Senior Citizen Savings Scheme: ಕಚೇರಿಗೆ ಹೋಗುವುದು, ಚಿಕ್ಕ ಪುಟ್ಟ ವ್ಯಾಪಾರ ನಡೆಸುವುದು ಅಥವಾ ಇತರ ಉದ್ಯೋಗಗಳನ್ನು ಮಾಡುವ ಮೂಲಕ ಹಣವನ್ನು ಗಳಿಸಲು ಸಾಧ್ಯವಾಗದವರಿಗೆ ಈ ಹಿರಿಯ ನಾಗರಿಕರ ಉಳಿತಾಯ ಯೋಜನೆ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. 


COMMERCIAL BREAK
SCROLL TO CONTINUE READING

ಇನ್ನು ಈ SCSS ಯೋಜನೆಯಲ್ಲಿ ಒಬ್ಬರು 8.2% ವರೆಗಿನ ಬಡ್ಡಿದರವನ್ನು ಪಡೆಯಲು ಅರ್ಹರಾಗಿರುತ್ತಾರೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ಈ ಯೋಜನೆಯಲ್ಲಿ ಉದಾರವಾಗಿ ಹೂಡಿಕೆ ಮಾಡಬಹುದು. ಇವರಲ್ಲದೆ 55 ರಿಂದ 60 ವರ್ಷದೊಳಗಿನ ಸ್ವಯಂ ನಿವೃತ್ತಿ ಪಡೆದ ವ್ಯಕ್ತಿಗಳು ಮತ್ತು ಕನಿಷ್ಠ 60 ವರ್ಷ ವಯಸ್ಸಿನ ನಿವೃತ್ತ ರಕ್ಷಣಾ ಸಿಬ್ಬಂದಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. 


ಇದನ್ನೂ ಓದಿ-ಗ್ಯಾರಂಟಿ ಇಲ್ಲದೆ 3 ಲಕ್ಷ ರೂ.ಗಳವರೆಗೆ ಸಾಲ, ಕಡಿಮೆ ಬಡ್ಡಿ-ಸಬ್ಸಿಡಿ ಯೋಜನೆ ಕುರಿತು ಆರ್ಬಿಐ ಮಹತ್ವದ ಘೋಷಣೆ!


ಗರಿಷ್ಠ ಹೂಡಿಕೆ ಮಿತಿ: 
SCSS ಯೋಜನೆಯಲ್ಲಿ ಕನಿಷ್ಠ 1000 ರೂ.ಗಳಿಂದ ಗರಿಷ್ಠ 30 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ. ಠೇವಣಿ ಮಾಡಿದ ಮೊತ್ತಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಇನ್ನು ಹಿರಿಯ ನಾಗರಿಕರು ಸಹ ಈ ಯೋಜನೆಯ ಮೂಲಕ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಐದು ವರ್ಷಕ್ಕೆ 1 ಲಕ್ಷದಿಂದ 15 ಲಕ್ಷದವರೆಗೆ ಹೂಡಿಕೆ ಮಾಡಿದವರಿಗೆ ಸಿಗುವ ಲಾಭವೇನು?


ರೂ 1 ಲಕ್ಷದಿಂದ ರೂ 15 ಲಕ್ಷದವರೆಗಿನ ಠೇವಣಿದಾರರಿಗೆ, ಖಾತೆ ಮೆಚ್ಯೂರಿಟಿಯಲ್ಲಿ ಎಷ್ಟು ಮರುಪಾವತಿ ಮಾಡಲಾಗುವುದು ಎಂಬ ವಿವರವಾದ ಲೆಕ್ಕಾಚಾರದ ಬಗ್ಗೆ ತಿಳಿಯೋಣ: 


1. ನೀವು ರೂ 1,00,000 ಹೂಡಿಕೆ ಮಾಡಿದರೆ ನೀವು ಮೆಚ್ಯೂರಿಟಿಯಲ್ಲಿ ರೂ 1,41,000 ಪಡೆಯುತ್ತೀರಿ.


2. ನೀವು ರೂ 2,00,000 ಹೂಡಿಕೆ ಮಾಡಿದಾಗ, ನೀವು ಮೆಚ್ಯೂರಿಟಿ ಮೊತ್ತವಾಗಿ ರೂ 2,82,000 ಪಡೆಯುತ್ತೀರಿ.


3. ನೀವು ರೂ 3,00,000 ಹೂಡಿಕೆ ಮಾಡಬಹುದು ಮತ್ತು ಮೆಚ್ಯೂರಿಟಿಯಲ್ಲಿ ರೂ 4,23,000 ಪಡೆಯಬಹುದು.


4. ನೀವು ರೂ 4,00,000 ಹೂಡಿಕೆ ಮಾಡಿದರೆ, ಖಾತೆಯ ಮುಕ್ತಾಯದಲ್ಲಿ ನೀವು ರೂ 5,64,000 ಪಡೆಯುತ್ತೀರಿ.


5. ನೀವು ರೂ 5,00,000 ಹೂಡಿಕೆ ಮಾಡಿದರೆ ನೀವು ಮುಕ್ತಾಯದ ಮೇಲೆ ರೂ 7,05,000 ಪಡೆಯುತ್ತೀರಿ.


6. ನೀವು ರೂ 6,00,000 ಠೇವಣಿ ಮಾಡಿದರೆ ನೀವು ಮುಕ್ತಾಯದ ಮೇಲೆ ರೂ 8,46,000 ಪಡೆಯುತ್ತೀರಿ.


7. ನೀವು ರೂ 7,00,000 ಹೂಡಿಕೆ ಮಾಡಿದಾಗ, ನೀವು ಮುಕ್ತಾಯದ ನಂತರ ರೂ 9,87,000 ಪಡೆಯುತ್ತೀರಿ.


8. ನೀವು ರೂ.8,00,000 ಹೂಡಿಕೆ ಮಾಡಿದರೆ, ನೀವು ಮುಕ್ತಾಯದ ಮೇಲೆ ರೂ.11,28,000 ಪಡೆಯುತ್ತೀರಿ.


9. ನೀವು ರೂ 9,00,000 ಹೂಡಿಕೆ ಮಾಡಿದಾಗ, ನೀವು ಮೆಚ್ಯೂರಿಟಿಯಲ್ಲಿ ರೂ 12,69,000 ಪಡೆಯುತ್ತೀರಿ.


10. ನೀವು ರೂ 10,00,000 ಹೂಡಿಕೆ ಮಾಡಿದರೆ, ನೀವು ಮೆಚ್ಯೂರಿಟಿಯಲ್ಲಿ ರೂ 14,10,000 ಪಡೆಯುತ್ತೀರಿ.


11. ನೀವು ರೂ 11,00,000 ಹೂಡಿಕೆ ಮಾಡಿದರೆ ಖಾತೆ ಮುಕ್ತಾಯದ ನಂತರ ನೀವು ರೂ 15,51,000 ಪಡೆಯುತ್ತೀರಿ.


12. ನೀವು ರೂ.12,00,000 ಹೂಡಿಕೆ ಮಾಡಿದರೆ, ನೀವು ಮುಕ್ತಾಯದ ನಂತರ ರೂ.16,92,000 ಪಡೆಯುತ್ತೀರಿ.


13. ನೀವು ಆರಂಭದಲ್ಲಿ 13,00,000 ರೂಗಳನ್ನು ಕಟ್ಟಿದರೆ ನೀವು ಮೆಚ್ಯೂರಿಟಿಯಲ್ಲಿ ರೂ 18,33,000 ಪಡೆಯುತ್ತೀರಿ.


14. ನೀವು ರೂ.14,00,000 ಹೂಡಿಕೆ ಮಾಡಿದರೆ, ನೀವು ಮುಕ್ತಾಯದ ನಂತರ ರೂ.19,74,000 ಪಡೆಯುತ್ತೀರಿ.


15. ನೀವು ರೂ.15,00,000 ಹೂಡಿಕೆ ಮಾಡಿದರೆ, ಖಾತೆಯ ಮುಕ್ತಾಯದ ಮೇಲೆ ನೀವು ರೂ.21,15,000 ಪಡೆಯುತ್ತೀರಿ.


ಇದನ್ನೂ ಓದಿ-TATA Harrier EV: ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಪರೀಕ್ಷೆ ಪ್ರಾರಂಭ, ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.