ಆನ್‌ಲೈನ್‌ನಲ್ಲಿ EPFO ಬ್ಯಾಂಕ್ ಖಾತೆ ಸಂಖ್ಯೆ ಬದಲಾಯಿಸುವುದು, ನವೀಕರಿಸುವುದು ಹೇಗೆ..?
ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ತನ್ನ ಸದಸ್ಯರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ತನ್ನ ಸದಸ್ಯರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಪಾಸ್‌ಬುಕ್ ಪರಿಶೀಲಿಸುವುದು, ಇಪಿಎಫ್ ಫಂಡ್ ಮತ್ತು ಕ್ಲೈಮ್ ಸ್ಟಾಟಸ್ ಟ್ರ್ಯಾಕ್ ಮಾಡುವುದು, ತಮ್ಮ ಕ್ಲೈಮ್ ಅನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸುವುದು ಸೇರಿ ಅನೇಕ ಸೇವೆಗಳನ್ನು UAN ಪೋರ್ಟಲ್ ನಲ್ಲಿ ಪಡೆದುಕೊಳ್ಳಬಹುದು. ಅನೇಕರು ಆನ್‌ಲೈನ್‌ನಲ್ಲಿ ತಮ್ಮ EPFO ಬ್ಯಾಂಕ್ ಖಾತೆ ಸಂಖ್ಯೆ ಬದಲಾಯಿಸುವುದು, ನವೀಕರಿಸುವುದು ಹೇಗೆ ಎಂದು ತಲೆಕೆಡಿಸಿಕೊಂಡಿರುತ್ತಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ನಿಮ್ಮ ಬಳಿ ಈ ಹಳೆಯ ನೋಟುಗಳಿದ್ದರೆ ಸಿಗುತ್ತೆ 3 ಲಕ್ಷ ರೂ.: ಹೇಗೆಂದು ತಿಳಿಯಿರಿ...
ಬ್ಯಾಂಕ್ ಖಾತೆ ಬದಲಾಯಿಸುವ, ನವೀಕರಿಸುವ ಸುಲಭ ಮತ್ತು ಸರಳ ವಿಧಾನ ಇಲ್ಲಿದೆ.
- EPFO ಅಧಿಕೃತ ಪೋರ್ಟಲ್ ಗೆ ಲಾಗಿನ್ ಆಗಿ
- UAN ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ
- ಬಳಿಕ 'Menu' ಸೆಕ್ಷನ್ ಗೆ ಹೋಗಿ
- ಈಗ ‘MANAGE’ ಬಟನ್ ಮೇಲೆ ಕ್ಲಿಕ್ ಮಾಡಿ
- ಕೆಳಗಿರುವ KYC ಆಫ್ಶನ್ ಕ್ಲಿಕ್ ಮಾಡಿ
- ಇದೀಗ ಮತ್ತೊಂದು ಲ್ಯಾಂಡಿಂಗ್ ಪುಟ ತೆರೆಯುತ್ತದೆ
- ಈಗ ‘BANK’ ಆಪ್ಶನ್ ಕ್ಲಿಕ್ ಮಾಡಿ
- ಈಗ ನಿಮಗೆ ಈ ಕೆಳಗಿನ ಆಪ್ಶನ್ ದೊರೆಯುತ್ತವೆ
A) ಡ್ಯಾಕುಮೆಂಟ್ ನಂಬರ್(ಬ್ಯಾಂಕ್ ಅಕೌಂಟ್ ನಂಬರ್)
B) ಡ್ಯಾಕುಮೆಂಟ್ ನಲ್ಲಿರುವಂತೆ ನಿಮ್ಮ ಹೆಸರು( ಬ್ಯಾಂಕ್ ಪಾಸ್‌ಬುಕ್ ನಲ್ಲಿರುವಂತೆ ನಿಮ್ಮ ಹೆಸರು)
C) ಐಎಫ್‌ಎಸ್‌ಸಿ(IFSC) ಕೋಡ್
- ಅಗತ್ಯ ವಿವರಗಳನ್ನು ಭರ್ತಿ ಮಾಡಿ
- ಸೇವ್ ಬಟನ್ ಕ್ಲಿಕ್ ಮಾಡಿ
ಇದನ್ನೂ ಓದಿ: EPFO: ನಿಮ್ಮ ಪಿಎಫ್ ಖಾತೆ ಸಂಖ್ಯೆಯಲ್ಲಿ ಅಡಗಿರುವ ಈ ಪ್ರಮುಖ ಮಾಹಿತಿ ಬಗ್ಗೆ ತಿಳಿದಿದೆಯೇ?
ನೀವು ಈ ಎಲ್ಲ ಬದಲಾವಣೆಗಳನ್ನು ಮಾಡಿದ ಬಳಿಕ, ನಿಮ್ಮ ಆನ್‌ಲೈನ್ ಸೇವೆಯು ಅನುಮೋದನೆಗಾಗಿ KYC ಬಾಕಿ ಉಳಿದಿದೆ ಎಂದು ತೋರಿಸುತ್ತದೆ. ಇದರರ್ಥ ನೀವು ನವೀಕರಿಸಿದ ಬ್ಯಾಂಕ್ ವಿವರಗಳ ಪುರಾವೆಗಳನ್ನು ನಿಮ್ಮ ಉದ್ಯೋಗದಾತರಿಗೆ(Employer) ಸಲ್ಲಿಸಬೇಕಾಗುತ್ತದೆ. ನಿಮ್ಮ ಉದ್ಯೋಗದಾತರು ನಿಮ್ಮ KYC ನವೀಕರಣ ವಿನಂತಿಯನ್ನು ಅಂಗೀಕರಿಸಿದ ಬಳಿಕ, ನಿಮ್ಮ ಹೊಸ ಬ್ಯಾಂಕ್ ಖಾತೆಯನ್ನು ಸೇರಿಸಲಾಗುತ್ತದೆ ಅಥವಾ ಬದಲಾಯಿಸಲಾಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕವೂ ಈ ಕುರಿತು ನಿಮಗೆ ಸಂದೇಶವನ್ನು ರವಾನಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ