Credit Card Benefits : ಇಂದಿನ ಯುಗದಲ್ಲಿ ಜನ ಕ್ರೆಡಿಟ್ ಕಾರ್ಡ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಜನರಿಗೆ ಸಾಕಷ್ಟು ಅನುಕೂಲಗಳಾಗುತ್ತಿವೆ. ಆದರೆ, ಕ್ರೆಡಿಟ್ ಕಾರ್ಡ್ ಬಳಕೆಯಿಂದ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಕಾಲಕ್ಕೆ ಪಾವತಿಸದಿದ್ದರೆ, ಜನರು ಸಮಸ್ಯೆಗಳು ತಪ್ಪಿದಲ್ಲ. ಹೀಗಾಗಿ, ನೀವು ಕ್ರೆಡಿಟ್ ಕಾರ್ಡ್ ಅನ್ನು ಏಕೆ ಬಳಸಬೇಕು ಮತ್ತು ಎಷ್ಟು ಅಗತ್ಯವಿದೆ ಎಂಬುದರ ಕುರಿತು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಆಯ್ಕೆಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. ಆ ಟಿಪ್ಸ್ ಯಾವವು ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಯೋಚಿಸದೆ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬೇಡಿ


ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವಾಗ ಜನ ಯೋಚಿಸದೆ ತೆಗೆದುಕೊಳ್ಳುತ್ತಾರೆ. ಇದರಿಂದ ಆಮೇಲೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಕ್ಕಾಗಿ ಕ್ರೆಡಿಟ್ ತೆಗೆದುಕೊಳ್ಳುವಾಗ ಕೆಲವು ವಿಷಯಗಳನ್ನು ಕಾಳಜಿ ವಹಿಸಬೇಕು. ಇದರೊಂದಿಗೆ, ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳನ್ನು ನಿಮ್ಮ ಅಗತ್ಯಗಳೊಂದಿಗೆ ಸಮನ್ವಯಗೊಳಿಸಬಹುದು. ಅದಕ್ಕೆ, ಈ ಏಳು ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಉತ್ತರಗಳನ್ನು ಪರಿಶೀಲಿಸಿ. ಅದಕ್ಕೆ ಅನುಗುಣವಾಗಿ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಬೇಕು.


ಇದನ್ನೂ ಓದಿ : Ration Card : ಪಡಿತರ ಚೀಟಿಯಿಂದ ಬಡವರಿಗಿದೆ ಸರ್ಕಾರದ ಈ ಪ್ರಯೋಜನಗಳು!


ಅತ್ಯುತ್ತಮ ಕ್ರೆಡಿಟ್ ಕಾರ್ಡ್‌ಗಾಗಿ 7 ಪ್ರಶ್ನೆಗಳು


- ನಿಮ್ಮ ಆಯ್ಕೆಗಳು ಯಾವುವು (ವಿಶೇಷವಾಗಿ ನೀವು ಕ್ರೆಡಿಟ್‌ಗೆ ಹೊಸಬರಾಗಿದ್ದರೆ)?
- ನೀವು ಈಗಾಗಲೇ ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ?
- ನೀವು ಯಾವ ರೀತಿಯ ಮೌಲ್ಯವನ್ನು ಮರಳಿ ಬಯಸುತ್ತೀರಿ - ಬಹುಮಾನಗಳು, ಕ್ಯಾಶ್‌ಬ್ಯಾಕ್ ಅಥವಾ ಏರ್ ಮೈಲ್‌ಗಳು?
- ಯಾವ ರೀತಿಯ ಖರೀದಿಗಳಿಗೆ ಹೆಚ್ಚಿನ ಮೌಲ್ಯವನ್ನು ಮರಳಿ ಪಡೆಯಲು ನೀವು ಬಯಸುತ್ತೀರಿ?
- ನೀವು ನಿರ್ದಿಷ್ಟ ಏರ್‌ಲೈನ್, ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಥವಾ ಬ್ರ್ಯಾಂಡ್‌ನ ಅಭಿಮಾನಿಯಾಗಿದ್ದೀರಾ?
- ಕ್ರೆಡಿಟ್ ಕಾರ್ಡ್ ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಸರಿಯಾದ ಪ್ರಯೋಜನಗಳೊಂದಿಗೆ ಬಂದರೆ ನೀವು ವಾರ್ಷಿಕ ಶುಲ್ಕವಾಗಿ ನಿಗದಿತ ಮೊತ್ತವನ್ನು ಪಾವತಿಸಲು ಸಿದ್ಧರಿದ್ದೀರಾ?
- ನೀವು ಸಾಕಷ್ಟು ಖರ್ಚು ಮಾಡುತ್ತಿದ್ದೀರಾ ಮತ್ತು ಶುಲ್ಕ ವಿನಾಯಿತಿ ಅಥವಾ ಇತರ ಪ್ರಯೋಜನಗಳನ್ನು ಪಡೆಯಲು ಖರ್ಚು ಮಿತಿಯನ್ನು ಪೂರೈಸಲು ಸಾಧ್ಯವಾಗುತ್ತದೆಯೇ?


ಈ ಮೇಲಿನ ಏಳು ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದ್ದರೆ ನೀವು ಕ್ರೆಡಿಟ್ ಕಾರ್ಡ್ ಅನ್ನು ತೆಗೆದುಕೊಳ್ಳಬಹುದು.


ಇದನ್ನೂ ಓದಿ : PM Kisan Yojana : ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಪಿಎಂ! ಖಾತೆಗೆ ಬರಲಿದೆ ₹15 ಲಕ್ಷ, ಹೀಗೆ ಅರ್ಜಿ ಹಾಕಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.