ಸ್ಯಾಲರಿ ಸ್ಲಿಪ್ ಇಲ್ಲದೆಯೂ ಪಡೆದುಕೊಳ್ಳಬಹುದು ಪರ್ಸನಲ್ ಲೋನ್ .!
Personal Loan Documents: ಸಾಲ ಪಡೆಯುವ ಉದ್ದೇಶದಿಂದ ಜನ ಬ್ಯಾಂಕ್ ಗಳತ್ತ ಮುಖ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಿದೆ.
Personal Loan Documents : ಇದು ದುಬಾರಿ ದುನಿಯಾ . ಎಷ್ಟು ಹಣವಿದ್ದರೂ ಯಾವ ರೀತಿಯಲ್ಲಿ ಖರ್ಚಾಗುತ್ತದೆ ಎಂದು ತಿಳಿಯುವುದೇ ಇಲ್ಲ. ಅಗತ್ಯಗಳನ್ನು ಪೂರೈಸಲು ಕೆಲವೊಮ್ಮೆ ಹೆಚ್ಚುವರಿ ಹಣದ ಅಗತ್ಯ ಬೀಳುತ್ತದೆ. ಹೀಗಾದಾಗ ಸಾಲ ಪಡೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಲ ಪಡೆಯುವ ಉದ್ದೇಶದಿಂದ ಜನ ಬ್ಯಾಂಕ್ ಗಳತ್ತ ಮುಖ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಿದೆ.
ಆನ್ಲೈನ್ ಪ್ರಕ್ರಿಯೆ :
ಬ್ಯಾಂಕ್‌ಗಳ ಮೂಲಕ ಸಾಲ ಪಡೆಯುವ ಪ್ರಕ್ರಿಯೆಯನ್ನು ಪ್ರಸ್ತುತ ಆನ್‌ಲೈನ್‌ನಲ್ಲಿಯೇ ಪೂರ್ಣಗೊಳಿಸಬಹುದು. ಆದರೆ ಸಾಲ ಪಡೆಯಬೇಕಾದರೆ, ಬ್ಯಾಂಕ್ ಗೆ ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅದರಲ್ಲೂ ಪರ್ಸನಲ್ ಲೋನ್ ಪಡೆಯುವ ವೇಳೆ ತುಸು ಹೆಚ್ಚೇ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆ ಡಾಕ್ಯುಮೆಂಟ್‌ಗಳು ಸ್ಯಾಲರಿ ಸ್ಲಿಪ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ : Sukanya Samriddhi Yojana : ಸುಕನ್ಯಾ ಸಮೃದ್ಧಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಹೊಸ ಗುಡ್ ನ್ಯೂಸ್!
ಸ್ಯಾಲರಿ ಸ್ಲಿಪ್ ಇಲ್ಲದೆ ಪಡೆಯಬಹುದು ಸಾಲ :
ಕಚೇರಿಗೆ ಕೆಲಸಕ್ಕೆ ತೆರಳುತ್ತಿದ್ದರೂ ಅನೇಕರಲ್ಲಿ ಸ್ಯಾಲರಿ ಸ್ಲಿಪ್ ಇರುವುದಿಲ್ಲ. ಕೆಲವು ಕಂಪನಿಗಳು ತನ್ನ ಉದ್ಯೋಗಿಗಳಿಗೆ ಸ್ಯಾಲರಿ ಸ್ಲಿಪ್ ನೀಡುವುದಿಲ್ಲ. ಹೀಗಾದಾಗ ಸಾಲ ಪಡೆಯುವ ವೇಳೆ ಸ್ಯಾಲರಿ ಸ್ಲಿಪ್ ನೀಡುವುದು ಸಾಧ್ಯವಾಗುವುದಿಲ್ಲ. ಸ್ಯಾಲರಿ ಸ್ಲಿಪ್ ಇಲ್ಲದೆ ಹೋದಾಗ ಬ್ಯಾಂಕ್ ನಿಂದ ಪರ್ಸನಲ್ ಲಪನ್ ಪಡೆಯುವುದು ಹೇಗೆ ಎನ್ನುವ ಗೊಂದಲ ಜನರನ್ನು ಕಾಡುತ್ತದೆ.
ಈ ರೀತಿ ಸಾಲ ಪಡೆಯಬಹುದು :
ಸ್ಯಾಲರಿ ಸ್ಲಿಪ್ ಇಲ್ಲದೆ ಹೋದರೂ ಕೂಡಾ ಬ್ಯಾಂಕ್ ನಿಂದ ಪರ್ಸನಲ್ ಲೋನ್ ಪಡೆಯುವುದು ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ ಆದಾಯದ ಪುರಾವೆಯಾಗಿ ಬ್ಯಾಂಕ್ ಖಾತೆಯ ವಿವರಗಳು/ಫಾರ್ಮ್ 16/ ಎಂಪ್ಲೋಯೀ ಐಡಿಯ ನಕಲು ಪ್ರತಿಗಳನ್ನು ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ : Arecanut Today Price: ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ದರ ಹೇಗಿದೆ ನೋಡಿ
ವೈಯಕ್ತಿಕ ದಾಖಲೆಗಳು :
ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವ ಮುನ್ನ ಬ್ಯಾಂಕ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ. ಏಕೆಂದರೆ ಬ್ಯಾಂಕಿನಿಂದ ಬ್ಯಾಂಕ್ ಗೆ ಈ ದಾಖಲೆಯ ಪಟ್ಟಿ ಭಿನ್ನವಾಗಿರಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.