Gratuity Calculator: ಒಂದು ವೇಳೆ ನೀವೂ ಕೂಡ ಖಾಸಗಿ ನೌಕರಿಯನ್ನು ಮಾಡುತ್ತಿದ್ದು, ಸತತ ಐದು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ ನಂತರ ನೀವು ಗ್ಯ್ರಾಚ್ಯುಟಿಗೆ ಅರ್ಹರಾಗುವಿರಿ ಎಂಬ ಸಂಗತಿ ನಿಮಗೂ ತಿಳಿದಿರುತ್ತದೆ. ಈ ಐದು ವರ್ಷಗಳ ಮಿತಿಯನ್ನು ಕಡಿತಗೊಳಿಸುವಂತೆ ನೌಕರರ ಸಂಘಟನೆಗಳಿಂದ ಸರ್ಕಾರಕ್ಕೆ ನಿರಂತರವಾಗಿ ಬೇಡಿಕೆಯನ್ನು ಸಲ್ಲಿಸುತ್ತಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಇನ್ನೊಂದೆಡೆ ಗ್ರ್ಯಾಚ್ಯುಟಿ ಬಗ್ಗೆ ಹೇಳುವುದಾದರೆ, ಗ್ರಾಚ್ಯುಟಿ ಎಂದರೇನು ಮತ್ತು ಅದನ್ನು ಉದ್ಯೋಗದಾತರು ಯಾವ ಆಧಾರದ ಮೇಲೆ ಲೆಕ್ಕ ಹಾಕುತ್ತಾರೆ ಎಂಬುದು ನಿಮಗೆ ತಿಳಿದ್ರಬೇಕು. ಗ್ರಾಚ್ಯುಟಿಯ (Gratuity) ಸಂಪೂರ್ಣ ಲೆಕ್ಕಾಚಾರ ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ಗ್ರಾಚ್ಯುಟಿಯನ್ನು ಈ ರೀತಿ ಲೆಕ್ಕ ಹಾಕಲಾಗುತ್ತದೆ (How To Calculate Gratuity)
ಗ್ರಾಚ್ಯುಟಿಯನ್ನು ಲೆಕ್ಕಾಚಾರ ಮಾಡುವುದು ಕಷ್ಟವಲ್ಲ. ಗ್ರಾಚ್ಯುಟಿ ಎನ್ನುವುದು ಉದ್ಯೋಗಿಗೆ ಕಂಪನಿಯಲ್ಲಿ ನಿರಂತರವಾಗಿ ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಸಿಗುವ ಮೊತ್ತವಾಗಿದೆ ಮೊತ್ತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, 5 ವರ್ಷಗಳ ಸೇವೆಯ ನಂತರ, ಪ್ರತಿ ವರ್ಷಕ್ಕೆ, ಕೊನೆಯ  ತಿಂಗಳ ಮೂಲ ವೇತನ ಮತ್ತು ತುಟ್ಟಿಭತ್ಯೆಯನ್ನು ಸೇರಿಸಲಾಗುತ್ತದೆ ಮತ್ತು ಅದನ್ನು ಮೊದಲು 15 ರಿಂದ ಗುಣಿಸಲಾಗುತ್ತದೆ. ಇದರ ನಂತರ, ಸೇವೆಯ ಒಟ್ಟು ವರ್ಷಗಳು ಮತ್ತು ನಂತರ ಪಡೆದ ಮೊತ್ತವನ್ನು 26 ರಿಂದ ಭಾಗಿಸುವ ಮೂಲಕ ನಿಮ್ಮ ಗ್ರಾಚ್ಯುಟಿ ಮೊತ್ತವನ್ನು ನೀಡಲಾಗುತ್ತದೆ .


ಗ್ರಾಚ್ಯುಟಿ ಲೆಕ್ಕಾಚಾರದ ಸೂತ್ರ
ಒಂದು ಸಾಲಿನಲ್ಲಿ ಗ್ರಾಚ್ಯುಟಿ ಮೊತ್ತವನ್ನು ಲೆಕ್ಕಾಚಾರ ಮಾಡಲು ಯಾರಾದರೂ ಸೂತ್ರವನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ಗ್ರಾಚ್ಯುಟಿಯನ್ನು ಈ ಮೂಲಕ ಲೆಕ್ಕ ಹಾಕಬಹುದು [(ಕೊನೆಯ ತಿಂಗಳ ಮೂಲ ವೇತನ + ತುಟ್ಟಿಭತ್ಯೆ) x 15 x ವರ್ಷಗಳ ಸೇವೆ] / 26.


ಇದನ್ನೂ ಓದಿ-Mobile Calling ನಿಯಮ ಬದಲಾವಣೆಗೆ ಮುಂದಾದ ಸರ್ಕಾರ, ಇನ್ಮುಂದೆ ಕಾಲ್ ಬಂದ ಮೇಲೆ ನಂಬರ್ ಜೊತೆ ಈ ಮಾಹಿತಿ ಕೂಡ ಸಿಗಲಿದೆ!


ಗ್ರ್ಯಾಚುಟಿ ಎಷ್ಟು ಸಿಗುತ್ತದೆ
ಇದನ್ನು ಒಂದು ಉದಾಹರಣೆಯ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ, ನೀವು ಕಂಪನಿಯಲ್ಲಿ 5 ವರ್ಷ ಮತ್ತು 2 ತಿಂಗಳು ಕೆಲಸ ಮಾಡುತ್ತಿದ್ದರೆ, ನಿಮ್ಮ ಐದು ವರ್ಷಗಳ ಸೇವೆಯನ್ನು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಕೆಲಸದ ಕೊನೆಯ ತಿಂಗಳ ಮೂಲ ವೇತನ ರೂ 26 ಸಾವಿರ ಎಂದು ಭಾವಿಸೋಣ. ಇದರ ಮೇಲೆ ನೀವು 13 ಸಾವಿರ ರೂ.ಗಳ ತುಟ್ಟಿಭತ್ಯೆಯನ್ನು ಪಡೆಯುತ್ತೀರಿ ಎಂದು ಭಾವಿಸೋಣ. ಗ್ರಾಚ್ಯುಟಿ  ಲೆಕ್ಕಾಚಾರ ಮಾಡಲು, ಮೊದಲು 26 ಸಾವಿರ ಮತ್ತು 13 ಸಾವಿರ ಮೊತ್ತವನ್ನು ಕಂಡುಹಿಡಿಯಿರಿ. ಇದನ್ನು ಕೂಡಿಸಿದಾಗ 39 ಸಾವಿರಕ್ಕೆ ಬರುತ್ತದೆ. ಈಗ ಈ ಮೊತ್ತವನ್ನು 15 ರಿಂದ ಗುಣಿಸಿದಾಗ ಒಟ್ಟು ಮೊತ್ತ 5.85 ಲಕ್ಷ ರೂ.ಗಲಾಗುತ್ತದೆ ಈಗ ಇದನ್ನು ಉದ್ಯೋಗದ ಒಟ್ಟು ವರ್ಷಗಳಿಂದ ಗುಣಿಸಿ ಅಂದರೆ 5, ಈ ಲೆಕ್ಕಾಚಾರವು 2,925,000 ಆಗುತ್ತದೆ. ಅಂತಿಮವಾಗಿ ಅದನ್ನು 26 ರಿಂದ ಭಾಗಿಸಿ. ಭಾಗಿಸಿದ ನಂತರ, ಮೊತ್ತವು 112,500 ರೂ.ಗೆ ಬಂದು ತಲುಪುತ್ತದೆ, ಇದು ನಿಮ್ಮ ನಿಜವಾದ ಗ್ರಾಚ್ಯುಟಿಯಾಗಿದೆ, ಇದನ್ನು ನೀವು ಕಂಪನಿಯಿಂದ ರಾಜೀನಾಮೆ ನೀಡಿದ ಮೇಲೆ ಪಡೆಯುವಿರಿ.


ಇದನ್ನೂ ಓದಿ-Whats App ಶೀಘ್ರದಲ್ಲೇ ಪಾಪ ಮಾಡುವವರಿಗೆ ಶಿಕ್ಷೆ ನೀಡಲಿದೆ!


ಗ್ರಾಚ್ಯುಟಿ ಎಂದರೇನು
ಗ್ರಾಚ್ಯುಟಿಯು ಉದ್ಯೋಗಿಯ ವೇತನದ ಭಾಗವಾಗಿದೆ, ಇದು ನಿಮ್ಮ ವರ್ಷಗಳ ಸೇವೆಗಳಿಗೆ ಪ್ರತಿಯಾಗಿ ಕಂಪನಿ ಅಥವಾ ನಿಮ್ಮ ಉದ್ಯೋಗದಾತ ನೀಡುತ್ತಾರೆ. ಗ್ರಾಚ್ಯುಟಿ ಎನ್ನುವುದು ನಿವೃತ್ತಿ ಪ್ರಯೋಜನಗಳ ಒಂದು ಭಾಗವಾಗಿರುವ ಒಂದು ಪ್ರಯೋಜನ ಯೋಜನೆಯಾಗಿದೆ ಮತ್ತು ಉದ್ಯೋಗವನ್ನು ತೊರೆದ ನಂತರ ಅಥವಾ ಉದ್ಯೋಗವನ್ನು ಮುಕ್ತಾಯಗೊಳಿಸಿದ ನಂತರ ಉದ್ಯೋಗದಾತರಿಂದ ನೀಡಲಾಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.