EPFO: ಮೊಬೈಲ್ ನಂಬರ್ ಬದಲಾಗಿದೆಯೇ? ನಿಮ್ಮ ಪಿಎಫ್ ಖಾತೆಯಲ್ಲಿ ಹೊಸ ಸಂಖ್ಯೆಯನ್ನು ಈ ರೀತಿ ನವೀಕರಿಸಿ!
EPFO: ಇಪಿಎಫ್‌ಓ ಖಾತೆಯಲ್ಲಿ ಮೊಬೈಲ್ ನಂಬರ್ ನೋಂದಾಯಿಸುವುದು ಮತ್ತು ಭವಿಷ್ಯದ ಉಪಯೋಗಕ್ಕಾಗಿ ಆ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿರಿಸುವುದು ಅತ್ಯಾವಶ್ಯಕ. ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಕೆಲವು ಸುಲಭ ವಿಧಾನಗಳನ್ನು ಬಳಸಿ ಇಪಿಎಫ್‌ಓ ಖಾತೆಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಬಹುದು.
Mobile Number Update in EPFO Account: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಸದಸ್ಯರಿಗೆ ಆನ್‌ಲೈನ್‌ನಲ್ಲಿ ಹೆಚ್ಚಿನ ಸೌಲಭ್ಯವನ್ನು ಒದಗಿಸುತ್ತದೆ. ಆದರೆ, ಈ ಸೌಲಭ್ಯವನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆ ಹೊಂದಿರುವುದು ಬಹಳ ಮುಖ್ಯ.
ವಾಸ್ತವವಾಗಿ, ಇಪಿಎಫ್‌ಓಗೆ (EPFO) ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಇಪಿಎಫ್‌ಓ ವೆಬ್‌ಸೈಟ್ ಅಥವಾ ಉಮಾಂಗ್ ಅಪ್ಲಿಕೇಶನ್ ಮೂಲಕ ಪೂರ್ಣಗೊಳಿಸಬಹುದು. ಆದರೆ, ಇದಕ್ಕಾಗಿ, ಪಿಎಫ್ ಖಾತೆಯಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯು ಸಕ್ರಿಯವಾಗಿರುವುದು ಅತ್ಯಗತ್ಯ. ಏಕೆಂದರೆ, ಇಪಿಎಫ್ಒ ಸಂಬಂಧಿಸಿದ ಯಾವುದೇ ಕೆಲಸವನ್ನು ಪೂರೈಸಬೇಕಾದರೆ ಇಪಿಎಫ್ಒ ಈ ಸಂಖ್ಯೆಗೆ ಓಟಿಪಿಯನ್ನು ಕಳುಹಿಸುತ್ತದೆ.
ಒಂದೊಮ್ಮೆ ನೀವು ಇಪಿಎಫ್ಒದಲ್ಲಿ ನೋಂದಾಯಿಸಲಾಗಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು (Mobile Number) ಬದಲಾಯಿಸಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಇಪಿಎಫ್‌ಓ ಖಾತೆಯಲ್ಲಿ (EPFO Account) ನಿಮ್ಮ ಹೊಸ ಮೊಬೈಲ್ ನಂಬರ್ ಅನ್ನು ನವೀಕರಿಸಬಹುದು.
ಇಪಿಎಫ್ಒ ಖಾತೆಯಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ (Follow the below steps to update new mobile number in EPFO account):
ಹಂತ-1: ಮೊದಲು ನಿಮ್ಮ ಲ್ಯಾಪ್‌ಟಾಪ್ ಅಥವಾ ಮೊಬೈಲ್‌ನಲ್ಲಿ ಯುಎಎನ್ ಪೋರ್ಟಲ್ https://unifiedportal-mem.epfindia.gov.in/memberinterface ಗೆ ಭೇಟಿ ನೀಡಿ.
ಹಂತ- 2: ನಿಗದಿತ ಜಾಗದಲ್ಲಿ ನಿಮ್ಮ ಯುಎಎನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಲಾಗಿನ್ ಆಗಿ.
ಹಂತ-3 : ಮುಂದಿನ ಪುಟದಲ್ಲಿ, ಮೇಲಿನ ಬಾರ್‌ನಲ್ಲಿರುವ ಮ್ಯಾನೇಜ್ ಟೂಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ಸಂಪರ್ಕ ವಿವರಗಳಿಗೆ ಹೋಗಿ.
ಹಂತ-4 : ನಂತರ ಚೆಕ್ ಮೊಬೈಲ್ ಸಂಖ್ಯೆ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ-5 : ಇಲ್ಲಿ ಕಾಣಿಸುವ ಹೊಸ ವಿಭಾಗದಲ್ಲಿ ನೀವು ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ಎರಡು ಬಾರಿ ನಮೂದಿಸಬೇಕಾಗುತ್ತದೆ.
ಹಂತ-6 : ಬಳಿಕ 'Get Authorization Pin' ಎಂಬ ಆಯ್ಕೆಯನ್ನು ಆರಿಸಿ.
ಹಂತ- 7: ಬಳಿಕ ನಿಮಗೆ ಪರದೆಯ ಮೇಲೆ ಹೊಸ ಸಂಖ್ಯೆ ಗೋಚರಿಸುತ್ತದೆ. ಈ ಸಂಖ್ಯೆಯಲ್ಲಿ ನೀವು 4 ಅಂಕಿಯ ಪಿನ್ ಅನ್ನು ಪಡೆಯುತ್ತೀರಿ.
ಹಂತ- 8 : ಬಳಿಕ ಪುಟದಲ್ಲಿರುವ ಖಾಲಿ ಬಾಕ್ಸ್‌ನಲ್ಲಿ ಹೊಸ ಫೋನ್ ಸಂಖ್ಯೆಯಲ್ಲಿ ಪಡೆಯಲಾದ ನಾಲ್ಕು ಅಂಕಿಯ ಪಿನ್ ಅನ್ನು ಭರ್ತಿ ನಮೂದಿಸಿ. ನಂತರ ಬದಲಾವಣೆಗಳನ್ನು ಸೇವ್ ಮಾಡಿ.
ಇದನ್ನೂ ಓದಿ- ಕೋಟ್ಯಂತರ ಎಸ್‌ಬಿಐ ಗ್ರಾಹಕರಿಗೆ ಗುಡ್ ನ್ಯೂಸ್: ಇಂದಿನಿಂದ ಹೊಸ ಬಡ್ಡಿದರ ಜಾರಿ!
ಮೇಲೆ ಉಲ್ಲೇಖಿಸಲಾದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಯುಎಎನ್ ಪೋರ್ಟಲ್‌ನಲ್ಲಿ ನಿಮ್ಮ ಹೊಸ ಸಂಖ್ಯೆಯನ್ನು ನವೀಕರಿಸಲಾಗುತ್ತದೆ. ಈ ಕುರಿತಂತೆ ನಿಮ್ಮ ಹೊಸ ನೋಂದಾಯಿತ ಸಂಖ್ಯೆಯಲ್ಲಿ ನೀವು ಇಪಿಎಫ್‌ಓ ನಿಂದ ಸಂದೇಶಗಳನ್ನು ಸ್ವೀಕರಿಸುವುದನ್ನು ಮುಂದುವರಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=O-hDphMYFMg
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.