Anant-Radhika Marriage total cost : ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಕುಬೇರನ ಮನೆಯಲ್ಲಿ ಮದುವೆ ಅಂದ್ರೆ ಸುಮ್ನೆನಾ.. ಆಕಾಶವೇ ಛತ್ರ, ಭೂಮಿಯೇ ಮದುವೆ ಮಂಟಪವಾಗುತ್ತದೆ.. ಮುಖೇಶ್ ಮತ್ತು ನೀತಾ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ನಿಜಕ್ಕೂ ಶ್ರೀಮಂತಿಕೆಯ ವೈಭೋಗಕ್ಕೆ ಕೈಹಿಡಿದ ಕನ್ನಡಿಯಾಗಿದೆ.. 


COMMERCIAL BREAK
SCROLL TO CONTINUE READING

ಚಿತ್ರರಂಗ, ರಾಜಕೀಯ, ಉದ್ಯಮಿಗಳ ಜತೆಗೆ ದೇಶ-ವಿದೇಶದ ವಿವಿಧ ಕ್ಷೇತ್ರಗಳ ಗಣ್ಯರ ಮಧ್ಯೆ ಅನಂತ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಡೀ ದೇಶ ಮಾತ್ರವಲ್ಲದೆ ವಿದೇಶಗಳ ಗಮನ ಸೆಳೆದ ಈ ಮದುವೆಗೆ ಆರ್ಥಿಕ ರಾಜಧಾನಿ ಮುಂಬೈ ಸಾಕ್ಷಿಯಾಗಿತ್ತು. ನಿನ್ನೆ ರಾತ್ರಿ (ಶುಕ್ರವಾರ) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್‌-ರಾಧಿಕಾ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು..


ಇದನ್ನೂ ಓದಿ:ಅಂಬಾನಿ ಅದ್ಧೂರಿ ಮದುವೆ ಸಮಾರಂಭದಲ್ಲಿ ಬಿಟೌನ್‌ ʼಬಂಗಾರದ ಜಿಂಕೆʼ..!


ಭಾರತೀಯ ಚಿತ್ರರಂಗದ ತಾರೆಯರ ಜೊತೆಗೆ ಹಾಲಿವುಡ್ ನಟರು ಹಾಗೂ ಇತರೆ ಗಣ್ಯರು ಅನಂತ್ ಮತ್ತು ರಾಧಿಕಾ ಅವರ ಮದುವೆಗೆ ಆಗಮಿಸಿದ್ದರು. ಅಲ್ಲದೆ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ವಿವಾಹದಲ್ಲಿ ಭಾಗವಹಿಸಿದ್ದರು. ದೇಶದ ಎಲ್ಲಾ ಪ್ರಮುಖ ಉದ್ಯಮಿಗಳು ಈ ಮದುವೆಯಲ್ಲಿ ಕಾಣಿಸಿಕೊಂಡರು. ಅನಂತ್ ಮತ್ತು ರಾಧಿಕಾ ಅಂಬಾನಿ ಕುಟುಂಬದವರು ಮತ್ತು ಎಲ್ಲಾ ವರ್ಗದ ಗಣ್ಯರ ಸಮ್ಮುಖದಲ್ಲಿ ವಿವಾಹವಾದರು. 


ಅನಂತ್ ಮತ್ತು ರಾಧಿಕಾ ಮದುವೆಯ ಖರ್ಚು ಎಷ್ಟು ಗೊತ್ತಾ? ಅಕ್ಷರಶಃ ಐದು ಸಾವಿರ ಕೋಟಿ... ಹೌದು ನೀವು ಕೇಳುತ್ತಿರುವುದು ನಿಜ. ಈ ವರ್ಷದ ಮಾರ್ಚ್‌ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮದೊಂದಿಗೆ ಆರಂಭವಾದ ಈ ಮದುವೆ ವಧುವಿನ ಕೊರಳಿಗೆ ಮೂರು ಮುಳ್ಳು ಬಿದ್ದರೂ ಪೂರ್ಣಗೊಳ್ಳಲಿಲ್ಲ. ನಾಳೆ ಅಂದರೆ ಜುಲೈ 14 ರಂದು ಮತ್ತೊಮ್ಮೆ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಮದುವೆ ಪೂರ್ವದಿಂದ ನಾಳಿನ ಆರತಕ್ಷತೆ ಕಾರ್ಯಕ್ರಮಕ್ಕೆ ಅಂಬಾನಿ ಕುಟುಂಬ 5 ಸಾವಿರ ಕೋಟಿ ರೂ. ಖರ್ಚು ಮಾಡಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.