How to Sell Old Coins or Notes : ನಮ್ಮ ಮನೆಗಳಲ್ಲಿ ಯಾವುದೋ ಒಂದು ಡಬ್ಬದಲ್ಲಿ ಅಥವಾ ಯಾವುದೋ ಒಂದು ಹಳೆಯ ಪರ್ಸ್ ನಲ್ಲಿ ಹಳೆಯ ನಾಣ್ಯಗಳು ಅಥವಾ ನೋಟುಗಳನ್ನು ಇಟ್ಟಿರುತ್ತೇವೆ.   ಆ ನಾಣ್ಯಗಳು ಚಲಾವಣೆಯಲ್ಲಿ ಇಲ್ಲದ ಅದನ್ನು ನಿಷ್ಪ್ರಯೋಜಕವೆಂದು ಪರಿಗಣಿಸುತ್ತೇವೆ. ನೀವೂ ಈ ರೀತಿ ಯೋಚಿಸುತ್ತಿದ್ದರೆ  ನಿಮ್ಮ ಯೋಚನೆ ತಪ್ಪು.  ಆ ನಾಣ್ಯಗಳು ಮತ್ತು ನೋಟುಗಳ ಸಹಾಯದಿಂದ ಲಕ್ಷಾಧಿಪತಿಯಾಗುವ ನಿಮ್ಮ ಕನಸು ನನಸಾಗಬಹುದು. ಅನೇಕರಿಗೆ ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಇರುತ್ತದೆ. ಇದಕ್ಕಾಗಿ ಅವರು ದುಬಾರಿ ಹಣ ನೀಡಿ ಹಳೆಯ ನೋಟು ಮತ್ತು ನಾಣ್ಯಗಳನ್ನು ಕೊಂಡು ಕೊಳ್ಳಲು ಮುಂದಾಗುತ್ತಾರೆ. 


COMMERCIAL BREAK
SCROLL TO CONTINUE READING

ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡಬಹುದು : 
ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅನೇಕ ವೇದಿಕೆಗಳಿವೆ (Old Coins Note Busines).ಅಲ್ಲಿ ನೀವು ಹಳೆಯ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ,  ಲಕ್ಷ ರೂಪಾಯಿಗಳ ಒಡೆಯರಾಗಬಹುದು. ಇಂದು ನಾವು  2 ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಹೇಳಲಿದ್ದೇವೆ. ಅದನ್ನು ಬಳಸಿಕೊಂಡು  ಸಿರಿವಂತರಾಗಬೇಕು ಎನ್ನುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು.  ವಿಶೇಷವೆಂದರೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನಾಣ್ಯಗಳನ್ನು ಅಥವಾ ನೋಟ್ ಗಳನ್ನು ಮಾರಾಟ ಮಾಡಲು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಮೂಲಕವೇ ನೋಂದಾಯಿಸಿಕೊಳ್ಳಬಹುದು. 


ಇದನ್ನೂ ಓದಿ : ಭಾರತದ ಅತ್ಯಂತ ಶ್ರೀಮಂತ ರೈತ ಯಾರು ಗೊತ್ತಾ..? ಇವರೇ ನೋಡಿ..


quikr ನಲ್ಲಿ ನಾಣ್ಯಗಳನ್ನು ಮಾರಾಟ : 
ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡಲು, ನೀವು Quikr ಅಪ್ಲಿಕೇಶನ್ ಅಥವಾ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. Google Play Storeನಲ್ಲಿ ನೀವು ಈ ಅಪ್ಲಿಕೇಶನ್ ಅನ್ನು ಸುಲಭವಾಗಿ ಕಾಣಬಹುದು. ನೋಂದಣಿ ಪೂರ್ಣಗೊಂಡ ನಂತರ, ಮಾರಾಟ ಮಾಡಲು ಬಯಸುವ ನಾಣ್ಯ ಅಥವಾ ನೋಟಿನ (Old Coins Note Busines) ಫೋಟೋವನ್ನು  ಅಪ್‌ಲೋಡ್ ಮಾಡಬೇಕಾಗುತ್ತದೆ. ಇದರ ನಂತರ, ಆ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸಲು ಸಿದ್ಧರಿರುವ ಖರೀದಿದಾರರು, ನಿಮ್ಮ ಇಮೇಲ್ ಅಥವಾ ಫೋನ್ ಸಂಖ್ಯೆಯ ಮೂಲಕ ತಮ್ಮನ್ನು ಸಂಪರ್ಕಿಸುತ್ತಾರೆ. 


Coinbazzar.com : 
ನೀವು ಬಯಸಿದರೆ Coinbazzar.comವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ನಿಮ್ಮ ಹಳೆಯ ನಾಣ್ಯಗಳು ಅಥವಾ ನೋಟುಗಳನ್ನು ((Old Coins Note Busines)ಮಾರಾಟ ಮಾಡಬಹುದು. ನೀವು ಈ ಸೈಟ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಅವುಗಳನ್ನು ನೋಂದಾಯಿಸುವ ವಿಧಾನವು Quikrನಂತೆಯೇ ಇರುತ್ತದೆ. ಎಲ್ಲಾ ನಾಣ್ಯಗಳು ಮತ್ತು ನೋಟುಗಳ ಮೌಲ್ಯವು ವಿಭಿನ್ನವಾಗಿರುತ್ತದೆ ಎನ್ನುವುದನ್ನು ನೀವು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು. ಉದಾಹರಣೆಗೆ, ನಾಣ್ಯ ಎಷ್ಟು ಹಳೆಯದಾಗಿರುತ್ತದೆ ಸಿಗುವ ಮೊತ್ತ ಕೂಡಾ ಹೆಚ್ಚಾಗಿರುತ್ತದೆ.  ಇದರೊಂದಿಗೆ 786 ನಂಬರ್ ಅಥವಾ ಟ್ರ್ಯಾಕ್ಟರ್ ನಂತಹ ಹಳೆಯ ಗುರುತು ಇರುವ ನಾಣ್ಯ ಅಥವಾ ನೋಟುಗಳಿಗೆ ಲಕ್ಷದವರೆಗೂ ಬೆಲೆ ನೀಡುತ್ತಾರೆ.    


ಇದನ್ನೂ ಓದಿ :  ಮೈಸೂರು ಕಾಗದ ಕಾರ್ಖಾನೆ ಪುನಾರಂಭಕ್ಕೆ ಮುಂದಾದ ಸಚಿವ ಎಂ ಬಿ ಪಾಟೀಲ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.