ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಬಹುತೇಕ ಸರ್ಕಾರಿ ಯೋಜನೆಗಳಿಗೆ ಈ ಆಧಾರ್ ಕಡ್ಡಾಯ. ಅದ್ರಂತೆ, ಯಾರಾದರೂ ಮೊದಲ ಬಾರಿಗೆ ಆಧಾರ್ ಕಾರ್ಡ್ ಅನ್ನು ಪಡೆಯುತ್ತಿದ್ರೆ, ಅದಕ್ಕಾಗಿ ಐಡಿ ಮತ್ತು ವಿಳಾಸ ಪುರಾವೆ (ಐಡಿ ಕಾರ್ಡ್) ಅಗತ್ಯವಿತ್ತು. ಈಗ ನಿಮ್ಮ ಬಳಿ ಯಾವುದೇ ಐಡಿ ಇಲ್ಲದಿದ್ದರೆ, ಇನ್ನೂ ನೀವು ಆಧಾರ್ ಕಾರ್ಡ್ ಪಡೆಯಬಹುದು. ಹಾಗಾದ್ರೆ, ಅದು ಹೇಗೆ?


COMMERCIAL BREAK
SCROLL TO CONTINUE READING

ದಾಖಲೆ ಇಲ್ಲದೆ ಆಧಾರ್ ಕಾರ್ಡ್ ಈ ರೀತಿ ಪಡೆಯಬೋದು!


ಇದನ್ನೂ ಓದಿ : Govt of India final notice to Twitter : ಕೇಂದ್ರ ಸರ್ಕಾರದಿಂದ ಟ್ವಿಟ್ಟರ್ ಗೆ ಫೈನಲ್ ನೋಟಿಸ್..!


ಯಾವುದೇ ದಾಖಲೆ ಇಲ್ಲದೆ ಆಧಾರ್ ಕಾರ್ಡ್ ಮಾಡಲು, ನೀವು ಹತ್ತಿರದ ಆಧಾರ್ ಸೇವಾ ಕೇಂದ್ರ(Aadhar Service Center)ಕ್ಕೆ ಹೋಗಬೇಕು. ಅಲ್ಲಿ ಪರಿಚಯಿಸುವವರ ಸಹಾಯದಿಂದ ಸುಲಭವಾಗಿ ಆಧಾರ್ ಕಾರ್ಡ್ ಪಡೆಯಬೋದು. ಪರಿಚಯಕಾರನನ್ನ ಯುಐಡಿಎಐನ ಪ್ರಾದೇಶಿಕ ಕಚೇರಿ ಪೋಸ್ಟ್ ಮಾಡಿದೆ. ಆದರೆ, ಪರಿಚಯ ಮಾಡುವವನು ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯ. ಆಧಾರ್ ಕೇಂದ್ರದಲ್ಲಿ ಸಾಮಾನ್ಯ ಪ್ರಕ್ರಿಯೆಯ ಮೂಲಕ ಆಧಾರ್ ಅನ್ನು ಉತ್ಪಾದಿಸಲಾಗುತ್ತದೆ ಮತ್ತು ಕಾರ್ಡ್ ಅನ್ನು 90 ದಿನಗಳಲ್ಲಿ ನಿಮ್ಮ ನೀಡಿದ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ.


ಇದನ್ನೂ ಓದಿ : Twitter Blue Tick : ಉಪರಾಷ್ಟ್ರಪತಿ ಬೆನ್ನಲ್ಲೇ RSS ಪ್ರಮುಖ ನಾಯಕರ ಟ್ವಿಟ್ ಖಾತೆ 'ಬ್ಲೂ ಟಿಕ್' ರದ್ದು


ಅರ್ಜಿದಾರರ ಗುರುತು ಮತ್ತು ವಿಳಾಸವನ್ನ ದೃಢೀಕರಿಸಲು ಪರಿಚಯಕಾರನು ಕೆಲಸ ಮಾಡುತ್ತಾನೆ. ದಾಖಲಾತಿ ನಮೂನೆಗೆ ಸಹಿ ಮಾಡಲು ಸಹ ಕೆಲಸ ಮಾಡುತ್ತದೆ. ಐಡಿಎಐ(IDAI) ಮಾರ್ಗಸೂಚಿಗಳ ಪ್ರಕಾರ, ಪರಿಚಯಿಸುವವನು ಅರ್ಜಿದಾರರ ಹೆಸರಿನಲ್ಲಿ ಪ್ರಮಾಣಪತ್ರವನ್ನ ಹೊರಡಿಸಬೇಕು, ಇದು ಮೂರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಆಧಾರ್ ಉತ್ಪಾದನೆ ಪ್ರಕ್ರಿಯೆಯಲ್ಲಿ ಪರಿಚಯ ಮಾಡುವವನು ಹಾಜರಿರುವುದು ಕಡ್ಡಾಯ.


ಇದನ್ನೂ ಓದಿ : Lockdown Relaxation in Delhi: ಜೂನ್ 7ರಿಂದ ದೆಹಲಿಯಲ್ಲಿ ಮಾರ್ಕೆಟ್, ಮಾಲ್‌ಗಳು ಓಪನ್, ಆದರೆ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ