ್ಲಿ ಬದುಕುತ್ತಿರುವ ಮುಖೇಶ್ ಅಂಬಾನಿ ಬಾಲ್ಯ ಕಳೆದದ್ದು ಈ ಪುಟ್ಟ ಮನೆಯಲ್ಲಿ !ಇಲ್ಲಿದೆ ನೋಡಿ ಫೋಟೋ


ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಓದಿರುವ ರಾಧಿಕಾ :
ಜುಲೈ 19, 1978 ರಂದು ಜನಿಸಿದ ರಾಧಿಕಾ ರಾಜೇ ಗಾಯಕ್ವಾಡ್ ಅವರ ತಂದೆ ಡಾ ಎಂಕೆ ರಂಜಿತ್ ಸಿಂಗ್ ಝಾಲಾ ತಮ್ಮ ಪಟ್ಟವನ್ನು ತ್ಯಜಿಸಿ ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದ ಝಾಲಾ ರಾಜಮನೆತನದ ಮೊದಲ ಸದಸ್ಯರಾಗಿದ್ದರು.ರಾಧಿಕಾ ರಾಜೇ ಗಾಯಕ್ವಾಡ್ ಅವರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.2002ರಲ್ಲಿ ಮಹಾರಾಜ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರನ್ನು ಮದುವೆಯಾಗುವ ಮೊದಲು ಅವರು ಪತ್ರಕರ್ತೆಯಾಗಿ ಕೆಲಸ ಮಾಡಿದರು.


ದೆಹಲಿಯಲ್ಲಿ ಸಾಧಾರಣ ಜೀವನ : 
ರಾಧಿಕಾ ರಾಜೆ ಅವರು ರಾಜಮನೆತನದಲ್ಲಿ ಜನಿಸಿದರೂ ದೆಹಲಿಯಲ್ಲಿ ಅವರ ಜೀವನ ತುಂಬಾ ಸಾಮಾನ್ಯವಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಶಾಲಾ ಬಸ್‌ಗಳಲ್ಲಿ ಶಾಲೆಗೆ ಹೋಗುತ್ತಿದ್ದೆ ಎಂದು ರಾಧಿಕಾ ರಾಜೆ ನೆನಪಿಸಿಕೊಳ್ಳುತ್ತಾರೆ."ನಾವು ತುಂಬಾ ಸರಳವಾದ ಜೀವನವನ್ನು ನಡೆಸುತ್ತಿದ್ದೆವು, ಹಾಗಾಗಿ ಬೇಸಿಗೆ ರಜೆಯಲ್ಲಿ ನಾನು ವಾಂಕನೇರ್ಗೆ ಹೋಗುತ್ತಿದ್ದಾಗ,ಜನರ ನಮ್ಮನ್ನು ನೋಡುತ್ತಿದ್ದ ರೀತಿ, ಕೊಡುತ್ತಿದ್ದ ಗೌರವ ಕಂಡು ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ. 


ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ..ಆಭರಣ ಕೊಳ್ಳಲು ಇದು ಸೂಕ್ತ ಸಮಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.